: ಇಳಿದ ಚಿನ್ನದ ಬೆಲೆ, ಬೆಳ್ಳಿಯೂ ಕೈಗೆಟಕುತ್ತೆ ಸುಲಭವಾಗಿ! ಬಹಳ ದಿನಗಳ ನಂತರ ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ ಕಂಡಿದ್ದು, ಕೊಳ್ಳುವ ಯೋಚನೆ ಇದ್ದರೆ ಇದು ಸಕಾಲ ಎನ್ನಲಾಗುತ್ತಿದೆ. ಅಷ್ಟಕ್ಕೂ ಹಳದಿ ಲೋಹ ಹಾಗೂ ಬಿಳಿ ಲೋಹದ ಬೆಲೆ ಎಷ್ಯಾಗಿದೆ. ಏನಾಂತರಾ ಮಾರುಕಟ್ಟೆ ತಜ್ಞರು? ಬೆಂಗಳೂರು(ಜೂ.23):ಕೊರೋನಾ ಬಳಿಕ ಏರಿಕೆ ಹಾದಿ ಹಿಡಿದು, ದಾಖಲೆ ಸೃಷ್ಟಿಸಿದ್ದ ಚಿನ್ನದ ದರ ಪ್ರಕರಣಳು ಕುಸಿತಗೊಂಡಾಗ ಕೊಂಚ ಇಳಿಕೆ ಕಂಡಿತ್ತು. ಆದರೆ ರಷ್ಯಾ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಮತ್ತೆ ಏರಿಕೆ ಕಂಡಿತ್ತು. ಇದು ಚಿನ್ನ ಕೊಳ್ಳಲು ತಯಾರಾದವರಿಗೆ ಶಾಕ್ ಕೊಟ್ಟಿತ್ತು. ಇದಾದ ಬಳಿಕ ಏರಿಕೆಗೆ ಕೊಂಚ ಬ್ರೇಕ್ ಬಿದ್ದಿದೆಯಾದರೂ ಚಿನ್ನ, ಬೆಳ್ಳಿ ದರ ಮಾತ್ರ ಇಳಿಕೆಯಾಗಿಲ್ಲ. ಹಾಗಾದ್ರೆ ಬೆಂಗಳೂರಿನಲ್ಲಿ ಇಂದು ಚಿನ್ನ ದರ ಎಷ್ಟಿದೆ? ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ? ಇಲ್ಲಿದೆ ವಿವರ ಒಂದು ಗ್ರಾಂ (1GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,77024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,204 ಎಂಟು ಗ್ರಾಂ (8GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 38,16024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,632 ಹತ್ತು ಗ್ರಾಂ (10GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 47,70024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 52,040 ನೂರು ಗ್ರಾಂ (100GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,77,00024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,20,400 ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್ ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,700 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,700, ರೂ. 47,650, ರೂ. 47,650 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,650 ರೂ. ಆಗಿದೆ. ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್ ಇಂದು, ಬೆಂಗಳೂರಿನಲ್ಲಿ 10 , 100 , 1000 (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 660, ರೂ. 6,600 ಹಾಗೂ ರೂ. 66,000 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 66,000 ಆಗಿದ್ದರೆ ದೆಹಲಿಯಲ್ಲಿ 60,200 ಮುಂಬೈನಲ್ಲಿ 60,200 ಹಾಗೂ ಕೋಲ್ಕತ್ತದಲ್ಲೂ ರೂ. 60,200 ಗಳಾಗಿದೆ.