:ಫೆಬ್ರವರಿಯಲ್ಲಿ 10 ದಿನ ಬ್ಯಾಂಕ್ ರಜೆ; ಆರ್ ಬಿಐ ರಜಾಪಟ್ಟಿ ಹೀಗಿದೆ ನೋಡಿ ಪ್ರತಿ ತಿಂಗಳು ಪ್ರಾರಂಭವಾಗುವ ಮುನ್ನ ಆರ್ ಬಿಐ ಆ ತಿಂಗಳ ಬ್ಯಾಂಕ್ ರಜೆಗೆ ಸಂಬಂಧಿಸಿದ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದರಂತೆ ಫೆಬ್ರವರಿ ತಿಂಗಳ ಬ್ಯಾಂಕ್ ರಜಾಪಟ್ಟಿಯನ್ನು ಕೂಡ ಆರ್ ಬಿಐ ಬಿಡುಗಡೆ ಮಾಡಿದೆ. ಹಾಗಾದ್ರೆ ಫೆಬ್ರವರಿಯಲ್ಲಿ ಎಷ್ಟು ದಿನಗಳ ಕಾಲ ಬ್ಯಾಂಕಿಗೆ ರಜೆಯಿದೆ? ಇಲ್ಲಿದೆ ಮಾಹಿತಿ. ನವದೆಹಲಿ (ಜ.25):2023ನೇ ಸಾಲಿನ ಮೊದಲ ತಿಂಗಳು ಮುಕ್ತಾಯಗೊಂಡು ಎರಡನೇ ತಿಂಗಳ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಫೆಬ್ರವರಿ ಅತೀ ಕಡಿಮೆ ದಿನಗಳನ್ನು ಹೊಂದಿರುವ ತಿಂಗಳು ಕೂಡ ಹೌದು. ಹೀಗಿರುವಾಗ ಫೆಬ್ರವರಿಯಲ್ಲಿ ಎಷ್ಟು ದಿನಗಳ ಕಾಲ ಬ್ಯಾಂಕುಗಳಿಗೆ ರಜೆಯಿದೆ? ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬಿಡುಗಡೆಗೊಳಿಸಿರುವ ರಜಾಪಟ್ಟಿ ಪ್ರಕಾರ ಫೆಬ್ರವರಿ ತಿಂಗಳಲ್ಲಿ ಒಟ್ಟು 10 ದಿನಗಳ ಕಾಲ ಬ್ಯಾಂಕುಗಳಿಗೆ ರಜೆಯಿದೆ. ಇನ್ನು ಆರ್ ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ. ಆಯಾ ಪ್ರಾದೇಶಿಕ ಆಚರಣೆ ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಇನ್ನು ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ಫೆಬ್ರವರಿ ತಿಂಗಳಲ್ಲಿ ಬ್ಯಾಂಕಿಗೆ ಭೇಟಿ ನೀಡುವ ಕೆಲಸವಿದ್ರೆ ಆರ್ ಬಿಐ ರಜಾಪಟ್ಟಿಯನ್ನು ಗಮನಿಸಿ ಹೋಗೋದು ಉತ್ತಮ. ಇಲ್ಲವಾದ್ರೆ ರಜೆ ದಿನಗಳಂದು ಬ್ಯಾಂಕಿಗೆ ಭೇಟಿ ನೀಡಿದ್ರೆ ಸುಮ್ಮನೆ ಸಮಯ ವ್ಯರ್ಥವಾಗುತ್ತದೆ. ಬ್ಯಾಂಕ್ () ರಜೆಗಳನ್ನು () ಆರ್ ಬಿಐ () ಮೂರು ವರ್ಗಗಳನ್ನಾಗಿ ವಿಂಗಡಿಸಿದೆ. 1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು. ಆರ್ ಬಿಐ () ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ ( ), ಖಾಸಗಿ ವಲಯ ( ), ವಿದೇಶಿ ಬ್ಯಾಂಕುಗಳು ( ), ಕೋಆಪರೇಟಿವ್ ಬ್ಯಾಂಕುಗಳು (- ) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ ( ) ಅನ್ವಯಿಸಲಿವೆ. 20,000 ಕೋಟಿ ದಾಟಿದ ಕೆನರಾ ಬ್ಯಾಂಕ್‌ ಜಾಗತಿಕ ವ್ಯವಹಾರ ಬ್ಯಾಂಕುಗಳಿಗೆ () ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ ( ) ಹಾಗೂ ಎಟಿಎಂ ವ್ಯವಹಾರಗಳಿಗೆ ( ) ಯಾವುದೇ ತೊಂದರೆಯಾಗೋದಿಲ್ಲ. ಆದರೆ, ಬ್ಯಾಂಕಿಗೆ () ಹೋಗಿಯೇ ಮಾಡಬೇಕಾದ ಯಾವುದಾದ್ರೂ ಕೆಲಸವಿದ್ರೆ ಮಾತ್ರ ಮುಂದೂಡುವುದು ಉತ್ತಮ. ಕೆಲವೊಮ್ಮೆ ಮನೆ () ಅಥವಾ ನಿವೇಶನ , ಕಾರ್ () ಖರೀದಿಗೆ ಏನಾದ್ರೂ ಪ್ಲ್ಯಾನ್ ಮಾಡಿದ್ರೆ ಸಾಲ ಪ್ರಕ್ರಿಯೆಗೆ ಸಂಬಂಧಿಸಿ ಬ್ಯಾಂಕಿಗೆ ಭೇಟಿ ನೀಡಬೇಕಾದ ಅನಿವಾರ್ಯತೆ ಇರುತ್ತದೆ. ಹಾಗೆಯೇ ಬ್ಯಾಂಕ್ ಗಳಲ್ಲಿ ಎಫ್ ಡಿ () ಮಾಡಿಸಲು ಅಥವಾ ಇನ್ಯಾವುದೋ ಹೂಡಿಕೆ () ಯೋಜನೆಗಳಲ್ಲಿ ಹಣ ತೊಡಗಿಸುವ ಯೋಚನೆ ಮಾಡಿದ್ರು ಕೂಡ ಬ್ಯಾಂಕಿಗೆ ಹೋಗಬೇಕಾದ ಸಂದರ್ಭ ಎದುರಾಗುತ್ತದೆ. ಹೀಗಾಗಿ ಯಾವೆಲ್ಲ ದಿನ ರಜೆಯಿರುತ್ತದೆ ಎಂಬುದನ್ನು ಮೊದಲೇ ಗಮನಿಸಿ ಆ ಬಳಿಕ ಭೇಟಿ ನೀಡುವ ಪ್ಲ್ಯಾನ್ () ಮಾಡಿ. ಅಡಿ ಮನೆ ಸಾಲ ಸಬ್ಸಿಡಿ ನೀಡಲು ನಿರಾಕರಿಸಿದ ಬ್ಯಾಂಕ್‌ಗೆ ಶಾಕ್: ಕೇಸ್ ಗೆದ್ದ ಗ್ರಾಹಕ ಫೆಬ್ರವರಿ ತಿಂಗಳ ರಜಾಪಟ್ಟಿ ಇಲ್ಲಿದೆ:ಫೆಬ್ರವರಿ 5: ಭಾನುವಾರಫೆಬ್ರವರಿ 11: ಎರಡನೇ ಶನಿವಾರಫೆಬ್ರವರಿ 12: ಭಾನುವಾರಫೆಬ್ರವರಿ 15: ಲೂಯಿ ನಗೈ ನಿ (ಮಣಿಪುರ)ಫೆಬ್ರವರಿ 18: ಮಹಾಶಿವರಾತ್ರಿ (ಅಹಮದಾಬಾದ್, ಬೆಲ್ಪುರ್, ಬೆಂಗಳೂರು, ಹೈದರಾಬಾದ್, ಕಾನ್ಪುರ, ಲಖ್ನೋ, ಮುಂಬೈ, ನಾಗ್ಪುರ, ರಾಯ್ ಪುರ್, ರಾಂಚಿ, ಶಿಮ್ಲಾ, ತಿರುವನಂತಪುರಂನಲ್ಲಿ ಬ್ಯಾಂಕುಗಳಿಗೆ ರಜೆ)ಫೆಬ್ರವರಿ 19: ಭಾನುವಾರಫೆಬ್ರವರಿ 20: ರಾಜ್ಯ ಸಂಸ್ಥಾಪನಾ ದಿನ (ಅರುಣಾಚಲ ಪ್ರದೇಶ, ಮಿಜೋರಾಂ)ಫೆಬ್ರವರಿ 21: ಲೋಸರ್ (ಸಿಕ್ಕಿಂ)ಫೆಬ್ರವರಿ 25: ನಾಲ್ಕನೇ ಶನಿವಾರಫೆಬ್ರವರಿ 26: ಭಾನುವಾರ