:ಜಿಎಸ್ ಟಿ ದರ ಪರಿಷ್ಕರಣೆ; ಯಾವುದು ದುಬಾರಿ, ಯಾವುದು ಅಗ್ಗ? ಇಲ್ಲಿದೆ ಮಾಹಿತಿ *ಅನೇಕ ವಸ್ತುಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಜಿಎಸ್ ಟಿ ಮಂಡಳಿ ನಿರ್ಧಾರ*ಪರಿಷ್ಕೃತ ಜಿಎಸ್ ಟಿ ದರಗಳು ಜುಲೈ 18ರಿಂದ ಜಾರಿಗೆ*ಈ ತನಕ ತೆರಿಗೆ ವಿನಾಯ್ತಿ ಪಡೆದ ವಸ್ತುಗಳಿಗೆ ಶೇ.5ರಷ್ಟು ಜಿಎಸ್ ಟಿ*ಕೆಲವು ವಸ್ತುಗಳ ಮೇಲಿನ ಜಿಎಸ್ ಟಿ ದರದಲ್ಲಿ ಏರಿಕೆ ಚಂಡೀಗಢ (ಜೂ.30):ಸರಕು ಮತ್ತು ಸೇವಾ ತೆರಿಗೆಗಳ ಮಂಡಳಿ ( ) 47ನೇ ಸಭೆಯಲ್ಲಿ ಇನ್ನೂ ಹೆಚ್ಚಿನ ಸರಕುಗಳನ್ನು () ತೆರಿಗೆ () ವ್ಯಾಪ್ತಿಗೆ ತರುವ ನಿರ್ಧಾರ ಕೈಗೊಳ್ಳಲಾಗಿದ್ದು, ಇದು ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ. ವಿತ್ತ ಸಚಿವೆ ( ) ನಿರ್ಮಲಾ ಸೀತಾರಾಮನ್ ( ) ನೇತೃತ್ವದಲ್ಲಿ ನಡೆದ ಜಿಎಸ್ ಟಿ ಮಂಡಳಿ ( ) ಸಭೆಯಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಧಾನ್ಯಗಳು () ಸೇರಿದಂತೆ ಪ್ಯಾಕ್ ಮಾಡಲಾಗದ ವಸ್ತುಗಳಿಗೂ ಇನ್ನು ಮುಂದೆ ಪ್ಯಾಕ್ ಮಾಡಿದಾಗ ವಿಧಿಸಲಾಗುವ ದರದ ಜಿಎಸ್ ಟಿಯೇ ಅನ್ವಯಿಸಲಿದೆ. ಕೆಲವು ವಸ್ತುಗಳ ಮೇಲಿನ ಜಿಎಸ್ ಟಿ ದರದಲ್ಲಿ ಏರಿಕೆ ಮಾಡಲಾಗಿದೆ. ಇನ್ನು ಈ ತನಕ ತೆರಿಗೆ ವಿನಾಯ್ತಿ ಪಡೆದ ವಸ್ತುಗಳಿಗೆ ಶೇ.5ರಷ್ಟು ಜಿಎಸ್ ಟಿ ವಿಧಿಸಲಾಗಿದೆ. :ಕ್ರೆಡಿಟ್ ಕಾರ್ಡ್ ಬಳಕೆದಾರರೇ ಗಮನಿಸಿ; ನಾಳೆಯಿಂದ ಈ ನಿಯಮಗಳಲ್ಲಿ ಬದಲಾವಣೆ ಜುಲೈ 18ರಿಂದ ಜಾರಿಗೆತೆರಿಗೆ ವಿನಾಯ್ತಿ ಹಾಗೂ ಪರಿಷ್ಕರಣೆಗೆ ಸಂಬಂಧಿಸಿದ ಜಿಎಸ್ ಟಿ ಮಂಡಳಿ ನಿರ್ಧಾರಗಳು ಜುಲೈ 18ರಿಂದ ಜಾರಿಗೆ ಬರಲಿವೆ' ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ತಿಳಿಸಿದ್ದಾರೆ. ಈ ವಸ್ತುಗಳು ಇನ್ಮುಂದೆ ದುಬಾರಿಪ್ಯಾಕ್ ಮಾಡಿದ ಆಹಾರ ಪದಾರ್ಥಗಳು: ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು ಜಿಎಸ್ ಟಿ ವ್ಯಾಪ್ತಿಯೊಳಗೆ ತರುವ ಶಿಫಾರಸ್ಸನ್ನು ಜಿಎಸ್ ಟಿ ಸಮಿತಿ ಸ್ವೀಕರಿಸಿದೆ. ಪ್ಯಾಕ್ ಆಗಿರುವ (-) ಹಾಗೂ ಲೇಬಲ್ ಹೊಂದಿರುವ () ಆಹಾರ ಪದಾರ್ಥಗಳಾದ ಮಾಂಸ (), ಮೀನು (), ಮೊಸರು (), ಪನ್ನೀರ್ (),ಜೇನುತುಪ್ಪ(),ಒಣ ದ್ವಿದಳ ಧಾನ್ಯ,ಒಣ ಫಾಕ್ಸ್ ಸೀಡ್ ಅಥವಾ ಮಖಾನ (ತಾವರೆ ಬೀಜ),ಗೋಧಿ ಹಾಗೂ ಇತರ ಧಾನ್ಯಗಳು, ಗೋಧಿ ಹಿಟ್ಟು,.ಬೆಲ್ಲ ಮತ್ತು ಮಂಡಕ್ಕಿ ಮೇಲೆ ಶೇ.5ರಷ್ಟು ಜಿಎಸ್ ಟಿ ವಿಧಿಸಲಾಗಿದೆ. ಬ್ಯಾಂಕ್ ಚೆಕ್ ಪುಸ್ತಕ:ಚೆಕ್ ವಿತರಣೆಗೆ (ಬಿಡಿ ಅಥವಾ ಪುಸ್ತಕ ರೂಪದಲ್ಲಿ) ಬ್ಯಾಂಕುಗಳು ವಿಧಿಸುವ ಶುಲ್ಕದ ಮೇಲೆ ಶೇ.18ರಷ್ಟು ಜಿಎಸ್ ಟಿ () ವಿಧಿಸಲು ಜಿಎಸ್ ಟಿ ಮಂಡಳಿ ನಿರ್ಧರಿಸಿದೆ. ಹೋಟೆಲ್ ರೂಮ್ ಗಳು:ದಿನವೊಂದಕ್ಕೆ 1,000ರೂ.ಗಿಂತ ಕಡಿಮೆ ಬಾಡಿಗೆ ಹೊಂದಿರುವ ಹೋಟೆಲ್ ರೂಮ್ ಗಳಿಗೂ ಶೇ.12 ಜಿಎಸ್ ಟಿ ( ) ವಿಧಿಸಲಾಗೋದು. ಆಸ್ಪತ್ರೆ ಬೆಡ್ ಗಳು:ರೋಗಿಯೊಬ್ಬನಿಗೆ ಆಸ್ಪತ್ರೆ ರೂಮ್ ಬಾಡಿಗೆ ದಿನಕ್ಕೆ 5000ರೂ. ಮೀರಿದ್ರೆ ಆ ಮೊತ್ತಕ್ಕೆ ಶೇ. 5ರಷ್ಟು ತೆರಿಗೆ ವಿಧಿಸಲಾಗುತ್ತದೆ. ಎಲ್ ಇಡಿ ಲೈಟ್ಸ್, ಲ್ಯಾಂಪ್ಸ್:ಎಲ್ ಇಡಿ ಲೈಟ್ ಗಳು, ಲ್ಯಾಂಪ್ ಗಳು, ಫಿಕ್ಸ್ ಚರ್ಸ್ ಗಳ ಮೇಲಿನ ಜಿಎಸ್ ಟಿಯನ್ನು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ. ಚಾಕುಗಳು:ಕಟ್ಟಿಂಗ್ ಬ್ಲೇಡ್ ಗಳನ್ನು ಹೊಂದಿರುವ ಚಾಕುಗಳು, ಪೇಪರ್ ಕತ್ತರಿಸುವ ಚಾಕುಗಳು, ಪೆನ್ಸಿಲ್ ಶಾರ್ಪನರ್, ಬ್ಲೇಡ್ಸ್, ಸ್ಪೂನ್ಸ್, ಫೋರ್ಕ್ಸ್, ಲೋಟಗಳು, ಸ್ಕಿಮ್ಮರ್, ಕೇಕ್ ಸರ್ವರ್ ಇತ್ಯಾದಿಗಳ ಮೇಲಿನ ಜಿಎಸ್ ಟಿ ಕೂಡ ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ. ಪಂಪ್ಸ್ ಹಾಗೂ ಯಂತ್ರಗಳು:ನೀರೆತ್ತುವ ಪಂಪು, ಕೊಳವೆ ಬಾವಿ ಪಂಪ್, ಸಬ್ ಮರ್ಸಿಬಲ್ ಪಂಪ್ಸ್, ಬೈಸೈಕಲ್ ಪಂಪ್ಸ್ ಮೇಲಿನ ಜಿಎಸ್ ಟಿಯನ್ನು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ. ಬೀಜಗಳು, ಧಾನ್ಯಗಳನ್ನು ಸ್ವಚ್ಛಗೊಳಿಸುವ, ಬೇರ್ಪಡಿಸುವ ಅಥವಾ ವರ್ಗೀಕರಿಸುವ ಯಂತ್ರಗಳು, ಧಾನ್ಯಗಳನ್ನು ಹಿಟ್ಟು ಮಾಡಲು ಮಿಲ್ಲುಗಳಲ್ಲಿ ಬಳಸುವ ಯಂತ್ರಗಳ ಮೇಲಿನ ಜಿಎಸ್ ಟಿಯನ್ನು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ. :ಟೋಕನೈಸೇಷನ್ ಗಡುವು ಮತ್ತೆ ವಿಸ್ತರಣೆ; ಸೆ.30ರ ತನಕ ಕಾಲಾವಕಾಶ ಅಗ್ಗವಾದ ವಸ್ತುಗಳುರೋಪ್ ವೇ ರೈಡ್ಸ್:ರೋಪ್ ವೇಗಳ ಮೂಲಕ ಸರಕುಗಳು ಹಾಗೂ ಪ್ರಯಾಣಿಕರನ್ನು ಸಾಗಣೆ ಮಾಡುವ ಸಾರಿಗೆ ಮೇಲಿನ ಜಿಎಸ್ ಟಿ ದರಗಳನ್ನು ಜಿಎಸ್ ಟಿ ಮಂಡಳಿ ಶೇ.18ರಿಂದ ಶೇ.5ಕ್ಕೆ ಇಳಿಕೆ ಮಾಡಿದೆ. ಸರಕು ಸಾಗಣೆ ಬಾಡಿಗೆ:ಅಟೋ, ಗೂಡ್ಸ್ ಸೇರಿದಂತೆ ಸರಕು ಸಾಗಣೆ ವಾಹನಗಳ ಬಾಡಿಗೆ ಮೇಲಿನ ಜಿಎಸ್ ಟಿಯನ್ನು ಶೇ.18ರಿಂದ ಶೇ.12ಕ್ಕೆ ಇಳಿಸಲಾಗಿದೆ. ಮೂಳೆ ಚಿಕಿತ್ಸೆ ಉಪಕರಣಗಳು:ಸ್ಪ್ಲಿಂಟ್ ಗಳು ಹಾಗೂ ಮೂಳೆ ಮುರಿತದ ಚಿಕಿತ್ಸೆಗೆ ಬಳಸುವ ಇತರ ಉಪಕರಣಗಳ ಮೇಲಿನ ಜಿಎಸ್ ಟಿಯನ್ನು ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡಲಾಗಿದೆ. ರಕ್ಷಣಾ ಸಲಕರಣೆಗಳು:ಖಾಸಗಿ ಸಂಸ್ಥೆಗಳು/ ಮಾರಾಟಗಾರರಿಂದ ಆಮದು ಮಾಡಿಕೊಂಡ ನಿರ್ದಿಷ್ಟ ರಕ್ಷಣಾ ವಸ್ತುಗಳ ಮೇಲೆ ಜಿಎಸ್ ಟಿ ವಿನಾಯಿತಿ ನೀಡಲಾಗಿದೆ.