ಸಕ್ಕರೆ ರಫ್ತಿನ ಮೇಲಿನ ನಿರ್ಬಂಧ ಮತ್ತೆ 1 ವರ್ಷ ಮುಂದುವರಿಕೆ ಸರ್ಕಾರವು ಸಕ್ಕರೆ ರಫ್ತು ಮೇಲಿನ ನಿರ್ಬಂಧವನ್ನು 2023ರ ಅ. 31ರವರೆಗೆ ಮುಂದುವರೆಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಕೊರತೆಗೆ ತಡೆ ಹಾಕುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ನವದೆಹಲಿ: ಸರ್ಕಾರವು ಸಕ್ಕರೆ ರಫ್ತು ಮೇಲಿನ ನಿರ್ಬಂಧವನ್ನು 2023ರ ಅ. 31ರವರೆಗೆ ಮುಂದುವರೆಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಕೊರತೆಗೆ ತಡೆ ಹಾಕುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೊದಲು ಈ ವರ್ಷ ಅ.31ರವರೆಗೆ ಮಾತ್ರ ನಿರ್ಬಂಧ ಹೇರಲಾಗಿತ್ತು. ಆದರೆ ಇದೀಗ ಹಚ್ಚಿಸಿದ್ದು, 2023ರ ಅ.31 ಅಥವಾ ಮುಂದಿನ ಆದೇಶದವರೆಗೆ ಈ ನಿಯಮ ಮುಂದುವರೆಯಲಿದೆ ಹಾಗೂ ಉಳಿದ ನಿಯಮಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಜೊತೆಗೆ ಸುಂಕ ದರದ ಕೋಟಾದಲ್ಲಿ ಯುರೋಪ್‌ (), ಅಮೇರಿಕಾ () ಒಕ್ಕೂಟಗಳಿಗೆ ರಫ್ತಾಗುವ ಸಕ್ಕರೆಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ ( )ತಿಳಿಸಿದೆ. ಪ್ರಸಕ್ತ ವರ್ಷದಲ್ಲಿ ಭಾರತವು ಅತಿಹೆಚ್ಚು ಸಕ್ಕರೆ ಉತ್ಪಾದಕ ( )ಹಾಗೂ 2ನೇ ರಫ್ತುದಾರ ರಾಷ್ಟ್ರವಾಗಿದೆ. ಭಾರತ ಈ ಬಾರಿ 36.5 ಮಿಲಿಯನ್‌ ಟನ್‌ ಸಕ್ಕರೆ ಉತ್ಪಾದಿಸುವ ಗುರಿ ಹೊಂದಿದೆ. : ಬಾಲಾಜಿ ಸಕ್ಕರೆ ಕಾರ್ಖಾನೆ ವಿರುದ್ಧ ರೊಚ್ಚಿಗೆದ್ದ ರೈತರು: ಕಲ್ಲೆಸೆತ ಗೋಧಿ ರಪ್ತು ನಿಷೇಧಿಸಿದ ಭಾರತ: ನಿರ್ಧಾರ ಮರುಪರಿಶೀಲಿಸುವಂತೆ ಬೇಡುವೆ: ಮುಖ್ಯಸ್ಥೆ