, : ಬಳ್ಳಾರಿಯಲ್ಲಿ ಇಳಿಕೆ, ಉತ್ತರ ಕನ್ನಡದಲ್ಲಿ ಏರಿಕೆಯಾದ ಪೆಟ್ರೋಲ್‌ ದರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ, ಇತರೆ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಪ್ರತಿದಿನ ವ್ಯತ್ಯಾಸವಾಗುತ್ತಿರುತ್ತದೆ. ಹಾಗಿದ್ದರೆ, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ.. ಕಚ್ಚಾ ತೈಲ ಬೆಲೆ ( ) ಇತ್ತೀಚೆಗೆ ತೀವ್ರ ಕುಸಿತವಾಗಿದೆ. ಆದರೂ, ದೇಶದಲ್ಲಿ ಪೆಟ್ರೋಲ್‌ ( ), ಡೀಸೆಲ್‌ ಬೆಲೆ ( ) ಇಳಿಕೆಯಾಗಿಲ್ಲ. ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಬಳಿಕ ಕಚಚ್ಆ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆ ಇಂಧನ ಸಂಸ್ಥೆಗಳು ನಷ್ಟ ಸರಿದೂಗಿಸಿಕೊಳ್ಳುತ್ತಿವೆ ಎಂದು ಕೇಂದ್ರ ಸರ್ಕಾರ ದರ ಇಳಿಕೆ ಮಾಡದ ಬಗ್ಗೆ ಸಮರ್ಥನೆ ಮಾಡಿಕೊಂಡಿತ್ತು. ಕಳೆದ 3 - 4 ತಿಂಗಳಿಂದ ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ, ಚೆನ್ನೈ, ಕೋಲ್ಕತ್ತ, ಬೆಂಗಳೂರು ಸೇರಿ ದೇಶದ ಮಹಾನಗರಗಳಲ್ಲಿ ಹಾಗೂ ಹಲವೆಡೆ ಇಂಧನದ ದರದಲ್ಲಿ ( ) ಯಥಾಸ್ಥಿತಿ ಕಂಡುಬಂದಿದೆ. ಆದರೂ, ಇತರೆ ಹಲವು ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ - ಇಳಿಕೆ ಕಂಡುಬರುತ್ತಿದೆ. ದೇಶದ ಬಹುತೇಕ ಕಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬದಲಾಗುತ್ತಿರುತ್ತದೆ. ಹೀಗೆ, ರಾಜ್ಯದಲ್ಲೂ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಇಂಧನ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಕೆಲವರಿಗೆ ಪ್ರತಿನಿತ್ಯ ಪೆಟ್ರೋಲ್, ಡೀಸೆಲ್‌ ದರ ಚೆಕ್‌ ಮಾಡೋ ಅಭ್ಯಾಸವಿರುತ್ತದೆ. ನೀವು ಸಹ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ.. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.60ಬೆಂಗಳೂರು - ರೂ. 101.94ಬೆಂಗಳೂರು ಗ್ರಾಮಾಂತರ - ರೂ. 102.07ಬೆಳಗಾವಿ - ರೂ. 101.76ಬಳ್ಳಾರಿ - ರೂ. 103.34ಬೀದರ್ - ರೂ. 102.28ವಿಜಯಪುರ - ರೂ. 102.16ಚಾಮರಾಜನಗರ - ರೂ. 102.10ಚಿಕ್ಕಬಳ್ಳಾಪುರ - ರೂ. 101.94ಚಿಕ್ಕಮಗಳೂರು - ರೂ. 102.57ಚಿತ್ರದುರ್ಗ - ರೂ. 103.55ದಕ್ಷಿಣ ಕನ್ನಡ - ರೂ. 101.75ದಾವಣಗೆರೆ - ರೂ. 104.19ಧಾರವಾಡ - ರೂ. 101.71ಗದಗ - ರೂ. 102.38ಕಲಬುರಗಿ - ರೂ. 101.71ಹಾಸನ - ರೂ. 102.29ಹಾವೇರಿ - ರೂ. 102.41ಕೊಡಗು - ರೂ. 103.22ಕೋಲಾರ - ರೂ. 101.81ಕೊಪ್ಪಳ - ರೂ. 103.05ಮಂಡ್ಯ - ರೂ. 101.97ಮೈಸೂರು - ರೂ. 101.50ರಾಯಚೂರು - ರೂ. 101.84ರಾಮನಗರ - ರೂ. 102.39ಶಿವಮೊಗ್ಗ - ರೂ. 103.47ತುಮಕೂರು - ರೂ. 102.60ಉಡುಪಿ - ರೂ. 101.38ಉತ್ತರ ಕನ್ನಡ - ರೂ. 103.79ಯಾದಗಿರಿ - ರೂ. 102.43 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:ಬಾಗಲಕೋಟೆ - ರೂ. 88.51ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 88.01ಬೆಳಗಾವಿ - ರೂ. 87.76ಬಳ್ಳಾರಿ - ರೂ. 89.18ಬೀದರ್ - ರೂ. 88.23ವಿಜಯಪುರ - ರೂ. 88.11ಚಾಮರಾಜನಗರ - ರೂ. 88.04ಚಿಕ್ಕಬಳ್ಳಾಪುರ - ರೂ. 87.89ಚಿಕ್ಕಮಗಳೂರು - ರೂ. 88.32ಚಿತ್ರದುರ್ಗ - ರೂ. 89.15ದಕ್ಷಿಣ ಕನ್ನಡ - ರೂ. 87.68ದಾವಣಗೆರೆ - ರೂ. 89.73ಧಾರವಾಡ - ರೂ. 87.71ಗದಗ - ರೂ. 88.31ಕಲಬುರಗಿ - ರೂ. 87.71ಹಾಸನ - ರೂ. 88.01ಹಾವೇರಿ - ರೂ. 88.34ಕೊಡಗು - ರೂ. 88.82ಕೋಲಾರ - ರೂ. 87.77ಕೊಪ್ಪಳ - ರೂ. 88.91ಮಂಡ್ಯ - ರೂ. 87.92ಮೈಸೂರು - ರೂ. 87.49ರಾಯಚೂರು - ರೂ. 87.84ರಾಮನಗರ - ರೂ. 88.29ಶಿವಮೊಗ್ಗ - ರೂ. 89.17ತುಮಕೂರು - ರೂ. 88.49ಉಡುಪಿ - ರೂ. 87.36ಉತ್ತರ ಕನ್ನಡ - ರೂ. 89.52ಯಾದಗಿರಿ - ರೂ. 88.36