ಟಾಟಾ ಕಾರು ಕೊಳ್ಳಲು ಬಯಸಿದ್ದೀರಾ... ನಾಳೆಯಿಂದ ರೇಟ್ ಜಾಸ್ತಿಯಾಗುತ್ತೆ ಸೋಮವಾರದಿಂದ ಎಲ್ಲೆಡೆ ತನ್ನ ಕಾರುಗಳ ಬೆಲೆಯನ್ನು ಶೇ.0.9ರಷ್ಟುಅಧಿಕಗೊಳಿಸಲು ಟಾಟಾ ಕಂಪನಿ ನಿರ್ಧರಿಸಿದೆ. ಮುಂಬೈ: ಸೋಮವಾರದಿಂದ ಎಲ್ಲೆಡೆ ತನ್ನ ಕಾರುಗಳ ಬೆಲೆಯನ್ನು ಶೇ.0.9ರಷ್ಟುಅಧಿಕಗೊಳಿಸಲು ಟಾಟಾ ಕಂಪನಿ ನಿರ್ಧರಿಸಿದೆ. ವಾಹನಗಳ ಉತ್ಪಾದನಾ ವೆಚ್ಚ ಅಧಿಕವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೆಚ್ಚಾಗಿರುವ ಕಂಪನಿಯ ಒಟ್ಟು ವೆಚ್ಚವನ್ನು ಈ ಕನಿಷ್ಠ ಬೆಲೆ ಏರಿಕೆಯಿಂದ ಹೀರಿಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ದೇಶಾದ್ಯಂತ ಟಿಯಾಗೊ(), ಪಂಚ್‌ (), ನೆಕ್ಸಾನ್‌ (), ಹ್ಯಾರಿಯರ್‌(), ಮತ್ತು ಸಫಾರಿಯಂತಹ ಪ್ರಯಾಣಿಕ ವಾಹನಗಳನ್ನು ( ) ಕಂಪನಿ ಮಾರಾಟ ಮಾಡುತ್ತಿದೆ. ಅಕ್ಟೋಬರ್‌ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ( ) ಕಂಪನಿಯ ಎಲೆಕ್ಟ್ರಿಕ್‌ ವಾಹನಗಳು ಸೇರಿದಂತೆ 45,423 ವಾಹನಗಳು ಮಾರಾಟವಾಗಿದ್ದು ಕಳೆದ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ ಈ ಬಾರಿ 33% ರಷ್ಟು ಮಾರಾಟ ಪ್ರಮಾಣ ಅಧಿಕವಾಗಿದೆ. ಹೊಸೂರು ಐಫೋನ್ ಕಾರ್ಖಾನೆಯಲ್ಲಿ 45 ಸಾವಿರ ಕಾರ್ಮಿಕರ ನೇಮಕಕ್ಕೆ ತಯಾರಿ ಭಾರತದಲ್ಲಿ 2.5 ಕೋಟಿಗೂ ಹೆಚ್ಚು ಕಾರು ಉತ್ಪಾದಿಸಲಿದೆ ಮಾರುತಿ ಸುಜುಕಿ