: ಬಂಗಾರ, ಬೆಳ್ಳಿ ದರದಲ್ಲಿ ಕೊಂಚ ಏರಿಕೆ! ದೇಶದ ಜನ ದೀಪಾವಳಿ ಹಬ್ಬದ ಸಂಭ್ರಮದಲಿದ್ದಾರೆ. ಏರಿಳಿತ ಕಾಣುತ್ತಿದ್ದ ಚಿನ್ನದ ಬೆಲೆಗಳು ಕಳೆದ ಕೆಲ ದಿನಗಳಿಂದ ಕೊಂಚ ಮಟ್ಟಿಗೆ ಏರಿಕೆ ಕಾಣುತ್ತಿದೆ. ಶುಕ್ರವಾರಕ್ಕೆ ಹೋಲಿಸಿದರೆ, ಶನಿವಾರವೂ ಚಿನ್ನದ ಬೆಲೆಗಳಲ್ಲಿ ಏರಿಕೆಯಾಗಿದೆ. ಬೆಂಗಳೂರು (ಅ.22):ಷೇರು ಮಾರುಕಟ್ಟೆ ಮುಂದಿನ ಕೆಲ ದಿನಗಳ ಕಾಲ ಹಬ್ಬದ ಕಾರಣ ಮುಚ್ಚಿರುತ್ತದೆ. ಇದರಿಂದಾಗಿ ಜನರು ಚಿನ್ನದ ಮೇಲಿನ ಹೂಡಿಕೆಯತ್ತ ಗಮನ ನೀಡುತ್ತಾರೆ. ಅದರ ಬೆನ್ನಲ್ಲಿಯೇ ದೇಶಾದ್ಯಂತ ಶನಿವಾರ ಚಿನ್ನದ ಬೆಲೆಗಳಲ್ಲಿ ಕೊಂಚ ಏರಿಕೆಯಾಗಿದೆ. ಇಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟು ಅನ್ನೋದನ್ನ ನೋಡೋಣ. ಒಂದು ಗ್ರಾಂ ಚಿನ್ನ (1GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,70524 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,133 ಎಂಟು ಗ್ರಾಂ ಚಿನ್ನ (8GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 37,64024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,064 ಹತ್ತು ಗ್ರಾಂ ಚಿನ್ನ (10GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 47,05024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,330 ನೂರು ಗ್ರಾಂ ಚಿನ್ನ (100GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,70,50024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,13,300 ಬೆಂಗಳೂರು ಹಾಗೂ ಇತರೆಡೆ ಇಂದಿನ ಚಿನ್ನದ ದರಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,050 ಆಗಿದ್ದರೆ ಚೆನ್ನೈ 47,400, ಮುಂಬೈ 47,000 ಹಾಗೂ ಕೋಲ್ಕತ್ತಾದಲ್ಲಿ 47,000 ಹಾಗೆಯೇ ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,150 ರೂ. ಆಗಿದೆ. ಬೆಂಗಳೂರು ಹಾಗೂ ಇತರೆಡೆ ಬೆಳ್ಳಿ ದರ:ಬೆಂಗಳೂರಲ್ಲಿ 10 , 100 , 1000 (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 632, ರೂ. 6,320 ಹಾಗೂ ರೂ. 63,200 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 63,200 ಆಗಿದ್ದರೆ, ಮುಂಬೈನಲ್ಲಿ ರೂ.57,700 ಹಾಗೂ ಕೋಲ್ಕತ್ತದಲ್ಲಿ ಸಹ ರೂ. 57,700 ಗಳಾಗಿದೆ. ಅಲ್ಲದೆ, ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಸಹ ಇಂದಿನ ಬೆಳ್ಳಿ ದರ ರೂ. 57,700 ಆಗಿದೆ. ಸಾಮಾನ್ಯವಾಗಿ ಜನರು ಚಿನ್ನವನ್ನು ಆಭರಣ ದೃಷ್ಟಿಯಿಂದ ಮಾತ್ರವಲ್ಲ ಹೂಡಿಕೆ ದೃಷ್ಟಿಯಲ್ಲೂ ನೋಡುತ್ತಾರೆ. ಮದುವೆ, ಮುಂಜಿಗಳಗೆ ಚಿನ್ನವನ್ನು ಖರೀದಿಸುತ್ತಾರಾದರೂ, ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎನ್ನುವ ಅಂದಾಜಿನಲ್ಲಿ ಇದನ್ನು ಮಾಡುತ್ತಾರೆ. ಆಭರಣದ ಬದಲು ಚಿನ್ನದ ಬಿಸ್ಕೆಟ್‌, ಚಿನ್ನದ ಬಾಂಡ್ ಖರೀದಿಸುವ ಕ್ರಮವೂ ಇದೆ. ಇದು ಎಂದಿಗೂ ಸೆಕೆಂಡ್‌ ಹ್ಯಾಂಡ್‌ ಎನಿಸಿಕೊಳ್ಳುವುದಿಲ್ಲ. ಷೇರು ಮಾರುಕಟ್ಟೆಯ ಹೂಡಿಕೆದಾರರು ಮಾತ್ರವಲ್ಲದೇ ಜನ ಸಾಮಾನ್ಯರು ಕೂಡ ಚಿನ್ನದ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ.