ಉತ್ಪಾದನಾ ವಲಯದಲ್ಲಿ ಕುಸಿತ: 3ನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಕೇವಲ ಶೇ. 4.4 ಏರಿಕೆ 2022-23ರ ಮೂರನೇ ತ್ರೈಮಾಸಿಕದಲ್ಲಿನ ಪ್ರಸ್ತುತ ಬೆಲೆಗಳಲ್ಲಿ ಜಿಡಿಪಿಯನ್ನು 69.38 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಆದರೆ 2021-22 ರಲ್ಲಿ ಮೂರನೇ ತ್ರೈಮಾಸಿಕದ ಜಿಡಿಪಿ 62.39 ಲಕ್ಷ ಕೋಟಿಗ ರೂ. ಗಳಷ್ಟಿತ್ತು. ನವದೆಹಲಿ (ಮಾರ್ಚ್‌ 1, 2023):ಉತ್ಪಾದನಾ ವಲಯದಲ್ಲಿ ಸಾಧಾರಣ ಸಾಧನೆಯಿಂದಾಗಿ 3ನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಕೇವಲ ಶೇ.4.4 ರಷ್ಟು ಮಾತ್ರ ಏರಿಕೆ ಕಂಡಿದೆ. ಹೀಗಾಗಿ 2022-23ನೇ ಸಾಲಿನ ಒಟ್ಟಾರೆ ಜಿಡಿಪಿ ಬೆಳವಣಿಗೆ ದರವನ್ನು ಶೇ.7ಕ್ಕೆ ಇಳಿಕೆ ಮಾಡಲಾಗಿದೆ. 2021-22ರಲ್ಲಿ ಭಾರತ ಜಿಡಿಪಿ ಪ್ರಗತಿ ದರವನ್ನು ಮೊದಲು ಶೇ. 8.7ಕ್ಕೆ ಅಂದಾಜಿಸಿ ನಂತರ ಶೇ. 9.1ಕ್ಕೆ ಪರಿಷ್ಕರಿಸಲಾಗಿತ್ತು. ಅದಕ್ಕೆ ಹೋಲಿಸಿದರೆ 2022-23ನೇ ಸಾಲಿನಲ್ಲಿ ಪ್ರಗತಿ ದರ ಶೇ. 2.1 ರಷ್ಟು ಇಳಿಯಬಹುದು ಎಂದು ಅಂದಾಜಿಸಲಾಗಿದೆ. 2021ರ ಅಕ್ಟೋಬರ್‌ - ಡಿಸೆಂಬರ್‌ ತ್ರೈಮಾಸಿಕದಲ್ಲಿ ಜಿಡಿಪಿ () ಶೇ.11.2 ರಷ್ಟು ಹಾಗೂ 2022ರ ಜುಲೈ - ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ.6.3 ರಷ್ಟು ಏರಿಕೆ ಕಂಡಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ( ) ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ಉತ್ಪಾದನಾ ವಲಯ ( ) ಸತತ 2ನೇ ತ್ರೈಮಾಸಿಕದಲ್ಲಿ ಕುಸಿತ ಕಂಡಿದ್ದು ಹಾಗೂ ಇದರಿಂದ ಉದ್ಯೋಗ ನಷ್ಟ ಭೀತಿ ಉಂಟಾಗಿದ್ದು ಜಿಡಿಪಿ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. 2011 - 12ರ ಸ್ಥಿರ ಬೆಲೆಗಳಲ್ಲಿ 2022 - 23ರ ಮೂರನೇ ತ್ರೈಮಾಸಿಕದ ಜಿಡಿಪಿ 40. 19 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಆದರೆ 2021-22 ರಲ್ಲಿ ಮೂರನೇ ತ್ರೈಮಾಸಿಕದ ಜಿಡಿಪಿ 38.51 ಲಕ್ಷ ಕೋಟಿ ರೂ. ಆಗಿತ್ತು. ಇದು ಕಳೆದ ಬಾರಿಗಿಂತ ಶೇ. 4.4 ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ. ಇದನ್ನು ಓದಿ:ಸತತ 6ನೇ ಬಾರಿಗೆ ಬಡ್ಡಿ ಏರಿಕೆ ಬರೆ: ರೆಪೋ ದರ ಶೇ. 6.5ಕ್ಕೆ ಹೆಚ್ಚಿಸಿದ ಆರ್‌ಬಿಐ 2022-23ರ ಮೂರನೇ ತ್ರೈಮಾಸಿಕದಲ್ಲಿನ ಪ್ರಸ್ತುತ ಬೆಲೆಗಳಲ್ಲಿ ಜಿಡಿಪಿಯನ್ನು 69.38 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಆದರೆ 2021-22 ರಲ್ಲಿ ಮೂರನೇ ತ್ರೈಮಾಸಿಕದ ಜಿಡಿಪಿ 62.39 ಲಕ್ಷ ಕೋಟಿಗ ರೂ. ಗಳಷ್ಟಿತ್ತು. ಒಟ್ಟಾರೆ ಇದು ಶೇ. 11.2 ಬೆಳವಣಿಗೆಯನ್ನು ತೋರಿಸುತ್ತದೆ ಎಂದು ಸರ್ಕಾರದ ಪತ್ರಿಕಾ ಪ್ರಕಟಣೆ ತಿಳಿಸಿದೆ. ಸಾಂಕ್ರಾಮಿಕ-ಸಂಬಂಧಿತ ಅಂಕಿಅಂಶಗಳ ವಿರೂಪಗಳಿಂದಾಗಿ ಆರ್ಥಿಕ ವರ್ಷ 2023 ರ ಮೊದಲ ತ್ರೈಮಾಸಿಕದಲ್ಲಿ 13.5 ಶೇಕಡಾದಿಂದ ಕಳೆದ ತ್ರೈಮಾಸಿಕದಲ್ಲಿ ಜಿಡಿಪಿಯನ್ನು ಶೇಕಡ 6.3 ಕ್ಕೆ ಕುಸಿತ ಕಂಡಿತ್ತು. ಇನ್ನೊಂದೆಡೆ, ಉತ್ಪಾದನಾ ವಲಯವು ಕಳೆದ ತ್ರೈಮಾಸಿಕಕ್ಕಿಂತ ಶೇಕಡಾ 1.1 ರಷ್ಟು ಕುಗ್ಗಿದ್ದು, ಕಳೆದ ತ್ರೈಮಾಸಿಕದಲ್ಲಿ ಶೇಕಡಾ 3.6 ರಷ್ಟು ಇತ್ತು. ಈ ಮದ್ಯೆ, ಕೃಷಿ ವಲಯವು ಮೂರನೇ ತ್ರೈಮಾಸಿಕದಲ್ಲಿ 3.7 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ ಮತ್ತು ಎರಡನೇ ತ್ರೈಮಾಸಿಕದಲ್ಲಿ ಶೇ. 2.4 ರಷ್ಟು ದಾಖಲಿಸಿತ್ತು. ಇನ್ನು, ಗಣಿಗಾರಿಕೆ ವಲಯವು ಹಿಂದಿನ ತ್ರೈಮಾಸಿಕದಲ್ಲಿ 0.4 ರಷ್ಟು ಸಂಕೋಚನಕ್ಕೆ ಹೋಲಿಸಿದರೆ, ಈ ಬಾರಿ ಮೂರನೇ ತ್ರೈಮಾಸಿಕ ಅವಧಿಯಲ್ಲಿ 3.7 ಶೇಕಡಾಕ್ಕೆ ಏರಿದೆ. ಇದು Q2 ನಲ್ಲಿ ಕ್ರಮವಾಗಿ 6% ಮತ್ತು 5.8% ಕ್ಕಿಂತ Q3 ಅವಧಿಯಲ್ಲಿ ವಿದ್ಯುತ್ ಮತ್ತು ನಿರ್ಮಾಣ ಕ್ಷೇತ್ರಗಳು ಕ್ರಮವಾಗಿ 8.2% ಮತ್ತು 8.4% ರಷ್ಟು ಏರಿಕೆ ಕಂಡಿವೆ. ಇದನ್ನೂ ಓದಿ: : 2022-23ರಲ್ಲಿ ದೇಶದ ಜಿಡಿಪಿ ಶೇ. 7ರಷ್ಟು ಬೆಳವಣಿಗೆ ಎಂದ ಆರ್ಥಿಕ ಸಮೀಕ್ಷೆ!