: ಬಂಗಾರದ ದರದಲ್ಲಿ ಮತ್ತೊಮ್ಮೆ ಇಳಿಕೆ, ಬೆಳ್ಳಿ ಸ್ಥಿರ ಇಂದು ಚಿನ್ನದ ಬೆಲೆಯಲ್ಲಿ ದೇಶಾದ್ಯಂತ ಕೊಂಚ ಇಳಿಕೆಯಾಗಿದ್ದರೆ, ಬೆಳ್ಳಿ ದರ ಸ್ಥಿರವಾಗಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿಯ ದರ ಇಷ್ಟು. ಬೆಂಗಳೂರು (ಜುಲೈ 26):ದೇಶಾದ್ಯಂತ ಮಂಗಳವಾರ ಚಿನ್ನದ ಬೆಲೆಗಳು ಹೆಚ್ಚಾಗಿ ಬದಲಾಗದೆ ವಹಿವಾಟು ನಡೆಸುತ್ತಿವೆ. ಕೋವಿಡ್ - 19 ಸಮಯದಲ್ಲಿ ಚಿನ್ನ, ಬೆಳ್ಳಿ ದರ ತೀವ್ರ ಇಳಿಕೆಯಾಗಿತ್ತು. ಆದರೆ, ಅಂತಾರಾಷ್ಟ್ರೀಯ ವಿದ್ಯಮಾನದಲ್ಲಾದ ಬೆಳವಣಿಗೆಗಳ ಪರಿಣಾಮವಾಗಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡಿದೆ. ಆದರೆ, ಕಳೆದ ಕೆಲವು ತಿಂಗಳಲ್ಲಿ ಏರಿಕೆಯ ಪ್ರಮಾಣ ಕಡಿಮೆ ಆಗುತ್ತಿದ್ದರೂ, ಏರಳಿತದ ಆಟ ಮುಂದುವರಿಯುತ್ತಲೇ ಇದೆ. ಇದು ಬೆಂಗಳೂರಿನಲ್ಲಿ ಇಂದು ಚಿನ್ನ ದರ ಎಷ್ಟಿದೆ..? ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ..? ಇಲ್ಲಿದೆ ವಿವರ. ಒಂದು ಗ್ರಾಂ (1GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,66324 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,091 ಎಂಟು ಗ್ರಾಂ (8GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 37,30424 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,728 ಹತ್ತು ಗ್ರಾಂ (10GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 46,63024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 50,910 ನೂರು ಗ್ರಾಂ (100GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,66,30024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,109,100 ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46,950 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,2000, ರೂ. 46,900, ರೂ. 46,900 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 46,900 ರೂ. ಆಗಿದೆ. ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್ಇಂದು, ಬೆಂಗಳೂರಿನಲ್ಲಿ 10 , 100 , 1000 (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 611, ರೂ. 6,110 ಹಾಗೂ ರೂ. 61,100 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 61,100 ಆಗಿದ್ದರೆ, ದೆಹಲಿಯಲ್ಲಿ 54,900, ಮುಂಬೈನಲ್ಲಿ 54,900 ಹಾಗೂ ಕೋಲ್ಕತ್ತದಲ್ಲೂ ರೂ. 54,900 ಗಳಾಗಿದೆ.