2047ರ ವೇಳೆಗೆ 30 ಟ್ರಿಲಿಯನ್ ಡಾಲರ್‌ ಮೌಲ್ಯ ಆಗಲಿದೆ: ವಿಶ್ವಾಸ 2047 ರ ವೇಳೆಗೆ ಭಾರತದ ಆರ್ಥಿಕತೆಯ ಮೌಲ್ಯ 30 ಟ್ರಿಲಿಯನ್‌ ಅಮೆರಿಕ ಡಾಲರ್‌ಗಿಂತ ಹೆಚ್ಚಿನದ್ದಾಗಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್‌ ಗೋಯಲ್‌ ಹೇಳಿದ್ದಾರೆ. ರೂಪಾಯಿ () ಮೌಲ್ಯದ ಬಗ್ಗೆ ಅಮೆರಿಕದಲ್ಲಿ ( ) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ( ) ಹೇಳಿಕೆ ನೀಡಿದ್ದಕ್ಕೆ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ, ಡಾಲರ್ () ಬಲವಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಈಗ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್‌ ಗೋಯಲ್‌ ( ) ಅವರು 2047 ರ ವೇಳೆಗೆ ಭಾರತದ ಆರ್ಥಿಕತೆಯ ಮೌಲ್ಯ 30 ಟ್ರಿಲಿಯನ್‌ ಅಮೆರಿಕ ಡಾಲರ್‌ಗಿಂತ ಹೆಚ್ಚಿನದ್ದಾಗಲಿದೆ ಎಂದು ಶನಿವಾರ ಹೇಳಿದ್ದಾರೆ. ಭಾರತೀಯ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್‌ ಮೌಲ್ಯವನ್ನಾಗಿ ಮಾಡುವ ಕೇಂದ್ರ ಸರ್ಕಾರದ ಈ ಹಿಂದಿನ ಭರವಸೆಯ ವಿರುದ್ಧ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ವಾಗ್ದಾಳಿ ಮುಂದುವರೆಸಿದ ನಡುವೆಯೇ, ಪಿಯೂಶ್‌ ಗೋಯಲ್‌ ಅವರು ಈ ಹೇಳಿಕೆ ನೀಡಿದ್ದಾರೆ.ಚೆನ್ನೈನಲ್ಲಿ ನಡೆದ ರಫ್ತುದಾರರ ಸಮಾವೇಶದಲ್ಲಿ ( ) ಮಾತನಾಡಿದ ಕೇಂದ್ರ ಸಚಿವ ಪಿಯೂಶ್‌ ಗೋಯಲ್, "2047 ರ ವೇಳೆಗೆ ದೇಶವು 30 ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚಿನ ಆರ್ಥಿಕತೆಯನ್ನು ಹೊಂದಲು ನಾವು ಬಯಸುತ್ತೇವೆ. ಮುಂದಿನ 8 ವರ್ಷಗಳಲ್ಲಿ, ನಾವು 3x ಕಾರ್ಯಕ್ಷಮತೆಯನ್ನು ನೋಡಲು ಬಯಸುತ್ತೇವೆ. ಇದರಿಂದ 2 ಟ್ರಿಲಿಯನ್ ಡಾಲರ್ ರಫ್ತು () ಆರ್ಥಿಕತೆಯಾಗಬಹುದು.ಇನ್ನು, ಭಾರತ ಇದನ್ನು ಸಾಧಿಸಬಹುದು ಮಾತ್ರವಲ್ಲ, 2030 ರ ವೇಳೆಗೆ ಇದನ್ನು ಮೀರಬಹುದು ಎಂದೂ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ:ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ; ಡಾಲರ್ ಬಲವಾಗುತ್ತಿದೆ: ಇನ್ನು, ಮುಂದಿನ 12 ತಿಂಗಳಲ್ಲಿ ರಷ್ಯಾಕ್ಕೆ ಸುಮಾರು 8-10 ಬಿಲಿಯನ್‌ ಅಮೆರಿಕ ಡಾಲರ್‌ ಹೆಚ್ಚುವರಿ ರಫ್ತು ಮತ್ತು ಯೂರೋಪ್ ಒಕ್ಕೂಟಕ್ಕೆ 15-20 ಬಿಲಿಯನ್‌ ಅಮೆರಿಕ ಡಾಲರ್‌ ಹೆಚ್ಚುವರಿ ರಫ್ತು ನಡೆಯಲಿದೆ ಎಂದೂ ಅವರು ಹೇಳಿದರು. ಈ ವರ್ಷ ಭಾರತೀಯ ಕರೆನ್ಸಿಯ ಮೌಲ್ಯದಲ್ಲಿ ಶೇಕಡಾ 8 ರಷ್ಟು ಕುಸಿತವನ್ನು ಸಮರ್ಥಿಸಿಕೊಂಡ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರೂಪಾಯಿ ದುರ್ಬಲವಾಗಿಲ್ಲ, ಆದರೆ ಡಾಲರ್ ಬಲಗೊಂಡಿದೆ ಎಂದು ನಿನ್ನೆ ಹೇಳಿದ್ದರು. ಅವರ ಇ ಹೇಳಿಕೆ ಸಾಮಾಜಿಕ ಜಾಳತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ. ಅಮೆರಿಕದಲ್ಲಿ ನಡೆದ ಅಂತಾರಾಷ್ಟ್ರೀಯ ಹಣಕಾಸು ನಿಧಿ ( ) (ಐಎಂಎಫ್) () ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಗಳಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ನಿರ್ಮಲಾ ಸೀತಾರಾಮನ್, "ಮೊದಲು ನಾನು ಇದನ್ನು ರೂಪಾಯಿ ಮೌಲ್ಯದ ಕುಸಿತವಲ್ಲ, ಡಾಲರ್ ಬಲವರ್ಧನೆ ಎಂದು ನೋಡುತ್ತೇನೆ. ಡಾಲರ್ ನಿರಂತರವಾಗಿ ಬಲಗೊಳ್ಳುತ್ತಿದೆ’’ ಎಂದು ಹೇಳಿದ್ದರು. ಇದನ್ನೂ ಓದಿ:ದೇಶದ ಆರ್ಥಿಕತೆ ಭದ್ರವಾಗಿದೆ: ಸಮರ್ಥಿಸಿಕೊಂಡ ವಿತ್ತ ಸಚಿವೆ ಇನ್ನು, ಕೇಂದ್ರ ಸಚಿವೆಯ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್, ಸರ್ಕಾರದ "ಅಸಮರ್ಥತೆ ಮತ್ತು ತಪ್ಪು ನೀತಿಗಳಿಗೆ" ಜನರು ಇನ್ನೂ ಎಲ್ಲಿಯವರೆಗೆ ಬೆಲೆ ತೆರುತ್ತಾರೆ ಎಂದು ಪ್ರಶ್ನೆ ಮಾಡಿದೆ.