ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಗಳಿಗೆ ಶೇ.7.69 ಬಡ್ಡಿದರ ಘೋಷಿಸಿದ ಆರ್ ಬಿಐ *ಹೊಸ ಬಡ್ಡಿದರ ಡಿ.7ರಿಂದ ಜೂನ್ 6ರ ತನಕ ಅನ್ವಯ*ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಬಡ್ಡಿದರದಲ್ಲಿ ನಿರಂತರ ಬದಲಾವಣೆ*020ರ ಜುಲೈ 1ರಂದು ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಪ್ರಾರಂಭಿಸಿದ ಕೇಂದ್ರ ಸರ್ಕಾರ ನವದೆಹಲಿ (ಡಿ.7):ಕೇಂದ್ರ ಸರ್ಕಾರದ ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ (ಎಫ್ ಆರ್ ಬಿ) 2031ಮೇಲೆ ವಾರ್ಷಿಕ ಶೇ.7.69 ಬಡ್ಡಿದರವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನಿಗದಿಪಡಿಸಿದೆ. ಈ ಬಡ್ಡಿದರ ಇಂದಿನಿಂದ (ಡಿ.7) ಅರ್ಧ ವರ್ಷಕ್ಕೆ (ಜೂನ್ 6) ಅನ್ವಯಿಸಲಿದೆ. ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಗಳಿಗೆ ಯಾವುದೇ ನಿಗದಿತ ಕೂಪನ್ ದರ ಇರುವುದಿಲ್ಲ. ಈ ದರವನ್ನು ಆಗಾಗ ನಿಗದಿಪಡಿಸಲಾಗುತ್ತದೆ. ಎಫ್ ಆರ್ ಬಿ ಬಾಂಡ್ ಗಳು 182 ದಿನಗಳ ಅವಧಿಯ ಟ್ರೆಷರ್ ಬಿಲ್ ಗಳು ಕಳೆದ ಮೂರು ಹರಾಜುಗಳಲ್ಲಿ ಗಳಿಸಿದ ಸರಾಸರಿ ಮೂಲದರಕ್ಕೆ ಸರಿಸಮವಾಗಿರುತ್ತವೆ. ಭಾರತ ಸರ್ಕಾರವು 2020ರ ಜುಲೈ 1ರಂದು ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಪ್ರಾರಂಭಿಸಿತು. ಯಾವುದೇ ಭಾರತೀಯ ನಾಗರಿಕ ಇದರಲ್ಲಿ ಹೂಡಿಕೆ ಮಾಡಬಹುದು. ಜಂಟಿ ಹೂಡಿಕೆಗೂ ಅವಕಾಶವಿದೆ. ಹಿಂದೂ ಅವಿಭಜಿತ ಕುಟುಂಬ ಕೂಡ ಈ ಬಾಂಡ್ ನಲ್ಲಿ ಹೂಡಿಕೆ ಮಾಡಬಹುದು. ಆದ್ರೆ ಅನಿವಾಸಿ ಭಾರತೀಯರಿಗೆ (ಎನ್ಆರ್ ಐಗಳು) ಮಾತ್ರ ಇದರಲ್ಲಿ ಹೂಡಿಕೆ ಮಾಡಲು ಅವಕಾಶವಿಲ್ಲ. ಸುರಕ್ಷಿತ ಹೂಡಿಕೆಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಗಳಲ್ಲಿ ಹೂಡಿಕೆ ಮಾಡಿದ್ರೆ ಹಣ ಸುರಕ್ಷಿತವಾಗಿರುತ್ತದೆ. ಇದು ಕೇಂದ್ರ ಸರ್ಕಾರದ ಬಾಂಡ್ ಆಗಿರುವ ಕಾರಣ ನೀವು ಹೂಡಿಕೆ ಮಾಡಿದ ಹಣಕ್ಕೆ ಯಾವುದೇ ಅಪಾಯವಿಲ್ಲ. ಹೀಗಾಗಿ ಸುರಕ್ಷಿತ ಹೂಡಿಕೆ ಬಯಸುವವರು ಈ ಬಾಂಡ್ ನಲ್ಲಿ ಹೂಡಿಕೆ ಮಾಡಬಹುದು. ಎಸ್ ಬಿಐ 29 ಶಾಖೆಗಳಲ್ಲಿ ಡಿ.12ರ ತನಕ ಚುನಾವಣಾ ಬಾಂಡ್ ಗಳು ಲಭ್ಯ; ಯಾರು ಖರೀದಿಸಬಹುದು? ಬಾಂಡ್ ಅವಧಿ ಎಷ್ಟು?ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಏಳು ವರ್ಷಗಳ ಅವಧಿಯನ್ನು ಹೊಂದಿದೆ. ಈ ಅವಧಿ ಪೂರ್ಣಗೊಂಡ ಬಳಿಕವಷ್ಟೇ ಬಾಂಡ್ ಗಳಲ್ಲಿ ಹೂಡಿಕೆ ಮಾಡಿದ ಹಣ ಮರುಪಾವತಿ ಮಾಡಲಾಗುತ್ತದೆ. ಹಾಗೆಯೇ ಮೆಚ್ಯುರಿಟಿ ಅವಧಿ ಮುಗಿದ ಬಳಿಕ ಈ ಹೂಡಿಕೆಗೆ ಯಾವುದೇ ಬಡ್ಡಿ ಸಂದಾಯ ಮಾಡೋದಿಲ್ಲ. ಆದರೆ, ನಿರ್ದಿಷ್ಟ ವರ್ಗದ ಹಿರಿಯ ನಾಗರಿಕರಿಗೆ ಅವಧಿಗೂ ಮುನ್ನ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ. 60-70 ವಯಸ್ಸಿನವರಿಗೆ 6 ವರ್ಷ, 70-80 ವರ್ಷದವರಿಗೆ 5 ವರ್ಷ ಹಾಗೂ 80 ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ 4 ವರ್ಷಗಳ ಅವಧಿಯಾದ ಬಳಿಕ ವಿತ್ ಡ್ರಾ ಮಾಡಲು ಅವಕಾಶವಿದೆ. ಆರು ತಿಂಗಳಿಗೊಮ್ಮೆ ಬಡ್ಡಿ ಪಾವತಿಪ್ರತಿ ಆರು ತಿಂಗಳಿಗೊಮ್ಮೆ ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಗಳಿಗೆ ಬಡ್ಡಿ ಪಾವತಿಸಲಾಗುತ್ತದೆ. ಫ್ಲೋಟಿಂಗ್ ರೇಟ್ ಬಾಂಡ್ ಗಳ ಬಡ್ಡಿದರ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರಕ್ಕೆ () ಲಿಂಕ್ ಆಗಿರುತ್ತದೆ. ಎನ್ ಎಸ್ ಸಿ ಬಡ್ಡಿದರದಲ್ಲಿ ಬದಲಾವಣೆಯಾದಾಗ ಬಾಂಡ್ ಗಳ ಬಡ್ಡಿದರಲ್ಲೂ ಬದಲಾವಣೆಯಾಗುತ್ತದೆ. ಎನ್ ಎಸ್ ಸಿ ಬಡ್ಡಿಗಿಂತ ಈ ಬಾಂಡ್ ಗಳ ಬಡ್ಡಿದರ ಯಾವಾಗಲೂ 35 ಬೇಸಿಕ್ ಪಾಯಿಂಟ್ ಗಳಷ್ಟು ಹೆಚ್ಚಿರುತ್ತದೆ. : ಹಣ ಗಳಿಸಲು ಪೇಟಿಎಂನಲ್ಲಿದೆ ಇಷ್ಟೊಂದು ದಾರಿ ಹೂಡಿಕೆಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಗಳಲ್ಲಿ ಕನಿಷ್ಠ ಹೂಡಿಕೆ 1000ರೂ. ಆಗಿದ್ದು, ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ನಗದು ರೂಪದಲ್ಲಿ ಈ ಬಾಂಡ್ ಖರೀದಿಗೆ 20 ಸಾವಿರ ರೂ. ಮಿತಿ ನಿಗದಿಪಡಿಸಲಾಗಿದೆ. ಡ್ರಾಫ್ಟ್, ಚೆಕ್ ಅಥವಾ ಇತರ ಯಾವುದೇ ಎಲೆಕ್ಟ್ರಾನಿಕ್ ರೂಪದಲ್ಲಿ ಬಾಂಡ್ ಖರೀದಿಸಲು ಅವಕಾಶವಿದೆ. ಎಸ್ ಬಿಐ ಸೇರಿದಂತೆ ಸರ್ಕಾರಿ ಬ್ಯಾಂಕುಗಳು, ಐಡಿಬಿಐ (), ಐಸಿಐಸಿಐ (), ಎಚ್ ಡಿಎಫ್ ಸಿ(), ಎಕ್ಸಿಸ್ ( ) ಮುಂತಾದ ಖಾಸಗಿ ಬ್ಯಾಂಕುಗಳಲ್ಲಿ ಆರ್ ಬಿಐ ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಖರೀದಿಸಬಹುದು.