: ಆಭರಣ ಪ್ರಿಯರಿಗೆ ಶಾಕ್‌; ಮತ್ತಷ್ಟು ದುಬಾರಿಯಾದ ಬಂಗಾರ ನೀವು ಇಂದು ಚಿನ್ನ, ಬೆಳ್ಳಿ ಆಭರಣ ಖರೀದಿಗೆ ಪ್ಲ್ಯಾನ್‌ ಮಾಡುತ್ತಿದ್ದೀರಾ. ಯಾವ್ಯಾವ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ. ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆಯಾಗಿದೆ ಅನ್ನೋ ಬಗ್ಗೆ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ.. 29th 2022:ಮಹಿಳೆಯರು ಹೆಚ್ಚು ಆಭರಣ () ಪ್ರಿಯರು. ಅದರಲ್ಲಿ, ಭಾರತದಲ್ಲಂತೂ ಆಭರಣ ಪ್ರಿಯರ ಸಂಖ್ಯೆ ಹಾಗೂ ಶುಭ ಸಮಾರಂಭಗಳ ಸಂಖ್ಯೆ ಹೆಚ್ಚೇ ಇರುತ್ತದೆ. ಈ ಹಿನ್ನೆಲೆ ಆಭರಣಗಳ ವಹಿವಾಟು ಸಹ ಹೆಚ್ಚಿರುತ್ತದೆ. ಪ್ರತಿನಿತ್ಯ ಬಂಗಾರ () , ಬೆಳ್ಳಿ () ದರದಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಹಾಗಾದ್ರೆ, ಇಂದು ಬೆಂಗಳೂರಿನಲ್ಲಿ () ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ..? ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ..? ನೋಡೋಣ ಬನ್ನಿ.. ಇಂದು ಬೆಂಗಳೂರಿನಲ್ಲಿ ಬಂಗಾರದ ದರದಲ್ಲಿ ಏರಿಕೆಯಾಗಿದೆ. ಅದೇ ರೀತಿ, ಬೆಳ್ಳಿ ದರದಲ್ಲಿ ದೇಶದ ಹಲವೆಡೆ ಏರಿಕೆಯಾಗಿದೆ; ಆದರೆ ಬೆಂಗಳೂರಿನಲ್ಲಿ ಬೆಳ್ಳಿಯ ದರ ಕುಸಿತ ಕಂಡಿದೆ. ಇಂದಿನ ಬೆಲೆ ವಿವರ ಹೀಗಿದೆ ನೋಡಿ..ಒಂದು ಗ್ರಾಂ ಚಿನ್ನ (1GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,64524 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,067 ಇದನ್ನು ಓದಿ:, : ಚಿಕ್ಕಮಗಳೂರಲ್ಲಿ ಇಳಿಕೆಯಾದ ಪೆಟ್ರೋಲ್‌, ಡೀಸೆಲ್‌ ಬೆಲೆ ಎಂಟು ಗ್ರಾಂ ಚಿನ್ನ (8GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 37,16024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,536 ಹತ್ತು ಗ್ರಾಂ ಚಿನ್ನ (10GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 46,45024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 50,670 ನೂರು ಗ್ರಾಂ ಚಿನ್ನ (100GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,64,50024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,06,700 ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46,450 ರೂ. ಆಗಿದ್ದು, ನಿನ್ನೆಗಿಂತ ದರ ಹೆಚ್ಚಾಗಿದೆ. ಇನ್ನು, ದೇಶದ ಇತರೆ ಪ್ರಮುಖ ನಗರಗಳಾದ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 46,800, ರೂ. 46,400, ರೂ. 46,400 ಇದ್ದು, ನಿನ್ನೆಗಿಂತ ಬೆಲೆಯಲ್ಲಿ ಹೆಚ್ಚಾಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ಹೊಸ ದೆಹಲಿಯಲ್ಲಿ ಸಹ ಚಿನ್ನದ ಬೆಲೆ ಗುರುವಾರ 46,550 ರೂ. ಆಗಿದ್ದು, ನಿನ್ನೆಯ ದರಕ್ಕಿಂತಲೂ ಹೆಚ್ಚಾಗಿದೆ. ಇಂದಿನ ಬೆಳ್ಳಿ ದರಇನ್ನು, ದೇಶದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರದಲ್ಲಿ ಏರಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ - ಇಳಿಕೆಯಾದಂತೆಯೂ ಚಿನ್ನ - ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ. ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್ದೇಶದ ಹಲವು ನಗರಗಳಲ್ಲಿ ಇಂದು ಬಂಗಾರದ ದರ ಏರಿಕೆಯಾಗಿದ್ದು, ಬೆಳ್ಳಿ ದರದಲ್ಲಿ ಸಹ ದೇಶದ ಹಲವೆಡೆ ಹೆಚ್ಚಾಗಿದೆ. ಆದರೆ, ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ಇಂದು, ಬೆಂಗಳೂರಿನಲ್ಲಿ 10 , 100 , 1000 (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 564, ರೂ. 5,640 ಹಾಗೂ ರೂ. 56,400 ಗಳಾಗಿವೆ. ಇನ್ನು, ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 61,500 ಆಗಿದ್ದರೆ, ಮುಂಬೈನಲ್ಲಿ ರೂ. 56,400 ಹಾಗೂ ಕೋಲ್ಕತ್ತದಲ್ಲಿ ಸಹ ರೂ. 56,400 ಬೆಲೆ ಇದೆ. ಹಾಗೆ, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸಹ ಇಂದಿನ ಬೆಳ್ಳಿ ದರ ರೂ. 56,400 ರೂ. ಆಗಿದೆ.