ಹೊಸ ಯೋಜನೆಗಳಿಲ್ಲದೇ ಬಿಬಿಎಂಪಿ 2023-24ನೇ ಸಾಲಿನ ಬಜೆಟ್‌ ಮಂಡನೆ: 11,157 ಕೋಟಿ ರೂ. ಗಾತ್ರ ಸತತ 3ನೇ ವರ್ಷ ಜನಪ್ರತಿನಿಧಿಗಳಲ್ಲದೆ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಈ ವರ್ಷವೂ ಕೂಡ 11,157 ಕೋಟಿ ರೂ. ಗಾತ್ರದ ಬಿಎಂಪಿ 2023-24ನೇ ಸಾಲಿನ ಬಜೆಟ್‌ ಅನ್ನು ಐಎಎಸ್‌ ಅಧಿಕಾರಿಗಳು ಮಂಡನೆ ಮಾಡಿದ್ದಾರೆ. ಬೆಂಗಳೂರು (ಮಾ.02):ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ 2023-24ನೇ ಸಾಲಿನಲ್ಲಿ ಬರೋಬ್ಬರಿ 11,157 ಕೋಟಿ ರೂ. ಮೊತ್ತದ ಆಯವ್ಯಯ ಮಂಡನೆ ಮಾಡಿದರು. ರಾಜ್ಯದ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಅತ್ಯಂತ ದೊಡ್ಡದಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸುಮಾರು 1.30 ಕೋಟಿ ಜನಸಂಖ್ಯೆಯಿದೆ. ಆದರೆ, ಕಳೆದ ಮೂರು ವರ್ಷಗಳಿಂದ ಯಾವೊಬ್ಬ ಜನಪ್ರತಿನಿಧಿಗಳೂ ಇಲ್ಲದೇ ಆಡಳಿತಾಧಿಕಾರಿ ನೇತೃತ್ವದಲ್ಲಿಯೇ ಬಜೆಟ್‌ ಮಂಡನೆ ಮಾಡಲಾಗುತ್ತಿದೆ. ಈ ವರ್ಷವೂ ಕೂಡ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ಸಿಂಗ್‌ ಹಾಗೂ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ನೇತೃತ್ವದಲ್ಲಿ ಹಣಕಾಸು ಆಯುಕ್ತ ಜಯರಾಂ ರಾಯಪುರ 2023-24ನೇ ಸಾಲಿನ ಬಜೆಟ್‌ ಮಂಡನೆ ಮಾಡಿದ್ದಾರೆ. ಇನ್ನು ರಾಜಸ್ವ ಸ್ವೀಕೃತಿಗಿಂದ ಕಡಿಮೆ ವೆಚ್ಚದ 11,157 ಕೋಟಿ ರೂ. ಗಾತ್ರದ ಉಳಿತಾಯ ಬಜೆಟ್‌ ಮಂಡನೆ ಮಾಡಿದ್ದಾರೆ. ಆರ್ಥಿಕ ಶಿಸ್ತಿಗೆ ಈ ಬಾರಿಯೂ ಬಿಬಿಎಂಪಿ ತಿಲಾಂಜಲಿ..! ಯಾವುದಕ್ಕೆ ಎಷ್ಟು ಹಣ ಹಂಚಿಕೆ ಮಾಡಲಾಗಿದೆ: ಬೆಂಗಳೂರಿನ 243 ವಾರ್ಡ್‌ಗಳ ನಿರ್ವಹಣೆ ಕೆಲಸಗಳಿಗಾಗಿ ಪ್ರತಿ ವಾರ್ಡಗೆ ರೂ.75 ಲಕ್ಷದಂತೆ ಒಟ್ಟಾರೆ ರೂ.182.25 ಕೋಟಿಗಳು1. ಪ್ರತಿ ವಾರ್ಡ್ ಗೆ ಹೂಳೆತ್ತುವ ಕಾಮಗಾರಿಗಳಿಗೆ ರೂ.30 ಲಕ್ಷಗಳು2. ಪ್ರತಿ ವಾರ್ಡ್ ಗೆ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳಿಗೆ ರೂ.15 ಲಕ್ಷಗಳು3. ಪ್ರತಿ ವಾರ್ಡ್ ಗೆ ಪಾದವಾರಿ ಮಾರ್ಗಗಳ ದುರಸ್ತಿ ಕಾಮಗಾರಿಗಳಿಗೆ ರೂ.25 ಲಕ್ಷಗಳು4. ಮಳೆಗಾಲ ನಿರ್ವಹಣೆಗಾಗಿ ರೂ.5 ಲಕ್ಷಗಳು. ಬೃಹತ್‌ ಮಳೆನೀರುಗಾಲುವೆಗಳ ನಿರ್ವಹಣೆಗೆ 70.20 ಕೋಟಿ ರೂ. ಮೀಸಲುತುರ್ತು ಮಳೆಗಾಲ ಕಾಮಗಾರಿಗಳಿಗಾಗಿ ರೂ.15 ಕೋಟಿಈ ಪೈಕಿ ಹೊಸ ವಲಯಗಳಿಗೆ ತಲಾ 2 ಕೋಟಿ ರೂ. ಹಾಗೂ ಹಳೆ ವಲಯಗಳಿಗೆ ರೂ.1 ಕೋಟಿ ಮೀಸಲು ಇಡಲಾಗಿದೆ. ಬೆಂಗಳೂರಿನ ಎಲ್ಲ ವಾರ್ಡ್‌ನಲ್ಲೂ ಮರ ಗಣತಿಗೆ ಸಿದ್ಧತೆ ಬಿಬಿಎಂಪಿ ನಿರ್ವಹಣಾ ಕಾರ್ಯಗಳಿಗೆ ಅನುದಾನ ಹಂಚಿಕೆ: