- ಯೋಜನೆ: ರೈತರ ಬ್ಯಾಂಕ್‌ ಖಾತೆಗೆ 16 ಸಾವಿರ ಕೋಟಿ ರೂ. ವರ್ಗಾಯಿಸಿದ ಪ್ರಧಾನಿ 11 ಕೋಟಿಗೂ ಅಧಿಕ ಫಲಾನುಭವಿ ರೈತರಿಗೆ 16 ಸಾವಿರ ಕೋಟಿ ರೂ. ಅನ್ನು ಅವರ ಬ್ಯಾಂಕ್‌ ಖಾತೆಗೆ ಪ್ರಧಾನಿ ಮೋದಿ ವರ್ಗಾಯಿಸಿದ್ದಾರೆ. ಪಿಎಂ ಕಿಸಾನ್‌ ಯೋಜನೆಯ ಭಾಗವಾಗಿ ಈ ಹಣ ಸಂದಾಯವಾಗಿದೆ. ದೇಶದ ರೈತರಿಗೆ () ನೀಡುತ್ತಿರುವ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಪಿಎಂ - ಕಿಸಾನ್ ( - ) ಯೋಜನೆಯ 12ನೇ ಕಂತನ್ನು ಪ್ರಧಾನಿ ಮೋದಿ ( ) ಅನ್ನದಾತರಿಗೆ ವರ್ಗಾಯಿಸಿದ್ದಾರೆ. ಪಿಎಂ - ಕಿಸಾನ್ ಯೋಜನೆಯ 11 ಕೋಟಿಗೂ ಅಧಿಕ ಫಲಾನುಭವಿ ರೈತರಿಗೆ 16 ಸಾವಿರ ಕೋಟಿ ರೂ. ಅನ್ನು ಅವರ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದಾರೆ. ದೀಪಾವಳಿಗೂ () ಮುನ್ನ ಹಾಗೂ ರಾಬಿ ಬಿತ್ತನೆ ಸಮಯಕ್ಕೂ ಮುನ್ನ ಈ ಹಣ ವರ್ಗಾಯಿಸಲಾಗಿದೆ. ಈ ಮೂಲಕ ಒಟ್ಟಾರೆ 2.16 ಲಕ್ಷ ಕೋಟಿ ರೂ. ಹಣವನ್ನು ರೈತರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್ ನಿಧಿ ( ) ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ವರ್ಷಕ್ಕೆ ಮೂರು ಕಂತುಗಳಲ್ಲಿ ತಲಾ 2,000 ರೂ. ಗಳಂತೆ ಒಟ್ಟು 6 ಸಾವಿರ ರೂ. ಅನ್ನು ನೀಡಲಾಗುತ್ತದೆ. ಫಲಾನುಭವಿಗಳಿಗಳ ಬ್ಯಾಂಕ್‌ ಅಕೌಂಟ್‌ಗಳಿಗೆ ನೇರವಾಗಿ ಇದನ್ನು ವರ್ಗಾಯಿಸಲಾಗುತ್ತದೆ. ಫೆಬ್ರವರಿ 2019 ರಲ್ಲಿ ಮೋದಿ ಸರ್ಕಾರ ಈ ಯೋಜನೆಯನ್ನು ಆರಂಭಿಸಲಾಯಿತಾದರೂ, ಡಿಸೆಂಬರ್ 2018 ರಿಂದಲೇ ಇದು ಜಾರಿಗೆ ಬಂದಿದೆ. ಇದನ್ನು ಓದಿ: ಬ್ರ್ಯಾಂಡ್‌ ಯೂರಿಯಾ ನಾಳೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ ರಾಷ್ಟ್ರ ರಾಜಧಾನಿ ನವದೆಹಲಿಯ 2 ದಿನಗಳ ಕಾಲ ನಡೆಯುತ್ತಿರುವ ಪಿಎಂ - ಕಿಸಾನ್‌ ಸಮ್ಮಾನ್‌ ಸಮ್ಮೇಳನ - 2022 ರಲ್ಲಿ ಪ್ರಧಾನಿ ಮೋದಿ ರೈತರಿಗ 12ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹಾಗೂ ಕೆಮಿಕಲ್ಸ್ ಮತ್ತು ರಸಗೊಬ್ಬರ ಸಚಿವ ಮನ್ಸುಖ್‌ ಮಾಂಡವಿಯ ಸಹ ಭಾಗಿಯಾಗಿದ್ದರು.ದೇಶದ ವಿವಿಧ ಭಾಗಗಳಿಂದ ಬಂದಿದ್ದ 13,500 ಸಾವಿರಕ್ಕೂ ಅಧಿಕ ರೈತರು ಹಾಗೂ ಸುಮಾರು 1,500 ಅಗ್ರಿ - ಸ್ಟಾರ್ಟಪ್‌ಗಳು ಸಹ ಈ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ. ಇನ್ನು, ಸಂಶೋಧಕರು, ನೀತಿ ನಿರೂಪಕರು ಹಾಗೂ ಹಲವು ಇತರರು ಸಹ ಈ 2 ದಿನಗಳ ಸಮ್ಮೇಳನದಲ್ಲಿ ಹಾಜರಾಗಿದ್ದಾರೆ. ಪಿಎಂ - ಕಿಸಾನ್‌ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಶೇ. 100 ರಷ್ಟು ಹಣವನ್ನು ಕೆಂದ್ರ ಸರ್ಕಾರವೇ ರೈತರಿಗೆ ವರ್ಗಾವಣೆ ಮಾಡುತ್ತದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಯೋಜನೆಗೆ ಅರ್ಹರಾಧ ರೈತರನ್ನು ಹುಡುಕಿ ಸೇರ್ಪಡೆ ಮಾಡುತ್ತವೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಮೋದಿ ಸರ್ಕಾರದ ಪ್ಲ್ಯಾನ್‌ಗಳಲ್ಲಿ ಇದು ಸಹ ಒಂದು. ಇದನ್ನೂ ಓದಿ:ಗದಗ, ಕೊಪ್ಪಳದಲ್ಲಿ ಯೂರಿಯಾಕ್ಕೆ ಅಂಗಡಿಗಳ ಮುಂದೆ ರೈತರ ಕ್ಯೂ! ಅಲ್ಲದೆ, ಇದೇ ವೇಳೆ, ಒಂದು ದೇಶ ಒಂದು ರಸಗೊಬ್ಬರ’ ( ) ಯೋಜನೆಯಡಿ ‘ಭಾರತ್‌’ () ಬ್ರ್ಯಾಂಡ್‌ನ ಯೂರಿಯಾವನ್ನು () ಪ್ರಧಾನಿ ನರೇಂದ್ರ ಮೋದಿ ( ) ಅವರು ಸೋಮವಾರ ಚಾಲನೆ ನೀಡಿದ್ದಾರೆ. ಇದರಿಂದಾಗಿ ಯೂರಿಯಾಗೆ ಇನ್ನು ದೇಶಾದ್ಯಂತ ಒಂದೇ ಹೆಸರಿರಲಿದೆ. ಇದೇ ವೇಳೆ, ‘ಪಿಎಂ-ಕಿಸಾನ್‌’ ( - ) ಯೋಜನೆಯಡಿ 8.5 ಕೋಟಿ ರೈತರ ಬ್ಯಾಂಕ್‌ ಖಾತೆಗಳಿಗೆ 16,000 ಕೋಟಿ ರೂ. ಗಳನ್ನು ವರ್ಗಾಯಿಸಲಿದ್ದಾರೆ. ರೈತರಿಗೆ ವಾರ್ಷಿಕವಾಗಿ ಮೂರು ಕಂತುಗಳಲ್ಲಿ 6,000 ರೂ. ವರ್ಗಾಯಿಸುವ ಯೋಜನೆ ಇದಾಗಿದೆ. ಈ ಮಧ್ಯೆ, 600 ಪಿಎಂ ಕಿಸಾನ್‌ ಸಮೃದ್ಧಿ ಕೇಂದ್ರಗಳಿಗೂ ಅವರು ಚಾಲನೆ ನೀಡಲಿದ್ದಾರೆ.