ಗಣೇಶ ಹಬ್ಬದಂದು ಚಿನ್ನ ಖರೀದಿಸ್ತೀರಾ.. ಹೇಗಿದೆ ಇಂದು ಬಂಗಾರದ ದರ ಇಂದು ಗೌರಿ ಹಬ್ಬದ ದಿನವಾದ ನಿನ್ನೆ ತುಸು ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ದೇಶಾದ್ಯಂತ ಜನ ಇಂದು ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಿದ್ದಾರೆ. ಚಿನ್ನ ಕೊಳ್ಳುವ ಉತ್ಸಾಹದಲ್ಲಿರುವರಿಗೆ ಇಂದಿನ ಚಿನ್ನದ ದರ ಇಲ್ಲಿದೆ. ಇಂದು ಗೌರಿ ಹಬ್ಬದ ದಿನವಾದ ನಿನ್ನೆ ತುಸು ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ದೇಶಾದ್ಯಂತ ಜನ ಇಂದು ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಿದ್ದಾರೆ. ಕೆಲವರು ಚಿನ್ನಾಭರಣ ಖರೀದಿಗೆ ವಿಶೇಷ ದಿನವನ್ನೇ ನೋಡುತ್ತಾರೆ. ಇಂದು ಹಬ್ಬವೂ ಆಗಿರುವುದರಿಂದ ಚಿನ್ನಾಭರಣ ಖರೀದಿ ಮಾಡುವವರು ಇಂದಿನ ಆಭರಣ ಚಿನ್ನದ ದರದ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಿದ್ದರೆ ಇಂದಿನ ಚಿನ್ನ ಹಾಗೂ ಬೆಳ್ಳಿ ಆಭರಣ ದರ ಹೇಗಿದೆ ನೋಡೋಣ... ಒಂದು ಗ್ರಾಂ ಚಿನ್ನ (1GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,72524 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,154 ಎಂಟು ಗ್ರಾಂ ಚಿನ್ನ (8GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 37,80024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,232 ಹತ್ತು ಗ್ರಾಂ ಚಿನ್ನ (10GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 47,25024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,540 ನೂರು ಗ್ರಾಂ ಚಿನ್ನ (100GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,72,50024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,15, 400 ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,260 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,900 ರೂ. 47,250, ರೂ. 47,250 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,400 ರೂ. ಆಗಿದೆ. ಇಂದಿನ ಬೆಳ್ಳಿ ದರಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ. ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿ ಸ್ವಲ್ಪ ಇಳಿಕೆ ಆಗಿದೆ. ಬೆಂಗಳೂರಲ್ಲಿ 10 , 100 , 1000 (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 536, ರೂ. 5,360 ಹಾಗೂ ರೂ. 53,600 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 60,100 ಆಗಿದ್ದರೆ, ಮುಂಬೈನಲ್ಲಿ ರೂ. 53,600 ಹಾಗೂ ಕೋಲ್ಕತ್ತದಲ್ಲಿ ಸಹ ರೂ. 53,600 ಗಳಾಗಿದೆ. ಅಲ್ಲದೆ, ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಸಹ ಇಂದಿನ ಬೆಳ್ಳಿ ದರ ರೂ. 53,600 ಆಗಿದೆ. ಒಮ್ಮೆ ಚಿನ್ನ ನೀವು ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ. ಆಭರಣದ ಬದಲು ಚಿನ್ನದ ಬಿಸ್ಕೆಟ್‌, ಚಿನ್ನದ ಬಾಂಡ್ ಖರೀದಿಸಿದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ ಇದೂ ಎಂದಿಗೂ ಸೆಕೆಂಡ್ ಹ್ಯಾಂಡ್ ಆಗುವುದಿಲ್ಲ. ಇದನ್ನು ನೀವು ಆ ದಿನದ ಚಿನ್ನದ ದರ ಹೇಗಿದೆ ಎಂಬುದರ ಮೇಲೆ ಬಹು ವರ್ಷಗಳ ನಂತರವೂ ಉತ್ತಮ ದರವನ್ನು ಪಡೆಯಬಹುದು. ಹೀಗಾಗಿಯೇ ಚಿನ್ನ ಹೂಡಿಕೆದಾರರ ಅಚ್ಚುಮೆಚ್ಚಿನ ಹೂಡಿಕೆಯ ವಿಷಯವಾಗಿದೆ. ಅಲ್ಲದೇ ಷೇರು ಮಾರುಕಟ್ಟೆಯ ಹೂಡಿಕೆದಾರರು ಮಾತ್ರವಲ್ಲದೇ ಜನ ಸಾಮಾನ್ಯರು ಕೂಡ ಚಿನ್ನದ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ.