ಇ ಕಾಮರ್ಸ್‌ಗೆ ಕೇಂದ್ರದ ಮೂಗುದಾರ: ಹಣ ಕೊಟ್ಟು ರಿವ್ಯೂ ಬರೆಸಿದರೆ ‘ಪೇಯ್ಡ್‌’ ನಮೂದು ಕಡ್ಡಾಯ ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್‌ ವೇದಿಕೆಗಳು ನಕಲಿ ಗ್ರಾಹಕರ ರಿವ್ಯೂ (ವಿಮರ್ಶೆ) ಬರೆಸಿ ಗ್ರಾಹಕರನ್ನು ದಿಕ್ಕು ತಪ್ಪಿಸದಂತೆ ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಿದೆ. ನವದೆಹಲಿ: ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್‌ ವೇದಿಕೆಗಳು ನಕಲಿ ಗ್ರಾಹಕರ ರಿವ್ಯೂ (ವಿಮರ್ಶೆ) ಬರೆಸಿ ಗ್ರಾಹಕರನ್ನು ದಿಕ್ಕು ತಪ್ಪಿಸದಂತೆ ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನು ಇ-ಕಾಮರ್ಸ್‌ ವೇದಿಕೆಗಳು ಸ್ವಯಂ ಪ್ರೇರಿತವಾಗಿ ತಾವು ಒದಗಿಸುವ ಸರಕು ಹಾಗೂ ಸೇವೆಗಳಿಗೆ ಪಾವತಿ ಮಾಡಿ ಬರೆಸಿದ ಗ್ರಾಹಕರ ರಿವ್ಯೂ (ವಿಮರ್ಶೆ)ಗಳನ್ನು ‘ಪೇಯ್ಡ್‌’ ಎಂದು ನಮೂದಿಸಿ ಬಹಿರಂಗ ಪಡಿಸಬೇಕು ಎಂಬ ಕಟ್ಟುನಿಟ್ಟಿನ ನಿಯಮ ಹೊರಡಿಸಿದೆ. ಈ ಮೂಲಕ ಭಾರತ ಆನ್‌ಲೈನ್‌ ರಿವ್ಯೂಗಳಿಗೂ ( ) ಮಾನದಂಡ ರಚಿಸಿದ ಮೊದಲ ದೇಶ ಎಂಬ ಖ್ಯಾತಿಗೂ ಪಾತ್ರವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಬ್ಯೂರೋ ಆಫ್‌ ಇಂಡಿಯನ್‌ ಸ್ಟಾಂಡರ್ಡ್‌ ( ) ಆನ್‌ಲೈನ್‌ ಗ್ರಾಹಕರ ರಿವ್ಯೂಗಳಿಗಾಗಿ ಹೊಸ ಮಾನದಂಡವನ್ನು ಸಿದ್ಧಪಡಿಸಿದ್ದು, ನ.25ರಿಂದ ಇದು ಜಾರಿಗೆ ಬರಲಿದೆ ಎಂದು ಗ್ರಾಹಕ ವ್ಯವಹಾರ ಕಾರ್ಯದರ್ಶಿ( ) ರೋಹಿತ್‌ ಕುಮಾರ್‌ ಸಿಂಗ್‌ ( ) ಸೋಮವಾರ ಹೇಳಿದ್ದಾರೆ. ಇವುಗಳು ಐಚ್ಛಿಕವಾಗಿದ್ದರೂ ನಕಲಿ ರಿವ್ಯೂಗಳ ಹಾವಳಿಯನ್ನು ತಪ್ಪಿಸಲು ಸರ್ಕಾರ ಇವುಗಳನ್ನು ಕಡ್ಡಾಯವೆಂದೇ ಪರಿಗಣಿಸಲಿದೆ ಎನ್ನಲಾಗಿದೆ. ಇ ಕಾಮರ್ಸ್‌ ತಾಣದಲ್ಲಿ ನಕಲಿ ರಿವ್ಯೂಗೆ ಕಡಿವಾಣಕ್ಕೆ ಕಾನೂನು ಮೋಸಕ್ಕೆ ಅಂಕುಶ: ಸರಕು ಸೇವೆಗಳನ್ನು ( ) ಖರೀದಿಸುವ ಮುನ್ನ ಜನರು ಈಗಾಗಲೇ ಖರೀದಿಸಿದ ಗ್ರಾಹಕರ ವಿಮರ್ಶೆಗಳನ್ನು ಪರಿಗಣಿಸುತ್ತಾರೆ. ಹೀಗಾಗಿ ಪಾವತಿಸಿದ ರಿವ್ಯೂಗಳಿಂದ ಜನರು ಮೋಸ ಹೋಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಹೊಸ ಮಾನದಂಡಗಳು ಸರಕು ಮತ್ತು ಸೇವೆಗಳ ಪೂರೈಕೆದಾರರು ಸೇರಿ ಪ್ರವಾಸಿ ಸಂಸ್ಥೆ, ರೆಸ್ಟೋರಂಟ್‌ () ಹಾಗೂ ಇತರೆ ವಸ್ತುಗಳ ಬಗ್ಗೆ ಆನ್‌ಲೈನ್‌ನಲ್ಲಿ ಗ್ರಾಹಕರ ರಿವ್ಯೂಗಳನ್ನು- ಪದಗಳು, ವಿಡಿಯೋ ಅಥವಾ ಆಡಿಯೋ ರೂಪದಲ್ಲಿ ಪ್ರಕಟಿಸುವ ಎಲ್ಲ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಅನುಸರಣೆಯ ಪರಿಶೀಲನೆ: ಮುಂದಿನ 15 ದಿನಗಳಲ್ಲಿ ಸಂಸ್ಥೆಗಳು ಈ ಎಲ್ಲ ಮಾನದಂಡಗಳನ್ನು ಅನುಸರಿಸುತ್ತವೆಯೇ ಎಂಬುದನ್ನು ಪರಿಶೀಲಿಸಲು ಪ್ರಮಾಣೀಕರಣ ಪ್ರಕ್ರಿಯೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಇ ಕಾಮರ್ಸ್‌ ವೇದಿಕೆಗಳು ಮಾನದಂಡಗಳ ಪ್ರಮಾಣೀಕರಣಕ್ಕೆ ಬಿಎಸ್‌ಐಗೆ ಅರ್ಜಿ ಸಲ್ಲಿಸಬೇಕು ಎಂದು ಸಿಂಗ್‌ ಹೇಳಿದ್ದಾರೆ. ಸ್ಟಾರ್‌ಗಳಿಗೆ ಸರ್ಕಾರದ ಶಾಕ್: ರೆಡಿಯಾಗ್ತಿದೆ ಹೊಸ ಮಾರ್ಗಸೂಚಿ ಬಿಎಸ್‌ಐ ರಿವ್ಯೂಗಳನ್ನು ಕೋರಿದ ರಿವ್ಯೂ ಹಾಗೂ ಅನಪೇಕ್ಷಿತ ರಿವ್ಯೂ ಎಂದು ವಿಂಗಡಿಸಿದ್ದು, ಪ್ರತಿ ಸಂಸ್ಥೆಗಳಲ್ಲಿ ರಿವ್ಯೂ ಅಡ್ಮಿನಿಸ್ಪ್ರೇಟರ್‌ ಎಂಬ ಹುದ್ದೆಯಲ್ಲಿ ವ್ಯಕ್ತಿಯನ್ನು ನೇಮಿಸಿಕೊಳ್ಳಲು ಸೂಚಿಸಿದೆ. ಸರಕು ಪೂರೈಕೆದಾರ ಅಥವಾ ರಿವ್ಯೂ ಅಡ್ಮಿನಿಸ್ಪ್ರೇಟರ್‌ ತನ್ನ ಗ್ರಾಹಕರಿಗೆ ಸರಕು, ಸೇವೆಗಳ ಬಗ್ಗೆ ರಿವ್ಯೂ ಬರೆಯುವಂತೆ ಕೋರಿದ್ದರೆ ಅವು ಕೋರಿದ ರಿವ್ಯೂಗಳ ಅಡಿಯಲ್ಲಿ ಬರುತ್ತವೆ. ಈ ರಿವ್ಯೂ ಬರೆಯುವವರ ಗುರುತನ್ನು ಅನುಮತಿ ಇಲ್ಲದೇ ಬಹಿರಂಗ ಪಡಿಸುವಂತಿಲ್ಲ ಹಾಗೂ ಸಂಸ್ಥೆಗಳು ಪ್ರಕಟಿಸುವ ರಿವ್ಯೂ ಸಂಪೂರ್ಣವಾಗಿ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು. ನೀವು ರಿವ್ಯೂ ಬರೆದಿದ್ದಕ್ಕಾಗಿ ವ್ಯಕ್ತಿಗೆ ಹಣ ಪಾವತಿಸಿದರೆ ಅದನ್ನು ಖರೀದಿಸಲ್ಪಟ್ಟರಿವ್ಯೂ ಎಂದು ಪ್ರಕಟಿಸಬೇಕು ಎಂದು ಮಾನದಂಡ ಸೂಚಿಸಿದೆ. : ಆನ್‌ಲೈನ್‌ನಲ್ಲೇ ಡ್ರಗ್ಸ್ ದಂಧೆ: ಯುವತಿ, ಗೆಳೆಯ ಮತ್ತೆ ಜೈಲಿಗೆ ಜೀನ್ಸ್‌ ಆರ್ಡರ್ ಮಾಡಿದ್ರೆ ಒಂದು ಬ್ಯಾಗ್ ಈರುಳ್ಳಿ ಕಳಿಸಿದ ಫ್ಯಾಷನ್ ಸೈಟ್