ಬ್ಯಾಂಕ್ ಗ್ರಾಹಕರೇ ಗಮನಿಸಿ, ಡಿಸೆಂಬರ್ ನಲ್ಲಿ 13 ದಿನ ಬ್ಯಾಂಕ್ ರಜೆ ಬ್ಯಾಂಕ್ ರಜೆಗೆ ಸಂಬಂಧಿಸಿ ಆರ್ ಬಿಐ ಪ್ರತಿ ತಿಂಗಳು ರಜಾಪಟ್ಟಿ ಬಿಡುಗಡೆ ಮಾಡುತ್ತದೆ.ಅದರಂತೆ ಡಿಸೆಂಬರ್ ತಿಂಗಳ ರಜಾಪಟ್ಟಿಯನ್ನು ಕೂಡ ಬಿಡುಗಡೆಗೊಳಿಸಿದ್ದು, ಒಟ್ಟು 13 ದಿನಗಳ ಕಾಲ ಬ್ಯಾಂಕ್ ಕಾರ್ಯನಿರ್ವಹಿಸೋದಿಲ್ಲ. ನವದೆಹಲಿ (ನ.25):ಈ ವರ್ಷದ ಕೊನೆಯ ತಿಂಗಳಿಗೆ ಕಾಲಿಡಲು ಬೆರಳೆಣಿಕೆ ದಿನಗಳಷ್ಟೇ ಬಾಕಿ ಉಳಿದಿವೆ. ಪ್ರತಿ ತಿಂಗಳು ಪ್ರಾರಂಭವಾಗುವ ಮುನ್ನ ಬ್ಯಾಂಕ್ ಗಳ ರಜಾ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬಿಡುಗಡೆ ಮಾಡುತ್ತದೆ. ಅಂತೆಯೇ ಡಿಸೆಂಬರ್ ತಿಂಗಳ ಹಾಲಿ ಡೇ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು, ಒಟ್ಟು 13 ದಿನಗಳ ಕಾಲ ಬ್ಯಾಂಕ್ ಕಾರ್ಯನಿರ್ವಹಿಸೋದಿಲ್ಲ. ನವೆಂಬರ್ ನಲ್ಲಿ ಬರೀ 10 ದಿನಗಳ ಕಾಲ ಮಾತ್ರ ಬ್ಯಾಂಕುಗಳಿಗೆ ರಜೆಯಿತ್ತು. ಆರ್ ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ. ಆಯಾ ಪ್ರಾದೇಶಿಕ ಆಚರಣೆ ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಇನ್ನು ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ಹೀಗಾಗಿ ಡಿಸೆಂಬರ್ ತಿಂಗಳಲ್ಲಿ ಬ್ಯಾಂಕಿಗೆ ಭೇಟಿ ನೀಡುವ ಕೆಲಸವಿದ್ರೆ ಆರ್ ಬಿಐ ರಜಾಪಟ್ಟಿಯನ್ನು ಗಮನಿಸಿ ಹೋಗೋದು ಉತ್ತಮ. ಇಲ್ಲವಾದ್ರೆ ಸುಮ್ಮನೆ ಸಮಯ ಹಾಗೂ ಶ್ರಮ ಎರಡೂ ವ್ಯರ್ಥವಾಗುತ್ತದೆ. ಬ್ಯಾಂಕ್ () ರಜೆಗಳನ್ನು () ಆರ್ ಬಿಐ () ಮೂರು ವರ್ಗಗಳನ್ನಾಗಿ ವಿಂಗಡಿಸಿದೆ. 1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು. ಆರ್ ಬಿಐ () ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ ( ), ಖಾಸಗಿ ವಲಯ ( ), ವಿದೇಶಿ ಬ್ಯಾಂಕುಗಳು ( ), ಕೋಆಪರೇಟಿವ್ ಬ್ಯಾಂಕುಗಳು (- ) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ ( ) ಅನ್ವಯಿಸಲಿವೆ. ಪಿಪಿಎಫ್ ಖಾತೆ ಅವಧಿ 15 ವರ್ಷ, ಆ ಬಳಿಕ ಖಾತೆದಾರ ಏನ್ ಮಾಡ್ಬಹುದು? ಬ್ಯಾಂಕುಗಳಿಗೆ ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ ( ) ಹಾಗೂ ಎಟಿಎಂ ವ್ಯವಹಾರಗಳಿಗೆ ( ) ಯಾವುದೇ ತೊಂದರೆಯಾಗೋದಿಲ್ಲ. ಆದರೆ, ಬ್ಯಾಂಕಿಗೆ () ಹೋಗಿಯೇ ಮಾಡಬೇಕಾದ ಯಾವುದಾದ್ರೂ ಕೆಲಸವಿದ್ರೆ ಮಾತ್ರ ಮುಂದೂಡುವುದು ಉತ್ತಮ. ಈ ವರ್ಷದ ಕೊನೆಯ ತಿಂಗಳಾಗಿರುವ ಕಾರಣ ಬ್ಯಾಂಕಿನಲ್ಲಿ ತುರ್ತಾಗಿ ಮಾಡಬೇಕಾದ ಕೆಲವೊಂದು ಕೆಲಸಗಳಿರಬಹುದು. ಹೀಗಾಗಿ ಡಿಸೆಂಬರ್ ನಲ್ಲಿ ಬ್ಯಾಂಕ್ ಗಳಿಗೆ ಯಾವೆಲ್ಲ ದಿನ ರಜೆಯಿದೆ ಎಂಬುದನ್ನು ಮೊದಲೇ ಗಮನಿಸಿ ಆ ಬಳಿಕ ಭೇಟಿ ನೀಡುವ ಪ್ಲ್ಯಾನ್ ಮಾಡಿ. ಡಿಸೆಂಬರ್ ತಿಂಗಳ ರಜಾಪಟ್ಟಿ ಹೀಗಿದೆ:ಡಿಸೆಂಬರ್ 3: ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಫೀಸ್ಟ್ (ಗೋವಾದಲ್ಲಿ ಬ್ಯಾಂಕುಗಳಿಗೆ ರಜೆ)ಡಿಸೆಂಬರ್ 4: ಭಾನುವಾರಡಿಸೆಂಬರ್ 10: ಎರಡನೇ ಶನಿವಾರಡಿಸೆಂಬರ್ 11: ಭಾನುವಾರಡಿಸೆಂಬರ್ 12: ಪಾ-ತೊಗ್ಯಾನ್ ನೆಂಗ್ಮಿಂಜ ಸಂಗ್ಮಡಿಸೆಂಬರ್ 18: ಭಾನುವಾರಡಿಸೆಂಬರ್ 19: ಗೋವಾ ವಿಮೋಚನಾ ದಿನ (ಗೋವಾದಲ್ಲಿ ಮಾತ್ರ ಬ್ಯಾಂಕುಗಳಿಗೆ ರಜೆ)ಡಿಸೆಂಬರ್ 24: ಕ್ರಿಸ್ಮಸ್ ಈವ್ ಮತ್ತು ನಾಲ್ಕನೇ ಶನಿವಾರ (ದೇಶಾದ್ಯಂತ ಬ್ಯಾಂಕುಗಳಿಗೆ ರಜೆ)ಡಿಸೆಂಬರ್ 25: ಭಾನುವಾರ, ಕ್ರಿಸ್ಮಸ್ ಅಂದ್ರೇನು? ಅದ್ರ ಲಾಭವೇನು ಗೊತ್ತಾ? ಡಿಸೆಂಬರ್ 26: ಕ್ರಿಸ್ಮಸ್ ಸಂಭ್ರಮಾಚರಣೆ (ಲೊಸೂಂಗ್/ನಮ್ಸೂಂಗ್)ಡಿಸೆಂಬರ್ 29: ಗುರು ಗೋವಿಂದ್ ಸಿಂಗ್ ಸಿಂಗ್ ಜಿ ಅವರ ಜನ್ಮದಿನ (ಚಂಡೀಗಢದಲ್ಲಿ ಬ್ಯಾಂಕುಗಳಿಗೆ ರಜೆ)ಡಿಸೆಂಬರ್ 30: ಯು ಕಿಯಾಂಗ್ ನಂಗ್ಬಾ (ಮೇಘಾಲಯದಲ್ಲಿ ಮಾತ್ರ ಬ್ಯಾಂಕುಗಳು ಮುಚ್ಚಿರುತ್ತವೆ)ಡಿಸೆಂಬರ್ 31: ಹೊಸ ವರ್ಷದ ಹಿಂದಿನ ದಿನವಾದ ಕಾರಣ (ಮಿಜೋರಾಂನಲ್ಲಿ ಬ್ಯಾಂಕುಗಳಿಗೆ ರಜೆ)