:ಮೇ 31ರೊಳಗೆ ಈ ಕೆಲ್ಸ ಮಾಡದಿದ್ರೆ ಕೇಂದ್ರ ಸರ್ಕಾರ ರೈತರ ಖಾತೆಗೆ ಹಣ ಹಾಕಲ್ಲ! *ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಣಿಗೊಂಡಿರೋ ರೈತರಿಗೆ ಇ-ಕೆವೈಸಿ ಕಡ್ಡಾಯ*ಇ-ಕೆವೈಸಿ ಪೂರ್ಣಗೊಳಿಸಲು ಮೇ 31 ಅಂತಿಮ ಗಡುವು*ಇ-ಕೆವೈಸಿ ಪೂರ್ಣಗೊಳ್ಳದ ಖಾತೆಗೆ ಮುಂದಿನ ಕಂತಿನ ಹಣ ಜಮೆ ಆಗದು ನವದೆಹಲಿ (ಮೇ 19):ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (- ) ಯೋಜನೆ ಅಡಿಯಲ್ಲಿ ಸಹಾಯಧನ ಪಡೆಯುತ್ತಿರುವ ಎಲ್ಲ ರೈತರು ಮೇ 31ರೊಳಗೆ ಅಗತ್ಯವಾಗಿ ಇ-ಕೆವೈಸಿ () ಪೂರ್ಣಗೊಳಿಸಬೇಕು. ಇ-ಕೆವೈಸಿ () ಪೂರ್ಣಗೊಳಿಸದ ರೈತರಿಗೆ ಯೋಜನೆಯ ಪೂರ್ಣ ಲಾಭ ಸಿಗೋದಿಲ್ಲ. ಅಲ್ಲದೆ, ಖಾತೆಗೆ 11 ಕಂತಿನ ಹಣ ಜಮೆ ಆಗೋದಿಲ್ಲ ಎಂದು ಹೇಳಲಾಗಿದೆ. ಈ ಹಿಂದೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಮಾರ್ಚ್ 31 ರ ಗಡುವು () ನೀಡಲಾಗಿತ್ತು. ಆ ಬಳಿಕ ಅದನ್ನು ಮೇ 22ಕ್ಕೆ ವಿಸ್ತರಿಸಲಾಗಿತ್ತು. ಪಿಎಂ ಕಿಸಾನ್ (-) ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಣಿಗೊಂಡಿರೋ ರೈತರಿಗೆ ಇ-ಕೆವೈಸಿ ಕಡ್ಡಾಯ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 12 ಕೋಟಿ 56 ಲಕ್ಷ ರೈತರು ನೋಂದಣಿಗೊಂಡಿದ್ದಾರೆ. ಸದ್ಯ ರೈತರು ಈ ಯೋಜನೆಯಡಿ ಸರ್ಕಾರ ಈ ತನಕ 10 ಕಂತುಗಳನ್ನು ಬಿಡುಗಡೆ ಮಾಡಿದೆ. 11ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ. ಡೆಬಿಟ್ ಕಾರ್ಡ್‌ ಇಲ್ಲದೆಯೇ ಕ್ಯಾಶ್ ತೆಗೆಯಬಹುದು, ಇಲ್ಲಿವೆ ಸಿಂಪಲ್ ಟಿಪ್ಸ್ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (-) ಯೋಜನೆಯನ್ನು 2019ರಲ್ಲಿ ಜಾರಿಗೊಳಿಸಲಾಗಿತ್ತು. ಈ ಯೋಜನೆ ಕೃಷಿ ಭೂಮಿ ಹೊಂದಿರೋ ದೇಶದ ಎಲ್ಲ ಭೂ ಹಿಡುವಳಿ ರೈತ ಕುಟುಂಬಗಳಿಗೆ ಆದಾಯದ ಬೆಂಬಲ ನೀಡೋ ಗುರಿ ಹೊಂದಿದೆ. ಈ ಯೋಜನೆಯಡಿಯಲ್ಲಿ ಭೂ ಹಿಡುವಳಿ ಹೊಂದಿರೋ ಎಲ್ಲ ರೈತ ಕುಟುಂಬಗಳು ವಾರ್ಷಿಕ 6,000ರೂ. ಆರ್ಥಿಕ ಪ್ರಯೋಜನ ಪಡೆಯಬಹುದಾಗಿದೆ. ಈ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2000 ರೂ.ನಂತೆ ಮೂರು ಕಂತುಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ( ) ನೇರವಾಗಿ ಜಮಾ () ಮಾಡಲಾಗುತ್ತದೆ. ಒಂದು ಆರ್ಥಿಕ ಸಾಲಿನಲ್ಲಿ ಪಿಎಂ ಕಿಸಾನ್ ಯೋಜನೆ ಕಂತುಗಳನ್ನು ಮೂರು ಬಾರಿ ಪಾವತಿಸಲಾಗುತ್ತದೆ. ಮೊದಲನೇ ಕಂತಿನ ಅವಧಿ ಏಪ್ರಿಲ್-ಜುಲೈ.ಎರಡನೇ ಕಂತಿನ ಅವಧಿ ಆಗಸ್ಟ್-ನವೆಂಬರ್ ಹಾಗೂ ಮೂರನೇ ಕಂತಿನ ಅವಧಿ ಡಿಸೆಂಬರ್ ನಿಂದ ಮಾರ್ಚ್. ಇ-ಕೆವೈಸಿ ಪೂರ್ಣಗೊಳಿಸುವುದು ಎಲ್ಲಿ?ಮೊಬೈಲ್ ನಲ್ಲಿ ಕೂಡ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಆದರೆ, ಬಹುತೇಕ ರೈತರು ಆಂಡ್ರಾಯ್ಡ್ ಮೊಬೈಲ್ ಹೊಂದಿರದ ಕಾರಣ ಈ ಪ್ರಕ್ರಿಯೆ ಪೂರ್ಣಗೊಳಿಸಲು ಕಷ್ಟವಾಗುತ್ತಿದೆ. ಇಂಥ ರೈತರಿಗೆ ನೆರವಾಗಲೆಂದು 'ಗ್ರಾಮ್ ಒನ್ ಸೇವಾ ಕೇಂದ್ರಗಳ' ಮೂಲಕ ಇ-ಕೆವೈಸಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ನಮೂದಿಸದಿರುವುದು ಅಥವಾ ತಪ್ಪು ಮೊಬೈಲ್ ಸಂಖ್ಯೆ ನಮೂದಾಗಿದ್ದರೆ ಅಂಥವರು ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಲು ಗ್ರಾಮ್ ಒನ್ ಸೇವಾ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಇನ್ನು ಸೈಬರ್ ಗಳಲ್ಲಿ ಕೂಡ ಇ-ಕೆವೈಸಿ ಪೂರ್ಣಗೊಳಿಸಬಹುದು. :ಗ್ಯಾಸ್ ಸಿಲಿಂಡರ್ ದರ ಮತ್ತೆ ಹೆಚ್ಚಳ; ಜನಸಾಮಾನ್ಯರ ಜೇಬಿನ ಮೇಲೆ ಹೆಚ್ಚಿದ ಹೊರೆ ಪಿಎಂ ಕಿಸಾನ್ ಇ-ಕೆವೈಸಿ ಪೂರ್ಣಗೊಳಿಸೋದು ಹೇಗೆ?-ಮೊದಲಿಗೆ ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟ್ ://.. ಭೇಟಿ ನೀಡಿ.-ಈಗ ಬಲ ಭಾಗದಲ್ಲಿ ಹೋಮ್ ಪೇಜ್ ಕೆಳಗೆ ನಿಮಗೆ ಫಾರ್ಮರ್ಸ್ ಕಾರ್ನರ್ ಕಾಣಿಸುತ್ತದೆ.-ಫಾರ್ಮರ್ಸ್ ಕಾರ್ನರ್ ಕೆಳಗೆ ಒಂದು ಬಾಕ್ಸ್ ಇದ್ದು, ಅದ್ರಲ್ಲಿ ಇ-ಕೆವೈಸಿ ಎಂದಿದೆ.-ಈಗ ಇ-ಕೆವೈಸಿ ಮೇಲೆ ಕ್ಲಿಕ್ ಮಾಡಿ.-ಒಂದು ಪುಟ ತೆರೆದುಕೊಳ್ಳುತ್ತದೆ. ಅದ್ರಲ್ಲಿ ಆಧಾರ್ ಇ-ಕೆವೈಸಿ ಭರ್ತಿ ಮಾಡಬಹುದು.-ಈಗ ನೀವು ಆಧಾರ್ ಸಂಖ್ಯೆ ಹಾಗೂ ಕಾಪ್ಚ ಕೋಡ್ ನಮೂದಿಸಬೇಕು. ಆ ಬಳಿಕ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.-ಆ ಬಳಿಕ ನೀವು ಆಧಾರ್ ಸಂಖ್ಯೆಗೆ ಲಿಂಕ್ ಆಗಿರೋ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಬೇಕು. ಆ ಬಳಿಕ ಬಟನ್ ಮೇಲೆ ಕ್ಲಿಕ್ ಮಾಡಬೇಕು.-ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.- ನೋಂದಾಯಿಸಿ ಸಬ್ಮಿಟ್ ಮಾಡಲು ಮೇಲೆ ಕ್ಲಿಕ್ ಮಾಡಿ.- ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ - ಪೂರ್ಣಗೊಳ್ಳುತ್ತದೆ.