: ದೇಶದಲ್ಲಿ ಇಳಿಕೆಯಾದ ಬಂಗಾರದ ಬೆಲೆ; ಹೆಚ್ಚಾದ ಬೆಳ್ಳಿ ದರ ನೀವು ಇಂದು ಚಿನ್ನ, ಬೆಳ್ಳಿ ಆಭರಣ ಖರೀದಿಗೆ ಪ್ಲ್ಯಾನ್‌ ಮಾಡುತ್ತಿದ್ದೀರಾ. ಯಾವ್ಯಾವ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಅನ್ನೋ ಬಗ್ಗೆ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ.. 13th, 2022:ದೇಶದ ಮಹಿಳೆಯರು ಸಾಮಾನ್ಯವಾಗಿ ಆಭರಣ ಪ್ರಿಯರು. ಈ ಹಿನ್ನೆಲೆ ಆಭರಣಗಳ ವಹಿವಾಟು ಸಹ ಹೆಚ್ಚಿರುತ್ತದೆ. ಈ ಹಿನ್ನೆಲೆ ದಿನನಿತ್ಯದ ಬಂಗಾರ (), ಬೆಳ್ಳಿ () ದರ ಎಷ್ಟಿರುತ್ತದೆ ಅನ್ನೋದರ ಮೇಲೆ ಹಲವರು ಕಣ್ಣಿಟ್ಟಿರುತ್ತಾರೆ. ಕೆಲ ದಿನಗಳಿಂದ ಚಿನ್ನ, ಬೆಳ್ಳಿ ದರ ಏರಿಕೆ - ಇಳಿಕೆಯಾಗುತ್ತಲೇ ಇದೆ. ಇದೇ ರೀತಿ ಇಂದು ದೇಶದಲ್ಲಿ ಚಿನ್ನದ ದರ ಕಡಿಮೆಯಾಗಿದ್ದು, ಆದರೆ ಬೆಳ್ಳಿ ಬೆಲೆ ಗಗನಮುಖಿಯಾಗಿದೆ. ಈ ಮಧ್ಯೆ, ನೀವು ಇಂದು ಬಂಗಾರ, ಬೆಳ್ಳಿ ಆಭರಣಗಳನ್ನು () ಖರೀದಿಸುವ ಪ್ಲ್ಯಾನ್‌ ಮಾಡುತ್ತಿದ್ದೀರಾ..? ಹಾಗಾದ್ರೆ, ಇಂದು ಬೆಂಗಳೂರಿನಲ್ಲಿ () ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ..? ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ..? ನೋಡೋಣ ಬನ್ನಿ.. ಇಂದು ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ದರದಲ್ಲಿ ಕಡಿಮೆಯಾಗಿದೆ. ಇಂದಿನ ಬೆಲೆ ವಿವರ ಹೀಗಿದೆ.. ಒಂದು ಗ್ರಾಂ ಚಿನ್ನ (1GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,67824 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,103 ಇದನ್ನು ಓದಿ:, : ಬೀದರ್‌ನಲ್ಲಿ ಇಳಿಕೆಯಾದ ಪೆಟ್ರೋಲ್‌, ಡೀಸೆಲ್‌ ದರ ಎಂಟು ಗ್ರಾಂ ಚಿನ್ನ (8GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 37,42424 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,824 ಹತ್ತು ಗ್ರಾಂ ಚಿನ್ನ (10GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 46,78024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,030 ನೂರು ಗ್ರಾಂ ಚಿನ್ನ (100GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,67,80024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,10,300 ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46,780 ರೂ.ಗೆ ಇಳಿಕೆಯಾಗಿದೆ. ಇನ್ನು, ದೇಶದ ಇತರೆ ಪ್ರಮುಖ ನಗರಗಳಾದ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,250, ರೂ. 46,730, ರೂ. 46,730 ಇದ್ದು, ನಿನ್ನೆಯ ದರಕ್ಕಿಂತ ಅಗ್ಗವಾಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ಸಹ ಮಂಗಳವಾರ ಚಿನ್ನದ ಬೆಲೆ 46,880 ರೂ. ಆಗಿದ್ದು, ನಿನ್ನೆಗಿಂತ ಕಡಿಮೆಯಾಗಿದೆ. ಇಂದಿನ ಬೆಳ್ಳಿ ದರಇನ್ನು, ದೇಶದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರದಲ್ಲಿ ಕಡಿಮೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ - ಇಳಿಕೆಯಾದಂತೆಯೂ ಚಿನ್ನ - ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ. ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್ದೇಶದ ಹಲವು ನಗರಗಳಲ್ಲಿ ಇಂದು ಬಂಗರದ ದರ ಕಡಿಮೆಯಾಗಿದ್ದರೂ, ಬೆಳ್ಳಿ ದರದಲ್ಲಿ ಏರಿಕೆಯಾಗಿದೆ. ಅದೇ ರೀತಿ, ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಸಹ ಬೆಳ್ಳಿ ದರ ನಿನ್ನೆಗಿಂತ ಜಾಸ್ತಿಯಾಗಿದೆ. ಇಂದು, ಬೆಂಗಳೂರಿನಲ್ಲಿ 10 , 100 , 1000 (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 624, ರೂ. 6,240 ಹಾಗೂ ರೂ. 62,400 ಗಳಾಗಿವೆ. ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 62,400 ಆಗಿದ್ದರೆ, ಮುಂಬೈನಲ್ಲಿ ರೂ. 57,000 ಹಾಗೂ ಕೋಲ್ಕತ್ತದಲ್ಲಿ ಸಹ ರೂ. 57,000 ಬೆಲೆ ಇದೆ. ಹಾಗೆ, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸಹ ಇಂದಿನ ಬೆಳ್ಳಿ ದರ ರೂ. 57,000ಗೆ ಹೆಚ್ಚಾಗಿದೆ.