- : ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ತೈಲ ಬೆಲೆ ಏರಿಕೆ, ಇಂದಿನ ಬೆಲೆ ವಿವರ ಇಲ್ಲಿದೆ ; ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾದ ಬೆನ್ನಲ್ಲೇ ಭಾರತದಲ್ಲಿ ಇಂಧನ ಬೆಲೆ ಏರಿಕೆಯತ್ತ ಸಾಗಿದೆ. ಭಾರತದಲ್ಲಿ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೈಲ ಬೆಲೆಯ ಸುಂಕ ಕಡಿತಗೊಳಿಸಿದೆ. ಹಾಗಾದ್ರೆ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಹೇಗಿದೆ ಎಂಬ ವಿವರ ಇಲ್ಲಿದೆ. ಬೆಂಗಳೂರು(ಜು.14):ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಭಾರತ ಸರಕಾರ ಕಡಿಮೆಗೊಳಿಸಿದ ನಂತರ ಗಗನಕ್ಕೇರಿದ್ದ ಇಂಧನ ಬೆಲೆ ಅಲ್ಪ ಕಡಿಮೆಯಾಗಿದೆ. ಉಕ್ರೇನ್‌ ವಿರುದ್ಧ ರಷ್ಯಾ ಯುದ್ಧ ಆರಂಭಿಸಿದ ಬಳಿಕ ವಿಶ್ವದ ಹಲವು ದೇಶಗಳು ರಷ್ಯಾ ವಿರುದ್ಧ ಸ್ಯಾಂಕ್ಷನ್‌ಗಳನ್ನು ಹೇರಿಕೆ ಮಾಡಿವೆ. ಆದರೆ ಭಾರತ ರಷ್ಯಾದಿಂದ ಇಂಧನವನ್ನು ಖರೀದಿ ಮಾಡುತ್ತಿದೆ. ಇತ್ತೀಚೆಗೆ ಇದಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ್ದ ರಷ್ಯಾ ಅಧ್ಯಕ್ಷ ಪುಟಿನ್‌, ಸ್ಯಾಂಕ್ಷನ್‌ ತೆಗೆಯದಿದ್ದರೆ ತೈಲಬೆಲೆ ಹೆಚ್ಚಿಸುವುದು ಅನಿವಾರ್ಯ ಎಂದಿದ್ದರು. ತೈಲ ಉತ್ಪಾದನಾ ದೇಶಗಳು ಬೆಲೆ ಏರಿಕೆ ಮಾಡಿದಾಗ ಆಮದು ಮಾಡಿಕೊಳ್ಳುವ ಭಾರತದಂತ ದೇಶಗಳ ಆರ್ಥಿಕತೆ ಮೇಲೆ ಹೊಡೆತ ಬೀಳುವುದು ಸಹಜ. ಇಂತಹ ಸಮಯದಲ್ಲಿ ಅನಿವಾರ್ಯವಾಗಿ ಇಂಧನ ಬೆಲೆಯನ್ನು ಸರ್ಕಾರ ಹೆಚ್ಚಿಸಲೇಬೇಕಾಗುತ್ತದೆ. ಇದರೊಂದಿಗೆ ದೇಶದ ಹಣದುಬ್ಬರ ಕೂಡ ಏರಿಕೆಯ ಹಾದಿ ಹಿಡಿದಿದೆ. ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸುವ ನಿಟ್ಟಿನಲ್ಲೂ ಅಬಕಾರಿ ಸುಂಕ ಮುಖ್ಯವಾಗುತ್ತದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಇಂಧನ ಬೆಲೆ ಒಂದೇ ಇರುವುದಿಲ್ಲ, ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಬೆಲೆಯಲ್ಲಿ ವ್ಯತ್ಯಾಸ ಕಂಡಬರುತ್ತದೆ. ಹಾಗಾದರೆ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಎಷ್ಟಿದೆ ಎಂಬ ವಿವರಣೆ ಇಲ್ಲಿದೆ. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು: ಬಾಗಲಕೋಟೆ - ರೂ. 102.61ಬೆಂಗಳೂರು - ರೂ. 101.94ಬೆಂಗಳೂರು ಗ್ರಾಮಾಂತರ - ರೂ. 102.01ಬೆಳಗಾವಿ - ರೂ. 102.28ಬಳ್ಳಾರಿ - ರೂ. 103.70ಬೀದರ್ - ರೂ. 102.90ವಿಜಯಪುರ - ರೂ. 102.23ಚಾಮರಾಜನಗರ - ರೂ. 101.94ಚಿಕ್ಕಬಳ್ಳಾಪುರ - ರೂ. 101.94ಚಿಕ್ಕಮಗಳೂರು - ರೂ. 103.77ಚಿತ್ರದುರ್ಗ - ರೂ. 103.36ದಕ್ಷಿಣ ಕನ್ನಡ - ರೂ. 101.16ದಾವಣಗೆರೆ - ರೂ. 103.63ಧಾರವಾಡ - ರೂ. 102.02ಗದಗ - ರೂ. 102.61ಕಲಬುರಗಿ - ರೂ. 102.37ಹಾಸನ - ರೂ. 101.94ಹಾವೇರಿ - ರೂ. 102.63ಕೊಡಗು - ರೂ. 102.66ಕೋಲಾರ - ರೂ. 102.14ಕೊಪ್ಪಳ - ರೂ.103.12ಮಂಡ್ಯ - ರೂ.101.84ಮೈಸೂರು - ರೂ. 101.69ರಾಯಚೂರು - ರೂ. 102.21ರಾಮನಗರ - ರೂ. 102.45ಶಿವಮೊಗ್ಗ - ರೂ. 103.67ತುಮಕೂರು - ರೂ. 102.26ಉಡುಪಿ - ರೂ. 102.02ಉತ್ತರ ಕನ್ನಡ - ರೂ. 102.79ಯಾದಗಿರಿ - ರೂ. 102.59 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು ಬಾಗಲಕೋಟೆ - ರೂ. 88.51ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 87.95ಬೆಳಗಾವಿ - ರೂ. 88.23ಬಳ್ಳಾರಿ - ರೂ. 89.50ಬೀದರ್ - ರೂ. 88.78ವಿಜಯಪುರ - ರೂ. 88.17ಚಾಮರಾಜನಗರ - ರೂ. 87.89ಚಿಕ್ಕಬಳ್ಳಾಪುರ - ರೂ. 87.89ಚಿಕ್ಕಮಗಳೂರು - ರೂ.89.40ಚಿತ್ರದುರ್ಗ - ರೂ. 88.97ದಕ್ಷಿಣ ಕನ್ನಡ - ರೂ. 87.15ದಾವಣಗೆರೆ - ರೂ.89.22ಧಾರವಾಡ - ರೂ.87.98ಗದಗ - ರೂ. 88.52ಕಲಬುರಗಿ - ರೂ. 88.30ಹಾಸನ - ರೂ. 87.69ಹಾವೇರಿ - ರೂ. 88.54ಕೊಡಗು - ರೂ.89.26ಕೋಲಾರ - ರೂ. 88.08ಕೊಪ್ಪಳ - ರೂ. 88.98ಮಂಡ್ಯ - ರೂ. 87.80ಮೈಸೂರು - ರೂ. 87.67ರಾಯಚೂರು - ರೂ. 88.17ರಾಮನಗರ - ರೂ. 88.36ಶಿವಮೊಗ್ಗ - ರೂ. 89.33ತುಮಕೂರು - ರೂ. 89.18ಉಡುಪಿ - ರೂ. 87.93ಉತ್ತರ ಕನ್ನಡ - ರೂ. 88.63ಯಾದಗಿರಿ - ರೂ. 88.50