: ಅಲ್ಪ ಇಳಿಕೆಯಾದ ಬೆಳ್ಳಿ ದರ: ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ ನೋಡಿ.. ನೀವು ಚಿನ್ನ, ಬೆಳ್ಳಿ ಆಭರಣ ಖರೀದಿಗೆ ಪ್ಲ್ಯಾನ್‌ ಮಾಡಿದ್ದೀರಾ.. ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ.. ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆಯಾಗಿದೆ ಅನ್ನೋ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ.. 26th 2022:ದೇಶದಲ್ಲಿ ಶುಭ ಸಮಾರಂಭಗಳ ಸಂಖ್ಯೆ ಹೆಚ್ಚಿದ್ದು, ಈ ಹಿನ್ನೆಲೆ ಆಭರಣಗಳ () ಖರೀದಿ ಸಹ ಹೆಚ್ಚಿರುತ್ತದೆ. ಹಾಗೂ, ಮಹಿಳೆಯರು ಸಾಮಾನ್ಯವಾಗಿ ಆಭರಣ ಪ್ರಿಯರಾಗಿದ್ದು, ಈ ಹಿನ್ನೆಲೆ ಆಭರಣಗಳ ಖರೀದಿ, ವಹಿವಾಟು ಹೆಚ್ಚಿರುತ್ತದೆ. ಅಲ್ಲದೆ, ಚಿನ್ನ (), ಬೆಳ್ಳಿ () ದರ ಇಳಿಕೆಯಾದರೆ ಮಹಿಳೆಯರ ಮೊಗದಲ್ಲಿ ನಗು ಅರಳುತ್ತದೆ. ಈ ಹಿನ್ನೆಲೆ ಪ್ರತಿನಿತ್ಯ ಹಲವರು ಚಿನ್ನ, ಬೆಳ್ಳಿ ದರವನ್ನು ಪರಿಶೀಲಿಸುತ್ತಾರೆ. ಆದರೆ, ಇತ್ತೀಚೆಗೆ ಕೆಲ ದಿನಗಳಿಂದ ಬಂಗಾರದ ಮೌಲ್ಯ ಹೆಚ್ಚಾಗುತ್ತಲೇ ಇದೆ. ನೀವೂ ಸಹ ಚಿನ್ನ, ಬೆಳ್ಳಿ ಖರೀದಿಗೆ ಪ್ಲ್ಯಾನ್‌ ಮಾಡಿದ್ದೀರಾ..? ಇಂದು ಬೆಂಗಳೂರಿನಲ್ಲಿ () ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ ಎಂಬ ಬಗ್ಗೆ ತಿಳ್ಕೋಬೇಕಾ.. ಇಲ್ಲಿದೆ ವಿವರ.. ಇಂದು ದೇಶದಲ್ಲಿ ಬಂಗಾರದ ದರ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಆದರೆ ಬೆಳ್ಳಿಯ ಬೆಲೆ ಕುಸಿತ ಕಂಡಿದೆ. ಇಂದಿನ ಬೆಲೆ ವಿವರ ಹೀಗಿದೆ ನೋಡಿ.. ಇದನ್ನು ಓದಿ:, : ಚಿಕ್ಕಮಗಳೂರಲ್ಲಿ ಇಳಿಕೆಯಾದ, ಚಿತ್ರದುರ್ಗದಲ್ಲಿ ಹೆಚ್ಚಾದ ಪೆಟ್ರೋಲ್‌, ಡೀಸೆಲ್‌ ಬೆಲೆ ಒಂದು ಗ್ರಾಂ ಚಿನ್ನ (1GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,86024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,302 ಎಂಟು ಗ್ರಾಂ ಚಿನ್ನ (8GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 38,88024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 42,416 ಹತ್ತು ಗ್ರಾಂ ಚಿನ್ನ (10GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 48,60024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 53,020 ನೂರು ಗ್ರಾಂ ಚಿನ್ನ (100GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,86,00024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,30,200 ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 48,600 ರೂ. ಆಗಿದ್ದು, ನಿನ್ನೆ ಸಹ ಇಷ್ಟೇ ದರ ಇತ್ತು. ಇನ್ನು, ದೇಶದ ಪ್ರಮುಖ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಕ್ರಮವಾಗಿ ಚಿನ್ನದ ಬೆಲೆ ರೂ. 49,250, ರೂ. 48,550, ರೂ. 48,550 ಇದ್ದು, ನಿನ್ನೆ ಸಹ ಇಷ್ಟೇ ದರ ಇತ್ತು. ಅದೇ ರೀತಿ, ರಾಷ್ಟ್ರ ರಾಜಧಾನಿ ಹೊಸ ದೆಹಲಿಯಲ್ಲಿ ಸಹ ಚಿನ್ನದ ಬೆಲೆ ಶನಿವಾರ 48,700 ರೂ. ಆಗಿದ್ದು, ನಿನ್ನೆಯ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇಂದಿನ ಬೆಳ್ಳಿ ದರಇನ್ನು, ದೇಶದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ - ಇಳಿಕೆಯಾದಂತೆಯೂ ಚಿನ್ನ - ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ. ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್ದೇಶದ ಹಲವು ನಗರಗಳಲ್ಲಿ ಇಂದು ಬಂಗಾರದ ದರದಲ್ಲಿ ವ್ಯತ್ಯಾಸವಾಗದಿದ್ದರೂ ಬೆಳ್ಳಿ ದರದಲ್ಲಿ ಕುಸಿತ ಕಂಡಿದೆ. ಇಂದು, ಬೆಂಗಳೂರಿನಲ್ಲಿ 10 , 100 , 1000 (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 675, ರೂ. 6,750 ಹಾಗೂ ರೂ. 67,500 ಗಳಾಗಿವೆ. ಇನ್ನು, ದೇಶದ ಇತರೆ ಪ್ರಮುಖ ನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 67,500 ಆಗಿದ್ದು, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ರೂ. 61,800, ಕೋಲ್ಕತ್ತದಲ್ಲಿ ರೂ. 61,800 ಹಾಗೂ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸಹ ಇಂದಿನ ಬೆಳ್ಳಿ ದರ ರೂ. 61,800 ಆಗಿದ್ದು, ನಿನ್ನೆ ಸಹ ಇಷ್ಟೇ ಬೆಲೆ ಇತ್ತು.