ಚಿನ್ನ ಖರೀದಿಸುವ ಯೋಚನೆ ಇದ್ರೆ ಇತ್ತ ಗಮನಿಸಿ, ಇಂದು ಚಿನ್ನದ ಬೆಲೆ ಇಳಿಕೆ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ದಿನದಿಂದ ದಿನಕ್ಕೆ ಸಾಕಷ್ಟು ವ್ಯತ್ಯಾಸವಾಗುತ್ತಿರುತ್ತದೆ. ರಾಜ್ಯದ ವಿವಿಧ ಜಿಲ್ಲೆಯಲ್ಲಿ ಕೂಡ ಚಹಳದಿ ಲೋಹದಲ್ಲಿ ಬದಲಾವಣೆ ಆಗುತ್ತಿರುತ್ತದೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಬೆಂಗಳೂರು (ಆ.1):ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹಳದಿ ಲೋಹ ಮತ್ತು ಬೆಳ್ಳಿಯಲ್ಲಿ ಏರಿಕೆ ಕಂಡಿತ್ತು. ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತೀದಿನ ಬಂಗಾರದ ಬೆಲೆ ವ್ಯತ್ಯಾಸವಾಗುತ್ತಿರುತ್ತದೆ . ಇನ್ನು ಕಳೆದ ವಾರಕ್ಕೆ ಹೋಲಿಸಿದರೆ ಬೆಳ್ಳಿ ದರದಲ್ಲಿ ಬೆಂಗಳೂರು ಸೇರಿ ದೇಶದ ವಿವಿಧೆಡೆ ಮತ್ತಷ್ಟು ಏರಿಕೆಯಾಗಿದ್ದು, ಈ ಹಿನ್ನೆಲೆ ಬೆಳ್ಳಿ ಆಭರಣಗಳನ್ನು ಖರೀದಿಸಲು ಪ್ಲ್ಯಾನ್‌ ಮಾಡುತ್ತಿದ್ದವರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಶುಭ ಸಮಾರಂಭಗಳು ಹೆಚ್ಚಿರುವ ಹಿನ್ನೆಲೆ ಈ ದರ ಹೆಚ್ಚಳ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಆಭರಣ ಖರೀದಿಸಲು ಮುಂದಾದವರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ನೀವೂ ಸಹ ಚಿನ್ನ, ಬೆಳ್ಳಿ ಖರೀದಿಸುವ ಯೋಜನೆ ಹಾಕಿಕೊಂಡಿದ್ದೀರಾ. ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ..? ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ..? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ಒಂದು ಗ್ರಾಂ (1GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,71024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,138 ಎಂಟು ಗ್ರಾಂ (8GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 37,68024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,104 ಹತ್ತು ಗ್ರಾಂ (10GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 47,10024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,380 ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ - ಡೀಸೆಲ್‌ ದರ ಇಂತಿದೆ ನೂರು ಗ್ರಾಂ (100GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,71,00024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,13,800 ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,150 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,950, ರೂ. 47,100, ರೂ. 47,100 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,350 ರೂ. ಆಗಿದೆ. ಇಂದಿನ ಬೆಳ್ಳಿ ದರಇನ್ನೊಂದೆಡೆ, ನಿನ್ನೆಗೆ ಹೋಲಿಸಿದರೆ ಇಂದು ಭಾರತದಲ್ಲಿ ಬೆಳ್ಳಿ ದರದಲ್ಲಿ ಸಹ ಏರಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಆಗಾಗ ಬೆಲೆಯಲ್ಲಿ ಎರಿಳಿತ ಉಂಟಾಗುತ್ತಿರುತ್ತದೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್ದೇಶದಲ್ಲಿ ಬೆಳ್ಳಿ ದರ ಏರಿಕೆಯಾದಂತೆ, ರಾಜ್ಯ ರಾಜಧಾನಿಯಲ್ಲಿ ಸಹ ಬೆಲೆ ಏರಿಕೆಯಾಗಿದೆ. ಇಂದು, ಬೆಂಗಳೂರಿನಲ್ಲಿ 10 , 100 , 1000 (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 633, ರೂ. 6,330 ಹಾಗೂ ರೂ. 63,300 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 63,300 ಆಗಿದ್ದರೆ, ದೆಹಲಿಯಲ್ಲಿ ರೂ. 58,000, ಮುಂಬೈನಲ್ಲಿ ರೂ. 58,000 ಹಾಗೂ ಕೋಲ್ಕತ್ತದಲ್ಲೂ ರೂ. 58,000 ಗಳಾಗಿದೆ.