ಪ್ಯಾನ್-ಆಧಾರ್ ಲಿಂಕ್ ಮಾಡಲು ಪ್ರಯತ್ನಿಸುತ್ತಿದ್ದೀರಾ? ದಂಡ ಪಾವತಿಸೋದು ಹೇಗೆ, ಎಲ್ಲಿ ಗೊತ್ತಾಗ್ತ ಇಲ್ವಾ? ಇಲ್ಲಿದೆ ಮಾಹಿತಿ *ಪ್ರಸ್ತುತ ಆಧಾರ್-ಪ್ಯಾನ್ ಲಿಂಕ್ ಮಾಡಲು 500ರೂ. ದಂಡ*ಜುಲೈ 1ರ ಬಳಿಕ 1000ರೂ. ದಂಡ*ಆನ್ ಲೈನ್ ನಲ್ಲೇ ಸುಲಭವಾಗಿ ದಂಡ ಪಾವತಿಸಬಹುದು ನವದೆಹಲಿ (ಜೂ.13):ಆಧಾರ್ ನೊಂದಿಗೆ () ಪ್ಯಾನ್ ಕಾರ್ಡ್ ( ) ಲಿಂಕ್ () ಮಾಡಲು 2022ರ ಏಪ್ರಿಲ್ 1ರ ಬಳಿಕ 500ರೂ. ದಂಡ ವಿಧಿಸಲಾಗುವುದು ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ () ಈ ಹಿಂದೆಯೇ ತಿಳಿಸಿತ್ತು. ಆದ್ರೆ ಜುಲೈ 1ರ ಬಳಿಕ ಈ ಕೆಲ್ಸ ಮಾಡಲು 500ರೂ. ಅಲ್ಲ 1000ರೂ. ದಂಡ () ಪಾವತಿಸಬೇಕಾಗುತ್ತದೆ ಎಂದು ಕೂಡ ಸಿಬಿಡಿಟಿ ತಿಳಿಸಿದೆ. ಆದ್ರೆ ಈ ದಂಡ ಪಾವತಿಸೋದು ಹೇಗೆ? ಇಲ್ಲಿದೆ ಮಾಹಿತಿ. ಕೇಂದ್ರ ಸರ್ಕಾರ ಪ್ಯಾನ್ -ಆಧಾರ್ ಜೋಡಣೆ ಅಂತಿಮ ಗಡುವನ್ನು () 2023ರ ಮಾರ್ಚ್ 31ರ ತನಕ ವಿಸ್ತರಿಸಿದೆ. ಈ ಹಿಂದೆ ಈ ವರ್ಷದ ಮಾರ್ಚ್ 31ರ ತನಕ ಗಡುವು ನೀಡಲಾಗಿತ್ತು. ಆದ್ರೆ ಈ ವರ್ಷದ ಏಪ್ರಿಲ್ 1ರಿಂದ ತೆರಿಗೆದಾರರು () ಆಧಾರ್-ಪ್ಯಾನ್ ಜೋಡಣೆಗೆ ದಂಡ ಪಾವತಿಸಬೇಕಿದೆ. ಈ ಬಗ್ಗೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ () ಹೊರಡಿಸಿರುವ ಸುತ್ತೋಲೆಯಲ್ಲಿ 2022 ರ ಏಪ್ರಿಲ್ 1ರಿಂದ ಜೂನ್ 30ರ ತನಕ ತೆರಿಗೆದಾರರು ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡಿದ್ರೆ 500ರೂ. ವಿಳಂಬ ಶುಲ್ಕ ( ) ಪಾವತಿಸಬೇಕು. ಇನ್ನು ಜುಲೈ 1ರ ಬಳಿಕ ಆಧಾರ್-ಪ್ಯಾನ್ ಜೋಡಣೆಗೆ 1000 ರೂ. ದಂಡ ಪಾವತಿಸಬೇಕು ಎಂದು ತಿಳಿಸಿದೆ. :ನಿಮಗೆ ಇದು ಗೊತ್ತಾ? ತೆರಿಗೆ ಕಡಿತವಾಗದಿದ್ರೂ, ಆದಾಯ ಗಳಿಸದಿದ್ರೂ ಈ 10 ಸಂದರ್ಭಗಳಲ್ಲಿ ಐಟಿಆರ್ ಸಲ್ಲಿಕೆ ಮಾಡಲೇಬೇಕು! ದಂಡ ಪಾವತಿಸೋದು ಹೇಗೆ?ಆಧಾರ್ -ಪ್ಯಾನ್ ಲಿಂಕ್ ಮಾಡುವ ಮನವಿ ಸಲ್ಲಿಕೆಯಾಗುವ ಮುನ್ನ ದಂಡ ಕಟ್ಟಬೇಕು. ಜೂನ್ 30ರ ತನಕ 500ರೂ. ಹಾಗೂ ಜುಲೈ 1ರ ಬಳಿಕ 1000 ರೂ. ವಿಳಂಬ ಶುಲ್ಕ ಪಾವತಿಸಬೇಕು.ಹಂತ 1: ಆಧಾರ್-ಪ್ಯಾನ್ ಲಿಂಕ್ ಮನವಿ ಸಲ್ಲಿಕೆ ಪ್ರಕ್ರಿಯೆ ಮುಂದುವರಿಸಲು ://..-.//. ಭೇಟಿ ನೀಡಿ.ಹಂತ 2: ಆಧಾರ್-ಪ್ಯಾನ್ ಲಿಂಕ್ ಮನವಿ ಸಲ್ಲಿಕೆಗೆ ಚಲನ್ ಸಂಖ್ಯೆ/ಐಟಿಎನ್ ಎಸ್ 280 ಅಡಿಯಲ್ಲಿಪ್ರಕ್ರಿಯೆ ಮುಂದುವರಿಕೆ ( ./ 280) ಮೇಲೆ ಕ್ಲಿಕ್ ಮಾಡಿ.ಹಂತ3: ಈಗ ಆಯ್ಕೆ ಮಾಡಿ.ಹಂತ 4: ಒಂದೇ ಚಲನ್ ನಲ್ಲಿ ಶುಲ್ಕ ಪಾವತಿಯನ್ನು ಮೈನರ್ ಹೆಡ್ 500 (ಶುಲ್ಕ) ಹಾಗೂ ಮೇಜರ್ ಹೆಡ್ 0021 (ಕಂಪನಿಗಳನ್ನು ಹೊರತುಪಡಿಸಿದ ಆದಾಯ ತೆರಿಗೆ ) ಅಡಿಯಲ್ಲಿ ಮಾಡಿರೋದನ್ನು ಖಚಿತಪಡಿಸಿ.ಹಂತ 5: ಈಗ ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ನಲ್ಲಿ ಯಾವುದು ನಿಮ್ಮ ಪಾವತಿ ವಿಧಾನ ಎಂಬುದನ್ನು ಆಯ್ಕೆ ಮಾಡಿ.ಒಮ್ಮೆ ಪಾವತಿಯಾದ ಬಳಿಕ ತೆರಿಗೆದಾರರು 4-5 ದಿನಗಳಲ್ಲಿ ಪ್ಯಾನ್-ಆಧಾರ್ ಲಿಂಕ್ ಮನವಿ ಸಲ್ಲಿಕೆಗೆ ಪ್ರಯತ್ನಿಸುವಂತೆ ಶಿಫಾರಸ್ಸು ಮಾಡಲಾಗುತ್ತದೆ. : ಇಪಿಎಫ್ ಹಣ ವಿತ್ ಡ್ರಾ ಮಾಡೋದು ಈಗ ಸುಲಭ; ಆನ್ ಲೈನ್ ನಲ್ಲಿ ನೀವೇ ಈ ಹಂತಗಳನ್ನು ಪೂರ್ಣಗೊಳಿಸಿದ್ರೆ ಸಾಕು 2023ರ ಮಾರ್ಚ್ 31 ಅಂತಿಮ ಗಡುವು2023ರ ಮಾರ್ಚ್ 31ರೊಳಗೆ ಪ್ಯಾನ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡದಿದ್ರೆ 2023ರ ಏಪ್ರಿಲ್ 1ರಿಂದ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಒಮ್ಮೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ನಿಮಗೆ ಆದಾಯ ತೆರಿಗೆ ರಿಟರ್ನ್ () ಸಲ್ಲಿಕೆ ಮಾಡಲು ಸಾಧ್ಯವಾಗೋದಿಲ್ಲ.ಅಲ್ಲದೆ, ಬ್ಯಾಂಕ್ ಖಾತೆ ( ) ತೆರೆಯಲು, ಮ್ಯೂಚುವಲ್ ಫಂಡ್ ನಲ್ಲಿ ( ) ಹೂಡಿಕೆ () ಮಾಡಲು ಹಾಗೂ ಡಿಮ್ಯಾಟ್ ಖಾತೆ ( ) ತೆರೆಯಲು ಸಾಧ್ಯವಾಗೋದಿಲ್ಲ. ಇನ್ನು 50 ಸಾವಿರ ರೂ.ಗಿಂತ ಅಧಿಕ ಮೊತ್ತದ ಬ್ಯಾಂಕಿಂಗ್ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯ. ಹೀಗಾಗಿ ಪ್ಯಾನ್ ನಿಷ್ಕ್ರಿಯಗೊಂಡ್ರೆ ಬ್ಯಾಂಕಿಂಗ್ ಸೇವೆಗಳನ್ನು ( ) ಪಡೆಯಲು ತೊಂದರೆಯಾಗುತ್ತದೆ.