: ಆಭರಣ ಪ್ರಿಯರಿಗೆ ಕಹಿ ಸುದ್ದಿ: ಏರಿಕೆಯಾದ ಬಂಗಾರ, ಬೆಳ್ಳಿ ದರ ಹೆಣ್ಮಕ್ಕಳಿಗೆ ಚಿನ್ನವೆಂದರೆ ಅಚ್ಚುಮೆಚ್ಚು. ಆದರೆ, ಈಗ ಚಿನ್ನದ ದರ ಹೆಚ್ಚಾಗುತ್ತಿರುವುದು, ಚಿನ್ನ ಪ್ರಿಯರಿಗೆ ನಿರಾಸೆ ತಂದಿದೆ. ಶುಭ ಸಮಾರಂಭಗಳಿಗೆ ಆಭರಣ ಕೊಂಡುಕೊಳ್ಳುವವರು ಬೇರೆ ವಿಧಿ ಇಲ್ಲದೆ ಹೆಚ್ಚು ಹಣ ಕೊಟ್ಟು ಆಭರಣ ಖರೀದಿಸಬೇಕಾಗಿದೆ. ಹಾಗೆ ಬೆಳ್ಳಿ ದರ ಸಹ ಏರಿಕೆಯಾಗಿದೆ. ಬೆಂಗಳೂರು ಸೇರಿ ದೇಶಾದ್ಯಂತ ಬಂಗಾರ, ಬೆಳ್ಳಿ ದರದಲ್ಲಿ ಸಾಕಷ್ಟು ವ್ಯತ್ಯಾಸವಾಗುತ್ತಿದೆ. ಕೆಲ ದಿನಗಳಿಂದ ಇಳಿಕೆಯಲ್ಲಿದ್ದ ಬಂಗಾರ ದರ ಇಂದು ಮತ್ತೆ ಏರಿಕೆಯಾಗಿದೆ. ಅಲ್ಲದೆ, ಬೆಳ್ಳಿ ದರವೂ ಸಹ ಏರಿಕೆಯಾಗಿದೆ. ದೇಶದಲ್ಲಿ ಆಭರಣ ಪ್ರಿಯರ ಸಂಖ್ಯೆಗೇನೂ ಕೊರತೆ ಇಲ್ಲ. ಮದುವೆ, ಮುಂತಾದ ಶುಭ ಸಮಾರಂಭಗಳಿಗೆ ಬಂಗಾರ, ಬೆಳ್ಳಿ ಖರೀದಿಸುವವರೂ ಸಹ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅದೇ ರೀತಿ, ನೀವೂ ಸಹ ಚಿನ್ನ, ಬೆಳ್ಳಿಖರೀದಿಸುವ ಪ್ಲ್ಯಾನ್‌ ಮಾಡುತ್ತಿದ್ದೀರಾ..? ಹಾಗಾದರೆ, ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ..? ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ..? ಇಲ್ಲಿದೆ ವಿವರ. ಒಂದು ಗ್ರಾಂ (1GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,71524 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,144 ಇದನ್ನು ಓದಿ:ಚಿಕ್ಕಮಗಳೂರಿನಲ್ಲಿ 1 ರೂ. ಹೆಚ್ಚಾದ ಪೆಟ್ರೋಲ್‌ ದರ; ಇತರೆ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ವಿವರ ಇಲ್ಲಿದೆ.. ಎಂಟು ಗ್ರಾಂ (8GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 37,72024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,152 ಹತ್ತು ಗ್ರಾಂ (10GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 47,15024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,440 ನೂರು ಗ್ರಾಂ (100GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,71,50024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,14,400 ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,150 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,670, ರೂ. 47,100, ರೂ. 47,100 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,250 ರೂ. ಆಗಿದೆ. ಇಂದಿನ ಬೆಳ್ಳಿ ದರಇನ್ನೊಂದೆಡೆ, ನಿನ್ನೆಗೆ ಹೋಲಿಸಿದರೆ ಇಂದು ಭಾರತದಲ್ಲಿ ಬೆಳ್ಳಿ ದರದಲ್ಲಿ ಸಹ ಏರಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್ದೇಶದಲ್ಲಿ ಬೆಳ್ಳಿ ದರ ಏರಿಕೆಯಾದಂತೆ, ರಾಜ್ಯ ರಾಜಧಾನಿಯಲ್ಲಿ ಸಹ ಬೆಲೆ ಏರಿಕೆಯಾಗಿದೆ. ಇಂದು, ಬೆಂಗಳೂರಿನಲ್ಲಿ 10 , 100 , 1000 (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 612, ರೂ. 6,120 ಹಾಗೂ ರೂ. 61,200 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 61,200 ಆಗಿದ್ದರೆ, ದೆಹಲಿಯಲ್ಲಿ ರೂ. 56,500, ಮುಂಬೈನಲ್ಲಿ ರೂ. 56,500 ಹಾಗೂ ಕೋಲ್ಕತ್ತದಲ್ಲೂ ರೂ. 56,500 ಗಳಾಗಿದೆ.