2023 ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿನ ಅತೀ ದೊಡ್ಡ ಘೋಷಣೆ ಪಟ್ಟಿ! ಕೇಂದ್ರ ಬಜೆಟ್ ಮಂಡನೆಯಾಗಿದೆ. ಇದರ ಮೇಲೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. ಇದೀಗ ಬಜೆಟ್ ಭಾರಿ ಚರ್ಚೆಯಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಹಲವು ವಿಶೇಷತಗಳಿವೆ. ಜೊತೆಗೆ ಅತೀ ದೊಡ್ಡ ಘೋಷಣೆಗಳಿವೆ. ನವದೆಹಲಿ(ಫೆ.01):ಕೇಂದ್ರ ಬಜೆಟ್ ಮಂಡನೆಯಾದ ಬೆನ್ನಲ್ಲೇ ಇದೀಗ ಭಾರಿ ಚರ್ಚೆಗೆ ಒಳಪಟ್ಟಿದೆ. ಹಲವರು ಐತಿಹಾಸಿಕ ಬಜೆಟ್ ಎಂದು ಘೋಷಿಸಿದ್ದರೆ, ವಿಪಕ್ಷಗಳು ಇದು ಎಲೆಕ್ಷನ್ ಘೋಷಣಾ ಬಜೆಟ್ ಎಂದು ಟೀಕಿಸಿದೆ. ಇದರ ನಡುವೆ ಆರ್ಥಿಕ ತಜ್ಞರು ಕೇಂದ್ರದ ಬಜೆಟ್ ಮೇಲೆ ವಿಶ್ಲೇಷಣೆ ಮಾಡಿದ್ದಾರೆ. ಇಷ್ಟೇ ಅಲ್ಲ ಈ ಬಾರಿಯ ಬಜಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಕೆಲ ಅತೀ ದೊಡ್ಡ ಘೋಷಣೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಘೋಷಣೆಗಳು ಹೊಸ ಭಾರತದ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿನ ಅತೀ ದೊಡ್ಡ ಘೋಷಣೆ ಹಾಗೂ ವಿಶೇಷತೆಗಳ ಪಟ್ಟಿ ಇಲ್ಲಿದೆ. ಮದ್ಯಮ ವರ್ಗದ ಬಯಕೆ ಈಡೇರಿಸಿದ ನಿರ್ಮಲಾ, 7 ಲಕ್ಷ ರೂ.ಆದಾಯಕ್ಕೆ ತೆರಿಗೆ ಇಲ್ಲ