: ಗ್ರೇಟ್‌ ಫ್ರೀಡಂ ಸೇಲ್‌ ದಿನಾಂಕ, ಡಿಸ್ಕೌಂಟ್ಸ್‌ ಬಗ್ಗೆ ಇಲ್ಲಿದೆ ಮಾಹಿತಿ.. ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ 2022 ಆಗಸ್ಟ್ 6 ರಿಂದ 10 ರವರೆಗೆ ನಡೆಯಲಿದೆ. ಪ್ರೈಮ್‌ ಗ್ರಾಹಕರಿಗೆ ಒಂದು ದಿನ ಮುನ್ನವೇ ಸೇಲ್‌ ಆರಂಭವಾಗಲಿದೆ. ನಿಮ್ಮಿಷ್ಟದ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಳ್ಳಲು ಕಾಯುತ್ತಿದ್ದೀರಾ.. ಹಾಗಾದ್ರೆ, ಮತ್ಯಾಕೆ ತಡ, ಈಗಲೇ ನೀವು ಇದಕ್ಕೆ ರೆಡಿಯಾಗಬಹುದು. ಏಕೆಂದರೆ ಅಮೆಜಾನ್‌ ಫ್ರೀಡಂ ಸೇಲ್‌ ಶೀಘ್ರದಲ್ಲೇ ಆರಂಭವಾಗುತ್ತಿದೆ. ಇಕಾಮರ್ಸ್ ದೈತ್ಯ ಸಂಸ್ಥೆಯಾದ ಅಮೆಜಾನ್‌ ಭಾರತದ 75ನೇ ಸ್ವಾತಂತ್ರ್ಯ ದಿನಕ್ಕೂ ( ) ಮುನ್ನವೇ ತನ್ನ ವಾರ್ಷಿಕ ಫ್ರೀಡಂ ಸೇಲ್‌ ದಿನಾಂಕಗಳನ್ನು ಪ್ರಕಟಿಸಿದೆ. ಹಾಗಾದ್ರೆ, ಈ ಸೇಲ್‌ ಆರಂಭವಾಗುವುದು ಯಾವಾಗ.? ಎಷ್ಟು ದಿನಗಳ ಕಾಲ ನಡೆಯುತ್ತದೆ ಎಂಬ ಬಗ್ಗೆ ವಿವರ ಇಲ್ಲಿದೆ.. ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ 2022 ( 2022) ಐದು ದಿನಗಳ ಕಾಲ ನಡೆಯಲಿದೆ. ಆಗಸ್ಟ್ 6 ರಂದು ಈ ಸೇಲ್‌ ಪ್ರಾರಂಭವಾಗಲಿದ್ದು, ಆಗಸ್ಟ್‌ 10 ರವರೆಗೆ ಇದು ನಡೆಯಲಿದೆ. ಇನ್ನು, ಅಮೆಜಾನ್‌ನ ಪ್ರೈಮ್‌ ಸದಸ್ಯರಿಗೆ ( ) 24 ಗಂಟೆಗಳ ಮೊದಲೇ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಕಳೆದ ತಿಂಗಳು ನಡೆದ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ( ) ಅನ್ನು ನೀವು ಮಿಸ್‌ ಮಾಡಿಕೊಂಡಿದ್ದರೆ, ನೀವು ನಿಮ್ಮಿಷ್ಟದ ಟೆಕ್‌ () ಉತ್ಪನ್ನಗಳನ್ನು ಅಥವಾ ಇತರೆ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. :ಮತ್ತೆ ಬಂದಿದೆ ಆನ್ ಲೈನ್ ಶಾಪಿಂಗ್ ಹಬ್ಬ; ಅಮೆಜಾನ್ ಪ್ರೈಮ್ ಡೇ ಯಾವಾಗ? ಅಮೆಜಾನ್‌ ಫ್ರೀಡಂ ಸೇಲ್‌ ಪ್ರತಿ ವರ್ಷದಂತೆ ಈ ವರ್ಷವೂ ವಿಭಾಗಗಳಾದ್ಯಂತ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ನೀಡುತ್ತದೆ. ಇವುಗಳಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್, ಟಿವಿಗಳು, ಗೃಹೋಪಯೋಗಿ ವಸ್ತುಗಳು, ಫ್ಯಾಷನ್ ಮತ್ತು ಸೌಂದರ್ಯ ಉತ್ಪನ್ನಗಳು, ಅಮೆಜಾನ್ ಸಾಧನಗಳು, ಹೋಂ & ಕಿಚನ್‌ ವಸ್ತುಗಳು, ಪೀಠೋಪಕರಣಗಳು ಮತ್ತು ಹೆಚ್ಚಿನವು ಸೇರಿದೆ. ಇದರ ಜೊತೆಗೆ, ಎಲ್‌ಜಿ (), ಬೋಟ್‌ (), ಒನ್‌ಪ್ಲಸ್‌ (), ಫಿಲಿಪ್ಸ್ () ಇತ್ಯಾದಿ ಬ್ರ್ಯಾಂಡ್‌ಗಳಿಂದ ಹೊಸದಾಗಿ ಪ್ರಾರಂಭಿಸಲಾದ ಉತ್ಪನ್ನಗಳನ್ನು ಸಹ ಒಳಗೊಂಡಿರುತ್ತದೆ. ಅಮೆಜಾನ್‌ ಗ್ರೇಟ್ ಫ್ರೀಡಂ ಫೆಸ್ಟಿವಲ್‌ ಸೇಲ್‌ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಪ್ರಮುಖ ವಿಷಯಗಳು ಇಲ್ಲಿವೆ: ಸೇಲ್‌ ಆರಂಭದ ಸಮಯ ಮತ್ತು ದಿನಾಂಕಗಳು 2022 ಮಾರಾಟವು ಆಗಸ್ಟ್ 6 ರಂದು 12:00 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 10 ರಂದು 11:59 ವರೆಗೆ ನಡೆಯುತ್ತದೆ. ಇನ್ನು, ಪ್ರೈಮ್‌ ಸದಸ್ಯರು ಸೇಲ್‌ ಅಧಿಕೃತ ಪ್ರಾರಂಭಕ್ಕೂ ಮುನ್ನವೇ ಪ್ರವೇಶ ಪಡೆಯುತ್ತಾರೆ. ಕಾರ್ಡ್‌ ಮತ್ತು ಬ್ಯಾಂಕ್‌ ಕೊಡುಗೆಎಸ್‌ಬಿಐ () ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಮಾಡಿದ ಎಲ್ಲಾ ಖರೀದಿಗಳಿಗೆ ಗ್ರಾಹಕರು 10% ರಿಯಾಯಿತಿ ಪಡೆಯಬಹುದು ಎಂದು ತಿಳಿದುಬಂದಿದೆ. ಮೊಬೈಲ್ ಮತ್ತು ಪರಿಕರಗಳ ಮೇಲೆ 40% ವರೆಗೆ ರಿಯಾಯಿತಿ..!ಅಮೆಜಾನ್‌ ಫ್ರೀಡಂ ಸೇಲ್‌ ಸಮಯದಲ್ಲಿ ಒನ್‌ಪ್ಲಸ್‌, ಶಿಯೋಮಿ, ಸ್ಯಾಮ್ಸಂಗ್, ಟೆಕ್ನೋ ಹಾಗೂ ಇತರೆ ಸ್ಮಾರ್ಟ್‌ಫೋನ್‌ ಹಾಗೂ ಪರಿಕರಗಳ ಮೇಲೆ ಶಾಪಿಂಗ್ ಮಾಡಿದರೆ ನೀವು ಶೇ. 40 ರವರೆಗೆ ಡಿಸ್ಕೌಂಟ್‌ ಪಡೆಯಬಹುದು. 'ಪ್ರೈಮ್‌ ಡೇ' ಬ್ಲಾಕ್‌ಬಸ್ಟರ್‌ ಮನರಂಜನೆಯನ್ನು ಘೋಷಿಸಿದ ಅಮೆಜಾನ್‌ ಪ್ರೈಮ್ ವೀಡಿಯೋ ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ಮೇಲೆ 75% ವರೆಗೆ ರಿಯಾಯಿತಿ..!ಇನ್ನು, ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ಮೇಲೆ ಖರೀದಿದಾರರು 75% ವರೆಗೆ ರಿಯಾಯಿತಿ ಪಡೆಯಬಹುದು. ಇವುಗಳಲ್ಲಿ ಲ್ಯಾಪ್‌ಟಾಪ್‌, ಫಿಟ್‌ನೆಸ್ ಬ್ಯಾಂಡ್‌ಗಳು, ಹೆಡ್‌ಫೋನ್‌ಗಳು, ಕ್ಯಾಮೆರಾಗಳು, ಅಮೆಜಾನ್ ಸಾಧನಗಳು, ಕಂಪ್ಯೂಟರ್ ಪರಿಕರಗಳು, ಶೇಖರಣಾ ಸಾಧನಗಳು ಮತ್ತು ಹೆಚ್ಚಿನವು ಸೇರಿವೆ. ಉತ್ತಮ ಡೀಲ್‌ಗಳನ್ನು ಹುಡುಕಲು ಕ್ಯುರೇಟೆಡ್ ಸ್ಟೋರ್‌ಗಳುಶಾಪರ್‌ಗಳಿಗೆ ಉತ್ತಮ ಡೀಲ್‌ಗಳನ್ನು ಹುಡುಕಲು ಸಹಾಯ ಮಾಡಲು ಕ್ಯುರೇಟೆಡ್ ಸ್ಟೋರ್‌ಗಳನ್ನು ಸಹ ಸಿದ್ಧಪಡಿಸಿದೆ. ಉದಾಹರಣೆಗೆ, ರೂ 99 ರ ಅಡಿಯಲ್ಲಿ, ರೂ 199 ರ ಒಳಗಿನ ಬೆಲೆ- ಈ ರೀತಿಯ ಸ್ಟೋರ್‌ಗಳನ್ನು ಹೊಂದಿದೆ. ಅಲ್ಲದೆ, ಬ್ಲಾಕ್‌ಬಸ್ಟರ್ ಡೀಲ್‌ಗಳು, 8PM ಡೀಲ್‌ಗಳು, ಬಜೆಟ್ ಬಜಾರ್ ಇತ್ಯಾದಿಗಳನ್ನು ಸಹ ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ 2022 ನಲ್ಲಿ ಕಾಣಬಹುದು.