:ನವೆಂಬರ್ ನಲ್ಲಿ 10 ದಿನ ಬ್ಯಾಂಕಿಗೆ ರಜೆ; ಆರ್ ಬಿಐ ರಜಾಪಟ್ಟಿ ಹೀಗಿದೆ ನೋಡಿ ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ ಬರೋಬರಿ 21 ದಿನಗಳ ಕಾಲ ರಜೆಯಿತ್ತು. ಆದರೆ, ಮುಂದಿನ ತಿಂಗಳು ಅಂದ್ರೆ ನವೆಂಬರ್ ನಲ್ಲಿ ಬ್ಯಾಂಕುಗಳಿಗೆ 10 ದಿನಗಳಷ್ಟೇ ರಜೆಯಿದೆ. ಹಾಗಾದ್ರೆ ನವೆಂಬರ್ ನಲ್ಲಿ ಯಾವೆಲ್ಲ ದಿನ ಬ್ಯಾಂಕ್ ಮುಚ್ಚಿರುತ್ತದೆ? ಇಲ್ಲಿದೆ ಮಾಹಿತಿ. ನವದೆಹಲಿ (ಅ.29):ಅಕ್ಟೋಬರ್ ತಿಂಗಳು ಮುಕ್ತಾಯಗೊಳ್ಳುತ್ತಿದ್ದು, ನವೆಂಬರ್ ತಿಂಗಳ ಆಗಮನವಾಗುತ್ತಿದೆ. ಪ್ರತಿ ಹೊಸ ತಿಂಗಳ ಪ್ರಾರಂಭಕ್ಕೂ ಮುನ್ನ ಬ್ಯಾಂಕ್ ಗಳ ರಜೆಗೆ ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಹಾಗೆಯೇ ನವೆಂಬರ್ ತಿಂಗಳ ರಜಾಪಟ್ಟಿ ಬಿಡುಗಡೆ ಮಾಡಿದ್ದು, ಒಟ್ಟು 10 ದಿನಗಳ ಕಾಲ ಬ್ಯಾಂಕ್ ಕ್ಲೋಸ್ ಆಗಿರಲಿದೆ. ಅಕ್ಟೋಬರ್ ನಲ್ಲಿ 21 ದಿನಗಳ ಕಾಲ ಬ್ಯಾಂಕುಗಳಿಗೆ ರಜೆಯಿತ್ತು. ಅಕ್ಟೋಬರ್ ತಿಂಗಳಲ್ಲೇ ಬಹುತೇಕ ಹಬ್ಬಗಳು ಮುಕ್ತಾಯಗೊಂಡಿವೆ. ನವೆಂಬರ್ ನಲ್ಲಿ ಕನ್ನಡ ರಾಜ್ಯೋತ್ಸವ, ಗುರು ನಾನಕ್ ಜಯಂತಿ, ಕಾರ್ತಿಕ ಪೂರ್ಣಿಮಕ್ಕೆ ರಜೆಯಿದೆ. ಆರ್ ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ. ಆಯಾ ಪ್ರಾದೇಶಿಕ ಆಚರಣೆ ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಉದಾಹರಣೆಗೆ ಕನ್ನಡ ರಾಜ್ಯೋತ್ಸವದಂದು ಕರ್ನಾಟಕದಲ್ಲಿರುವ ಬ್ಯಾಂಕುಗಳಿಗೆ ಮಾತ್ರ ರಜೆಯಿರುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಇನ್ನು ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ಬ್ಯಾಂಕುಗಳಿಗೆ ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ ಹಾಗೂ ಎಟಿಎಂ ವ್ಯವಹಾರಗಳಿಗೆ ಯಾವುದೇ ತೊಂದರೆಯಾಗೋದಿಲ್ಲ. ಆದರೆ, ಬ್ಯಾಂಕಿಗೆ ಹೋಗಿಯೇ ಮಾಡಬೇಕಾದ ಯಾವುದಾದ್ರೂ ಕೆಲಸವಿದ್ರೆ ಮಾತ್ರ ಮುಂದೂಡುವುದು ಉತ್ತಮ. ಬ್ಯಾಂಕ್ () ರಜೆಗಳನ್ನು () ಆರ್ ಬಿಐ () ಮೂರು ವರ್ಗಗಳನ್ನಾಗಿ ವಿಂಗಡಿಸಿದೆ. 1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು. ಆರ್ ಬಿಐ () ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ ( ), ಖಾಸಗಿ ವಲಯ ( ), ವಿದೇಶಿ ಬ್ಯಾಂಕುಗಳು ( ), ಕೋಆಪರೇಟಿವ್ ಬ್ಯಾಂಕುಗಳು (- ) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ ( ) ಅನ್ವಯಿಸಲಿವೆ. ಹೊಸ ಮನೆ ಖರೀದಿಸುತ್ತಿದ್ದೀರಾ? ಹಾಗಾದ್ರೆ ಆಸ್ತಿ ತೆರಿಗೆ ಬಗ್ಗೆ ನೀವು ತಿಳಿಯಲೇಬೇಕು! ಇತರ ತಿಂಗಳುಗಳಿಗೆ ಹೋಲಿಸಿದ್ರೆ ನವೆಂಬರ್ ನಲ್ಲಿ ಬ್ಯಾಂಕ್ ರಜೆಗಳು ಕಡಿಮೇನೆ. ವಾರದ ರಜೆಗಳನ್ನು ಹೊರತುಪಡಿಸಿದ್ರೆ ಕೇವಲ ನಾಲ್ಕು ದಿನಗಳು ಮಾತ್ರ ಬ್ಯಾಂಕಿಗೆ ರಜೆಯಿದೆ. ಅಂದರೆ ವಾರದ ರಜೆಗಳನ್ನು ಸೇರಿಸಿದ್ರೆ ಮಾತ್ರ ಒಟ್ಟು 10 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ. ಅದೇನೆ ಇರಲಿ, ಬ್ಯಾಂಕ್ ಗೆ ಭೇಟಿ ನೀಡುವ ಮೊದಲು ಆರ್ ಬಿಐ ರಜಾ ಪಟ್ಟಿ ಗಮನಿಸಿ ಹೋಗೋದು ಉತ್ತಮ.ಇಲ್ಲವಾದ್ರೆ ಸುಮ್ಮನೆ ಸಮಯ ಹಾಗೂ ಶ್ರಮ ಎರಡೂ ವ್ಯರ್ಥ. ನವೆಂಬರ್ ತಿಂಗಳ ರಜಾಪಟ್ಟಿ ಹೀಗಿದೆ:ನವೆಂಬರ್ 1: ಕನ್ನಡ ರಾಜ್ಯೋತ್ಸವ (ಕರ್ನಾಟಕದಲ್ಲಿ ಬ್ಯಾಂಕ್ ಗಳಿಗೆ ರಜೆ)ನವೆಂಬರ್ 6: ಭಾನುವಾರನವೆಂಬರ್ 8: ಗುರು ನಾನಕ್ ಜಯಂತಿ/ಕಾರ್ತಿಕ ಪೂರ್ಣಿಮ/ರಹಸ್ ಪೂರ್ಣಿಮ (ತ್ರಿಪುರ, ಗುಜರಾತ್, ಕರ್ನಾಟಕ, ತಮಿಳು ನಾಡು, ಸಿಕ್ಕಿಂ, ಅಸ್ಸಾಂ, ಮಣಿಪುರ, ಕೇರಳ, ಗೋವ, ಬಿಹಾರ ಹಾಗೂ ಮೇಘಾಲಯ ಹೊರತುಪಡಿಸಿ ಇತರ ಎಲ್ಲ ರಾಜ್ಯಗಳಲ್ಲಿಯೂ ಬ್ಯಾಂಕ್ ಗಳಿಗೆ ರಜೆಯಿದೆ.ನವೆಂಬರ್ 11: ಕನಕದಾಸ ಜಯಂತಿ/ವಾಂಗಲ ಹಬ್ಬ (ಕರ್ನಾಟಕ, ಮೇಘಾಲಯಗಳಲ್ಲಿ ಬ್ಯಾಂಕುಗಳಿಗೆ ರಜೆ).ನವೆಂಬರ್ 12: ಎರಡನೇ ಶನಿವಾರ ಭಾರತೀಯ ಹೂಡಿಕೆದಾರರ ನಂ.1 ಆಯ್ಕೆ ಎಫ್ ಡಿ ಅಲ್ಲ, ಮ್ಯೂಚ್ಯುವಲ್ ಫಂಡ್ಸ್: ಸಮೀಕ್ಷೆ ನವೆಂಬರ್ 13: ಭಾನುವಾರನವೆಂಬರ್ 20: ಭಾನುವಾರನವೆಂಬರ್ 23: ಮೇಘಾಲಯದಲ್ಲಿ ಸೆಂಗ್ ಕುಸ್ನೆಮ್ ಅಥವಾ ಸೆಂಗ್ ಕುಟ್ ಸ್ನೆಮ್ ಪ್ರಯುಕ್ತ ಬ್ಯಾಂಕಿಗೆ ರಜೆ.ನವೆಂಬರ್ 26: ನಾಲ್ಕನೇ ಶನಿವಾರನವೆಂಬರ್ 27: ಭಾನುವಾರ