ಬಿಹಾರದಿಂದ ಲಂಡನ್, ವೇದಾಂತಾ ಸಂಸ್ಥೆಯ ಚೇರ್ಮನ್ ಅನಿಲ್ ಅಗರ್ವಾಲ್ ಪಯಣದ ಹಾದಿಯೇ ರೋಚಕ! ವೇದಾಂತಾ ಸಂಸ್ಥೆಯ ಚೇರ್ಮನ್ ಅನಿಲ್ ಅಗರ್ವಾಲ್ ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಕಂಪನಿಯನ್ನು ಲಿಸ್ಟ್ ಮಾಡಲು ಪಟ್ಟ ಶ್ರಮದ ಬಗ್ಗೆ ಇತ್ತೀಚೆಗೆ ಟ್ವಿಟರ್ ನಲ್ಲಿ ಅವರು ವಿವರಿಸಿದ್ದಾರೆ. ದೊಡ್ಡ ಕನಸುಗಳನ್ನು ಕಾಣಲು ಹೆದರಬಾರದು. ದೃಢಸಂಕಲ್ಪ,ಕಠಿಣ ಪರಿಶ್ರಮ ಹಾಗೂ ತಾಳ್ಮೆ ವ್ಯಕ್ತಿಯನ್ನು ಹೇಗೆ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಬಲ್ಲದು ಎಂಬುದನ್ನು ಸ್ವಂತ ಅನುಭವಗಳ ಹಿನ್ನೆಲೆಯಲ್ಲಿ ವಿವರಿಸಿದ್ದಾರೆ. ಲಂಡನ್ (ಜು.13):ದೃಢ ಸಂಕಲ್ಪ, ಆತ್ಮವಿಶ್ವಾಸ ಹಾಗೂ ಕಠಿಣ ಪರಿಶ್ರಮದಿಂದ ಅದೆಷ್ಟೇ ದೊಡ್ಡ ಕನಸನ್ನಾದರೂ ಸಾಕಾರಗೊಳಿಸಬಹುದು ಎಂಬುದಕ್ಕೆ ವೇದಾಂತಾ ಸಂಸ್ಥೆಯ ಮುಖ್ಯಸ್ಥ ಅನಿಲ್ ಅಗರ್ವಾಲ್ ಅತ್ಯುತ್ತಮ ನಿದರ್ಶನ. ಬಹುತೇಕರಿಗೆ ಈ ವಿಷಯ ಗೊತ್ತಿರಲಿಕ್ಕಿಲ್ಲ, ಲಂಡನ್ ಷೇರು ವಿನಿಮಯ ಕೇಂದ್ರದಲ್ಲಿ ಸಂಸ್ಥೆಯೊಂದನ್ನು ಲಿಸ್ಟ್ ಮಾಡಿದ ಮೊಟ್ಟ ಮೊದಲ ಭಾರತೀಯ ಅನಿಲ್ ಅಗರ್ವಾಲ್ ಅನಿಲ್ ಅಗರ್ವಾಲ್ ಅವರ ವೇದಾಂತಾ ಸಂಸ್ಥೆ ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ 2003ರಲ್ಲಿ ಲಿಸ್ಟ್ ಆಗಿತ್ತು. ಅದು ಹೇಗೆ ಸಾಧ್ಯವಾಯಿತು? ಆ ಜರ್ನಿ ಹೇಗಿತ್ತು? ಎಂಬ ಸ್ಫೂರ್ತಿದಾಯಕ ಕಥೆಯನ್ನು ಟ್ವಿಟರ್ ನಲ್ಲಿ ಅನಿಲ್ ಅಗರ್ವಾಲ್ ಹಂಚಿಕೊಂಡಿದ್ದಾರೆ. ಬಿಹಾರದ ಸಣ್ಣ ಹಳ್ಳಿಯಿಂದ ಪ್ರಸ್ತುತ ಲಂಡನ್ ನಲ್ಲಿ ನೆಲೆಗೊಳ್ಳುವ ತನಕ ಅನಿಲ್ ಅಗರ್ವಾಲ್ ಸವೆಸಿದ ಹಾದಿ ಹೂವಿನಿಂದ ಕೂಡಿರಲಿಲ್ಲ. ಬದಲಿಗೆ ಅದೆಷ್ಟೋ ಕಲ್ಲು, ಮುಳ್ಳುಗಳು, ಅಡೆತಡೆಗಳು ಎದುರಾಗಿದ್ದವು. ಆದರೆ, ಅವೆಲ್ಲವನ್ನೂ ದೃಢಸಂಕಲ್ಪ, ಪರಿಶ್ರಮ ಹಾಗೂ ತಾಳ್ಮೆಯಿಂದ ಎದುರಿಸಿದ ಅನಿಲ್ ಅಗರ್ವಾಲ್, ಇಂದು ಕಾರ್ಪೊರೇಟ್ ಜಗತ್ತಿನ ಪ್ರಖ್ಯಾತ ವ್ಯಕ್ತಿಗಳಲ್ಲಿ ಒಬ್ಬರಾಗಿ ಬೆಳೆದು ನಿಂತಿದ್ದಾರೆ. ರಾತ್ರೋರಾತ್ರಿ ನಿರ್ಧಾರವೇದಾಂತಾ ಸಂಸ್ಥೆಯನ್ನು ( .) ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ() ಲಿಸ್ಟ್ () ಮಾಡಬೇಕು ಎಂಬ ದೊಡ್ಡ ಕನಸನ್ನು ಅನಿಲ್ ಅಗರ್ವಾಲ್ ಕಂಡಿದ್ದರು. ಆ ಕನಸನ್ನು ನನಸಾಗಿಸಿಕೊಳ್ಳಲು ಅವರು ರಾತ್ರೋರಾತ್ರಿ ಲಂಡನ್ ಗೆ () ಶಿಫ್ಟ್ ಆಗುವ ನಿರ್ಧಾರ ಕೈಗೊಳ್ಳುತ್ತಾರೆ. ಅವರ ಈ ನಿರ್ಧಾರದ ಹಿಂದೆ ಪತ್ನಿಯ ಬೆಂಬಲ ಕೂಡ ಇತ್ತು. ಅಗರ್ವಾಲ್ ಪತ್ನಿ ಲಂಡನ್ ಗೆ ಹೋಗಲು ಅವರ ಪುತ್ರಿ ಪ್ರಿಯಾ ಅವರ ಶಾಲೆಗೆ ತೆರಳಿ 6 ತಿಂಗಳ ರಜೆ ಕೋರಿದ್ದರು. ಅಂದರೆ 6 ತಿಂಗಳ ಬಳಿಕ ಮರಳಿ ಭಾರತಕ್ಕೆ ಹಿಂತಿರುಗುವ ವಿಶ್ವಾಸ ಪತ್ನಿಯಲ್ಲಿತ್ತು ಎಂದು ಅಂದಿನ ದಿನಗಳನ್ನು ಅನಿಲ್ ಅಗರ್ವಾಲ್ ಮೆಲುಕು ಹಾಕಿದ್ದಾರೆ. : ಅಂಚೆ ಕಚೇರಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಎಫ್ ಡಿಗಿಂತ ಅಧಿಕ ಬಡ್ಡಿ, ತೆರಿಗೆ ಉಳಿತಾಯ! 'ನಿಮ್ಮಲ್ಲಿ ಬಹುತೇಕರು ನನ್ನನ್ನು ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ2003 ರಲ್ಲಿ ಕಂಪನಿಯನ್ನು ಲಿಸ್ಟ್ ಮಾಡಿದ ಮೊದಲ ಭಾರತೀಯ ಎಂದು ತಿಳಿದುಕೊಂಡಿದ್ದೀರಿ.ಇದು ಹೇಗೆ ಆರಂಭವಾಯಿತು ಎಂಬುದನ್ನು ತಿಳಿಯಲು ಈ ಕೆಳಗಿನ ಪೂರ್ತಿ ಕಥೆ ಓದಿ' ಎಂದು ಅನಿಲ್ ಅಗರ್ವಾಲ್ ಟ್ವೀಟ್ ಮಾಡಿದ್ದಾರೆ.'ಜಾಗತಿಕ ಕಂಪನಿಗಳು ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ () ಲಿಸ್ಟ್ ಆಗುತ್ತಿದ್ದವು. ನಾನು ಕೂಡ ಆ ಪಟ್ಟಿಯಲ್ಲಿರಬೇಕು ಎಂದು ಬಯಸಿದ್ದೆ. ನಾನು ದೊಡ್ಡ ಕನಸು ಕಂಡಿದ್ದೆ. ಅದೇ ಕಾರಣಕ್ಕೆ ಲಂಡನ್ ಗೆ ತೆರಳಲು ನಿರ್ಧರಿಸಿದೆ' ಎಂದು ಅಗರ್ವಾಲ್ ಹೇಳಿದ್ದಾರೆ. ಪತ್ನಿಯನ್ನು ತನ್ನ ಅತೀದೊಡ್ಡ ಸರ್ಪೋರ್ಟ್ ಸಿಸ್ಟ್ಂ ( ) ಎಂದು ಬಣ್ಣಿಸಿರುವ ಅಗರ್ವಾಲ್, 'ಇಂದಿಗೂ ಕೂಡ ಆಕೆ ಯಾವುದೇ ಅನುಮಾನವಿಲ್ಲದೆ ಎಲ್ಲ ವ್ಯವಸ್ಥೆ ಮಾಡುತ್ತಾಳೆ. ಲಂಡನ್ ಗೆ ತೆರಳುವಾಗ ನಾನು ಹೆಚ್ಚೇನೂ ಪ್ಯಾಕ್ ಮಾಡಿಕೊಂಡಿರಲಿಲ್ಲ. ನನ್ನ ತಾಯಿ ನೀಡಿದ ಪರೋಟಗಳು ಹಾಗೂ ತಂದೆಯ ಶಾಲನ್ನು ಅವರ ಆಶೀರ್ವಾದ ಎಂದು ಭಾವಿಸಿ ತೆಗೆದುಕೊಂಡು ಹೋಗಿದ್ದೆ'ಎಂದು ಅವರು ಹೇಳಿದ್ದಾರೆ. ಲಂಡನ್ ಹಿಥ್ರೋ ವಿಮಾನ ನಿಲ್ದಾಣದಲ್ಲಿ ( ) ಇಳಿದ ತಕ್ಷಣ ಅವರಿಗಾದ ಅನುಭವಗಳನ್ನು ಕೂಡ ಹಂಚಿಕೊಂಡಿದ್ದಾರೆ.'ನನಗೆ ಭಿನ್ನವಾದ ಪ್ರಪಂಚಕ್ಕೆ ಕಾಲಿಟ್ಟ ಅನುಭವವಾಯಿತು. ವಿಭಿನ್ನ ಉಚ್ಚಾರಣೆಗಳ ಜನರು, ಚಳಿ ಹಾಗೂ ಮಳೆಯ ವಾತಾವರಣ, ದೊಡ್ಡ ಬಿಳಿ ಕಟ್ಟಡಗಳು. ಈ ಸಮಯದಲ್ಲಿ ನನಗೆ ಪ್ರತಿಯೊಬ್ಬರು ಹೇಳಿದ ಮಾತು ನೆನಪಾಯಿತು- ಚಿಕ್ಕ ಹಕ್ಕಿಗಳು ದೊಡ್ಡ ಆಗಸದಲ್ಲಿ ಹಾರಾಟ ನಡೆಸಲಾರವು. ದೀರ್ಘ ಸಮಯದ ಬಳಿಕ ಮೊದಲ ಬಾರಿಗೆ ನನಗೆ ಭಯದ ಅನುಭವವಾಯಿತು' ಎಂದು ಅಗರ್ವಾಲ್ ವಿವರಿಸಿದ್ದಾರೆ. 'ಲಂಡನ್ ಗೆ ಬಂದಾಗ ನನ್ನ ಬಳಿ ಹೆಚ್ಚೇನೂ ಇರಲಿಲ್ಲ. ಆದ್ರೆ ನನ್ನ ಹೆತ್ತವರ ಆಶೀರ್ವಾದ ಹಾಗೂ ನಂಬಿಕೆ ಇತ್ತು. ಹೀಗಾಗಿ ನನ್ನ ಪತ್ನಿ ಹಾಗೂ ಮಕ್ಕಳ ಜೊತೆಗೆ ಇಲ್ಲಿನ ಪಯಣವನ್ನು ನಾನು ಆನಂದಿಸಿದೆ' ಎಂದಿದ್ದಾರೆ. : ದಿನದಿಂದ ದಿನಕ್ಕೆ ಡಾಲರ್ ಎದುರು ರೂಪಾಯಿ ದುರ್ಬಲ;ಶೀಘ್ರದಲ್ಲೇ 80ರ ಗಡಿ ದಾಟಲಿದೆಯಾ? ಕಳೆದ ತಿಂಗಳು ಲಂಡನ್ ಆಕ್ಸ್ ಫರ್ಡ್ ಯೂನಿಯನ್ ( ) ವಿದ್ಯಾರ್ಥಿಗಳ ಜೊತೆಗೆ ಸಂವಹನ ನಡೆಸಿದ ಅನಿಲ್ ಅಗರ್ವಾಲ್, ದೊಡ್ಡ ಕನಸುಗಳನ್ನು ಕಾಣುವಂತೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದ್ದಾರೆ.'ಬಿಹಾರದ ಸಣ್ಣ ಹಳ್ಳಿಯಿಂದ ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ತನಕದ ನನ್ನ ಪಯಣ ಅನೇಕ ಕಲಿಕೆಗಳು, ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಕೂಡಿತ್ತು. ಹೆದರಬೇಡಿ (ಏಕೆಂದ್ರೆ ಅದೃಷ್ಟ ಧೈರ್ಯವಂತರಿಗೆ ಮಾತ್ರ ಸಾಥ್ ನೀಡುತ್ತದೆ), ನಮ್ರರಾಗಿರಿ (ನೀವು ಒಳನೋಟ ಹೊಂದಿದ್ರೆ ಮಾತ್ರ ಪ್ರಗತಿ ಸಾಧ್ಯ) ಹಾಗೂ ಹೊಂದಿಕೆಯ ಸ್ವಭಾವ ಹೊಂದಿರಿ ಎಂದು ವಿದ್ಯಾರ್ಥಿಗಳಿಗೆ ಅಗರ್ವಾಲ್ ಕಿವಿಮಾತು ಹೇಳಿದ್ದಾರೆ.