: ಚಿನ್ನ - ಬೆಳ್ಳಿ ಇಂದಿನ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ ಸದ್ಯಕ್ಕೀಗ ಶುಭ ಕಾರ್ಯಕ್ರಮಗಳ ಸೀಜನ್, ಗೃಹ ಪ್ರವೇಶ, ಮದುವೆ, ನಿಶ್ಚಿತಾರ್ಥ ಹೀಗೆ ಅನೇಕ ಕಾರ್ಯಕ್ರಮಗಳು ನಡೆಯುತ್ತದೆ. ಹೀಗಿರುವಾಗ ಚಿನ್ನ, ಬೆಳ್ಳಿಯ ಖರೀದಿಯೂ ಭರ್ಜರಿಯಾಗೇ ಸಾಗುತ್ತಿದೆ. ಚಿನ್ನ ದುಬಾರಿಯಾದರೂ ಕೆಲವೊಮ್ಮೆ ಖರೀದಿಸಲೇಬೇಕಾದ ಅನಿವಾರ್ಯತೆ ಬಂದೊದಗುತ್ತದೆ. ಹೀಗಿರುವಾಗ ಇದು ಜನ ಸಾಮಾಣ್ಯರಿಗೆ ಕೊಂಚ ಪೆಟ್ಟು ನೀಡುತ್ತದೆ. ಅನೇಕ ಮಂದಿ ಇದೇ ಕಾರಣದಿಂದಾಗಿ ತಮ್ಮ ಕಾರ್ಯಕ್ರಮದ ದಿನಾಂಕವನ್ನೇ ಮುಂದೂಡುತ್ತಿದ್ದಾರೆ. ಬೆಂಗಳೂರು(ಮೇ.18):ಚಿನ್ನ ಮತ್ತು ಬೆಳ್ಳಿ ಅಂದರೆ ಬಹುತೇಕ ಮಹಿಳೆಯರಿಗೆ ಪ್ರಾಣ, ಮತ್ತು ಎಷ್ಟೋ ಕಷ್ಟದ ಸಮಯಗಳಲ್ಲಿ ಮನೆಯ ಆರ್ಥಿಕ ಸಮಸ್ಯೆಗಳಿಗೆ ಪರಿಹಾರವಾಗಿ ನಿಲ್ಲುವುದೇ ಮನೆಯಲ್ಲಿರುವ ಚಿನ್ನ. ಇದೇ ಕಾರಣಕ್ಕಾಗಿ ಕೆಲವರು ಆಪತ್ಕಾಲಕ್ಕಾಗಿ ಎಂದು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಇನ್ನು ಕೆಲವರು ಆಭರಣದ ಮೇಲಿನ ವ್ಯಾಮೋಹಕ್ಕಾಗಿ ಚಿನ್ನ ಕೊಳ್ಳುತ್ತಾರೆ. ಒಟ್ಟಿನಲ್ಲಿ ಚಿನ್ನ ಮತ್ತು ಬೆಳ್ಳಿಗೆ ಸದಾಕಾಲ ಬೇಡಿಕೆ ಇದ್ದೇ ಇದೆ. ಚಿನ್ನ ಮತ್ತು ಬೆಳ್ಳಿ ಇಂದಿನ ಬೆಲೆ ಈ ಕೆಳಗಿನಂತಿದೆ. ಒಂದು ಗ್ರಾಂ (1GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,65524 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,078 ಎಂಟು ಗ್ರಾಂ (8GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 37,24024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,624 ಹತ್ತು ಗ್ರಾಂ (10GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 46,55024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 50,780 ನೂರು ಗ್ರಾಂ (100GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,65,50024 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,07,800 ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್ ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46,250 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.47,440, ರೂ. 46,250, ರೂ. 46,250 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 46,250 ರೂ. ಆಗಿದೆ. ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್ ಇಂದು, ಬೆಂಗಳೂರಿನಲ್ಲಿ 10 , 100 , 1000 (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 656, ರೂ. 6,560 ಹಾಗೂ ರೂ. 65,600 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 65,600 ಆಗಿದ್ದರೆ ದೆಹಲಿಯಲ್ಲಿ 61,550 ಮುಂಬೈನಲ್ಲಿ 61,550 ಹಾಗೂ ಕೋಲ್ಕತ್ತದಲ್ಲೂ ರೂ. 61,550 ಗಳಾಗಿದೆ.