2023: ಕೃಷಿಗೆ ಭರಪೂರ ಕೊಡುಗೆ; ನಿರ್ಮಲಾ ಬಜೆಟ್‌ನಿಂದ ರೈತರಿಗೆ ಸಿಗಲಿದೆ ಈ ಪ್ರಯೋಜನಗಳು..! ಹೈನುಗಾರಿಕೆ, ಮೀನುಗಾರಿಕೆ ಮತ್ತು ಪಶುಸಂಗೋಪನೆಗೆ ಒತ್ತು ನೀಡುವ ಮೂಲಕ ಕೃಷಿ ಸಾಲವನ್ನು 20 ಲಕ್ಷ ಕೋಟಿಗೆ ಹೆಚ್ಚಿಸಲು ಮೋದಿ ಸರ್ಕಾರ ಬಯಸಿದೆ. ನವದೆಹಲಿ (ಫೆಬ್ರವರಿ 1 , 2023): ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದೇ ರೀತಿ, ಕೇಂದ್ರ ಬಜೆಟ್ 2023 - 24 ರಲ್ಲಿ ಸಹ ರೈತರಿಗೆ ಬಂಪರ್‌ ಕೊಡುಗೆಗಳನ್ನು ಘೋಷಿಸಲಾಗಿದೆ. ಕೃಷಿ ವ್ಯವಹಾರಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2023 ರ ಬಜೆಟ್‌ನಲ್ಲಿ ಕೃಷಿ ವೇಗವರ್ಧಕ ನಿಧಿಯನ್ನು ಘೋಷಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ, ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ವೆಚ್ಚ-ಪರಿಣಾಮಕಾರಿ ಪರಿಹಾರಗಳನ್ನು ಜಾರಿಗೆ ತರಲು ಈ ಕೇಂದ್ರ ಬಜೆಟ್ ಪ್ರಯತ್ನಿಸುತ್ತದೆ. ಕೇಂದ್ರ ಸರ್ಕಾರವು ( ) ಸಣ್ಣ ಮತ್ತು ಅತಿ ಸಣ್ಣ ರೈತರ ಸಹಕಾರಿ ಆಧಾರಿತ ಆರ್ಥಿಕ ಅಭಿವೃದ್ಧಿ ಮಾದರಿಗಳನ್ನು ಸ್ಥಾಪಿಸಿದೆ ಮತ್ತು ಸುಮಾರು 63 ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು ಡಿಜಿಟಲ್ ಮಾಡಲು ಸಾಧ್ಯವಾಯಿತು ಎಂದು ಬುಧವಾರದ ಬಜೆಟ್‌ ಭಾಷಣದ ( ) ವೇಳೆ ನಿರ್ಮಲಾ ಸೀತಾರಾಮನ್ ( ) ಹೇಳಿದ್ದಾರೆ. ಇದನ್ನು ಓದಿ:ಟೆಕ್ ಉದ್ಯಮಕ್ಕೆ ಈ ಬಾರಿಯ ಮೋದಿ ಲೆಕ್ಕಾಚಾರದಲ್ಲಿ ಏನೆಲ್ಲ ಇದೆ ನೋಡಿ..? 2023ರ ಬಜೆಟ್‌ನಿಂದ ರೈತರಿಗಾಗುವ ದೊಡ್ಡ ಲಾಭಗಳು..! ಇದನ್ನೂ ಓದಿ: 2023: ಮದ್ಯಮ ವರ್ಗದ ಬಯಕೆ ಈಡೇರಿಸಿದ ನಿರ್ಮಲಾ, 7 ಲಕ್ಷ ರೂ.ಆದಾಯಕ್ಕೆ ತೆರಿಗೆ ಇಲ್ಲ ಇದನ್ನೂ ಓದಿ: 2023: ಒಂದು ಜಿಲ್ಲೆ, ಒಂದು ಉತ್ಪನ್ನ; ಪ್ರವಾಸೋದ್ಯಮಕ್ಕೆ ಸರ್ಕಾರದ ಚೈತನ್ಯ!