ಟ್ವೀಟರ್‌ನಲ್ಲಿ ಈಗ ಬ್ಲೂಟಿಕ್‌ ಜತೆ ‘ಅಧಿಕೃತ’ ಲೇಬಲ್‌ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರ ಟ್ವೀಟರ್‌ ಖಾತೆಗಳಿಗೆ ಬ್ಲೂಟಿಕ್‌ ಜೊತೆಗೆ ‘ಅಫಿಶೀಯಲ್‌’ ಎಂಬ ಬೂದು ಬಣ್ಣದ ಗುರುತನ್ನು ನೀಡಲು ಟ್ವೀಟರ್‌ ಆರಂಭಿಸಿದೆ. ಬ್ಲೂಟಿಕ್‌ ಖಾತೆಗಳಿಗೆ ತಿಂಗಳಿಗೆ 8 ಡಾಲರ್‌ ಪಾವತಿಸಬೇಕು ಎಂಬ ನಿಯಮದ ಮೊದಲ ಹಂತವಾಗಿ ಇದನ್ನು ಜಾರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರ ಟ್ವೀಟರ್‌ ಖಾತೆಗಳಿಗೆ ಬ್ಲೂಟಿಕ್‌ ಜೊತೆಗೆ ‘ಅಫಿಶೀಯಲ್‌’ ಎಂಬ ಬೂದು ಬಣ್ಣದ ಗುರುತನ್ನು ನೀಡಲು ಟ್ವೀಟರ್‌ ಆರಂಭಿಸಿದೆ. ಬ್ಲೂಟಿಕ್‌ ಖಾತೆಗಳಿಗೆ ತಿಂಗಳಿಗೆ 8 ಡಾಲರ್‌ ಪಾವತಿಸಬೇಕು ಎಂಬ ನಿಯಮದ ಮೊದಲ ಹಂತವಾಗಿ ಇದನ್ನು ಜಾರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಬ್ಲೂಟಿಕ್‌ ಹೊಂದಿರುವ ರಾಜಕಾರಣಿಗಳು, ವ್ಯಾಪಾರ ಸಂಸ್ಥೆಗಳು, ಕಂಪನಿಗಳು, ಪಕ್ಷಗಳು ಮತ್ತು ಉನ್ನತ ದರ್ಜೆಯ ಖಾತೆಗಳಿಗೆ ಈ ಹೊಸ ಗುರುತನ್ನು ನೀಡಲಾಗುತ್ತಿದೆ. ಮೋದಿ ಅವರ ಜೊತೆಗೆ ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌( ), ಗೃಹ ಸಚಿವ ಅಮಿತ್‌ ಶಾ ( ), ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ (. ), ರಕ್ಷಣಾ ಸಚಿವ ರಾಜನಾಥ ಸಿಂಗ್‌ ( ) , ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ( ), ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ( ), ಕಾಂಗ್ರೆಸ್‌, ಬಿಜೆಪಿ ಸೇರಿ ಹಲವು ಖಾತೆಗಳಿಗೂ ಅಫಿಶಿಯಲ್‌ ಗುರುತನ್ನು ನೀಡಲಾಗಿದೆ. ಉಳಿದ ಪ್ರಮುಖರ ಬ್ಲೂಟಿಕ್‌ ಮುಂದುವರಿಸಲಾಗಿದೆಯಾದರೂ ಅವರಿಗೆ ಅಫೀಶಿಯಲ್‌ ಎಂಬ ಲೇಬಲ್‌ ನೀಡಿಲ್ಲ. 8 ಡಾಲರ್‌ ಶುಲ್ಕ ಜಾರಿಯಾದ ಬಳಿಕ ಇವರು ಹಣ ನೀಡಿದಿದ್ದರೆ ಬ್ಲೂಟಿಕ್‌ ಹೋಗಬಹುದು ಎನ್ನಲಾಗುತ್ತಿದೆ. ವಜಾ ಆದ ಕೆಲವರಿಗೆ ಟ್ವೀಟರ್‌ನಿಂದ ಮರು ನೇಮಕಕ್ಕೆ ಕರೆ!ನಾನ್ಯಾಕೆ ಕೊಡಲಿ ಕಾಸು, ಬ್ಲೂಟಿಕ್‌ಗೆ ನಾ ಹಣ ಕೊಡಲ್ಲ: ನೈನಾ