ಇನ್ಮುಂದೆ 24×7 ತೆರೆದಿರಲಿದೆ ಎಲ್ಲಾ ವ್ಯಾಪಾರಿ ಮಳಿಗೆ: ಮುಂದಿನ ವಾರದಿಂದಲೇ ಜಾರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇನ್ನು ಮೇಲೆ ದಿನದ 24 ಗಂಟೆಯೂ ವಾರದ ಏಳು ದಿನವೂ ಎಲ್ಲಾ ವ್ಯಾಪಾರ ವಹಿವಾಟುಗಳು ತೆರೆದಿರಲಿವೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ಈ ವಿಚಾರಕ್ಕೆ ಸಂಬಂಧಿಸಿದ 300 ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿಗೊಳಿಸಿದ್ದಾರೆ. ದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇನ್ನು ಮೇಲೆ ದಿನದ 24 ಗಂಟೆಯೂ ವಾರದ ಏಳು ದಿನವೂ ಎಲ್ಲಾ ವ್ಯಾಪಾರ ವಹಿವಾಟುಗಳು ತೆರೆದಿರಲಿವೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ಈ ವಿಚಾರಕ್ಕೆ ಸಂಬಂಧಿಸಿದ 300 ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿಗೊಳಿಸಿದ್ದಾರೆ. ದೆಹಲಿ ಸರ್ಕಾರ ಹಾಗೂ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಎರಡೂ ಕಳೆದ ಐದು ವರ್ಷಗಳಿಂದ ಈ 24x7 ದೆಹಲಿ ಯೋಜನೆಯ ಪರ ವಕಾಲತು ನಡೆಸಿವೆ. ಹೊಟೇಲ್ ರೆಸ್ಟೋರೆಂಟ್‌ಗಳಿಂದ ಹಿಡಿದು ಸಾರಿಗೆ ಸೇವೆ, ಬಿಪಿಒಗಳಿಂದ ಹಿಡಿದು ಆನ್‌ಲೈನ್ ವಿತರಣಾ ಸೇವೆಗಳವರೆಗೆ ಎಲ್ಲವೂ 24x7 ಕಾರ್ಯನಿರ್ವಹಿಸಲಿದ್ದು, ಈ ರೀತಿ 24x7 ತೆರೆದಿರುವುದಕ್ಕೆ ಅರ್ಜಿ ಸಲ್ಲಿಸುವ ಎಲ್ಲಾ ವ್ಯಾಪಾರೋದ್ಯಮಿಗಳಿಗೆ ಮುಂದಿನ ವಾರದಿಂದ ದೆಹಲಿಯಲ್ಲಿ 24×7 ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುತ್ತದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ( ) ವಿ ಕೆ ಸಕ್ಸೇನಾ ( ) ಅವರು 314 ಸ್ಥಳಗಳಿಗೆ ದಿನವಿಡೀ ಕಾರ್ಯನಿರ್ವಹಿಸಲು ಅವಕಾಶ ನೀಡುವ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ. ಅವುಗಳಲ್ಲಿ ಕೆಲವು ಸಂಸ್ಥೆಗಳು 2016ರಲ್ಲಿಯೇ ಅರ್ಜಿ ಸಲ್ಲಿಸಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಏಳು ದಿನಗಳೊಳಗೆ ಅಧಿಸೂಚನೆ ಹೊರಡಿಸುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್‌ ನಿರ್ದೇಶನ ನೀಡಿದ್ದಾರೆ. ದೆಹಲಿ ಅಂಗಡಿಗಳು ಮತ್ತು ಸ್ಥಾಪನೆ ಕಾಯಿದೆ, 1954 ರ ಸೆಕ್ಷನ್ 14, 15 ಮತ್ತು 16 ರ ಅಡಿಯಲ್ಲಿ ಈ ವಿನಾಯಿತಿ ನೀಡಲಾಗುತ್ತದೆ. ಈ ನಿರ್ಧಾರವು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾದ ಉತ್ತಮ ಮತ್ತು ಅನುಕೂಲಕರ ವ್ಯಾಪಾರಿ ವಾತಾವರಣವನ್ನು ಉತ್ತೇಜಿಸಲಿದೆ. ಈ ನಿರ್ಧಾರವು ನಗರದಲ್ಲಿ ಹೆಚ್ಚು ನೀರೀಕ್ಷಿಸಿದ್ದ ರಾತ್ರಿ ಜೀವನಕ್ಕೆ ಪೂರಕವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಈ ರೀತಿ ವಿನಾಯಿತಿಗಳನ್ನು ಪಡೆಯಲು ಸಂಸ್ಥೆಗಳು, ವ್ಯಾಪಾರಸ್ಥರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕೇಜ್ರಿವಾಲ್ ಸರ್ಕಾರಕ್ಕೆ ಮತ್ತೊಂದು ಹಿನ್ನಡೆ, ವಿವಾದ ಸೃಷ್ಟಿಸಿದ ಸಚಿವ ರಾಜೇಂದ್ರ ಪಾಲ್ ಗೌತಮ್ ರಾಜೀನಾಮೆ! ಮೂಲ ಕಾಯಿದೆಯ ಸೆಕ್ಷನ್ 14 ರ ಪ್ರಕಾರ ದೆಹಲಿಯಲ್ಲಿ ರಾತ್ರಿ 9 ರಿಂದ ಬೆಳಗ್ಗೆ 7 ರವರೆಗೆ ಕೆಲಸ ಮಾಡಲು ಮಹಿಳೆಯರು ಅಥವಾ ಯುವಕರನ್ನು ಕೇಳುವಂತಿಲ್ಲ. ಸೆಕ್ಷನ್ 15 ರ ಪ್ರಕಾರ, ಸಂಸ್ಥೆಗಳನ್ನು ತೆರೆಯುವ ಮತ್ತು ಮುಚ್ಚುವ ಸಮಯವನ್ನು ನಿಗದಿಪಡಿಸುವ ಹಕ್ಕನ್ನು ಸರ್ಕಾರ ಹೊಂದಿದೆ. 1979 ರ ಅಧಿಸೂಚನೆಯಲ್ಲಿ ಇದನ್ನು ಬೆಳಗ್ಗೆ 9 ರಿಂದ ಸಂಜೆ 7 ರವರೆಗೆ ನಿಗದಿಪಡಿಸಲಾಗಿತ್ತು. ಜೊತೆಗೆ ವಿಭಾಗ 16ರ ಅಡಿ ಬರುವ ಸಂಸ್ಥೆಗಳನ್ನು ವಾರಕ್ಕೆ ಒಂದು ದಿನ ಮುಚ್ಚುವಂತೆ ಆದೇಶಿಸಿತ್ತು. 2004 ರಲ್ಲಿ, ಈ ಕಾಯಿದೆಗೆ ಬದಲಾವಣೆಗಳನ್ನು ಮಾಡಲಾಯಿತು ಮತ್ತು ತೆರೆಯುವ ಸಮಯವನ್ನು 11 ಗಂಟೆಗೆ ವಿಸ್ತರಿಸಲಾಯಿತು. ಆದಾಗ್ಯೂ, ಇದು ಕಡ್ಡಾಯವಾಗಿರಲಿಲ್ಲ. ಇದರ ಜೊತೆಗೆ ವಾರದಲ್ಲಿ ಒಂದು ದಿನ ಅಂಗಡಿಗಳನ್ನು ಮುಚ್ಚುವ ಆದೇಶವನ್ನು ಸಡಿಲಿಸಲಾಗಿದೆ. ದೆಹಲಿಯ ಆಪ್‌ ಸಚಿವನಿಂದ ವಿರೋಧಿ ಪ್ರಮಾಣ: ಗೌತಮ್ ವಜಾ ಮಾಡಲು ಆಗ್ರಹ ಕಾಯಿದೆಯ ಸೆಕ್ಷನ್ 14, 15 ಮತ್ತು 16 ರ ಅಡಿಯಲ್ಲಿ ಕಾರ್ಮಿಕ ಮತ್ತು ಭದ್ರತೆ ( ) ಮುಂತಾದ ಕಲ್ಯಾಣಕ್ಕೆ ಒಳಪಡುವ ಕೆಲವು ಷರತ್ತುಗಳನ್ನು ಹೇರಿ 24X7 ಆಧಾರದ ಮೇಲೆ ವಾಣಿಜ್ಯ ಸಂಸ್ಥೆಗಳನ್ನು ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು. ಲೆಫ್ಟಿನೆಂಟ್ ಗವರ್ನರ್‌ ಕಚೇರಿ ಅಧಿಕಾರಿಗಳ ಪ್ರಕಾರ, ಸಂಸ್ಥೆಗಳು () ಈ ರೀತಿ ವಿನಾಯಿತಿಗಾಗಿ ಅರ್ಜಿಗಳನ್ನು ಕಳುಹಿಸುತ್ತಿವೆ ಆದರೆ ಕಾರ್ಮಿಕ ಇಲಾಖೆಯು ( ) ಅವರೊಂದಿಗೆ ನ್ಯಾಯಯುತವಾಗಿ ವ್ಯವಹರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.