: ನಾಳೆ ಎಲ್ಐಸಿ ಐಪಿಒ; ಗಾತ್ರ, ಬೆಲೆ, ಡಿಸ್ಕೌಂಟ್ , ಆನ್ ಲೈನ್ ಷೇರು ಖರೀದಿಯ ಸಂಪೂರ್ಣ ಮಾಹಿತಿ ಇಲ್ಲಿದೆ ನಾಳೆ ನಡೆಯಲಿರುವ ಎಲ್ಐಸಿ ಐಪಿಒ ದೇಶಾದ್ಯಂತ ಸಾಕಷ್ಟು ಕುತೂಹಲ ಮೂಡಿಸಿದೆ. ಇದನ್ನು ಭಾರತದ ಅತೀದೊಡ್ಡ ಐಪಿಒ ಎಂದು ಕರೆಯಲಾಗಿದ್ದು,ಇದರಲ್ಲಿ ಪಾಲ್ಗೊಳ್ಳುವವರು ಕೆಲವು ವಿಷಯಗಳ ಮಾಹಿತಿ ಹೊಂದಿರುವುದು ಅಗತ್ಯ.ಷೇರಿನ ಬೆಲೆ, ಡಿಸ್ಕೌಂಟ್ ಸೇರಿದಂತೆ ಆನ್ ಲೈನ್ ಮೂಲಕ ಐಪಿಒನಲ್ಲಿ ಪಾಲ್ಗೊಳ್ಳುವುದು ಹೇಗೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ. :ಭಾರತೀಯ ಜೀವ ವಿಮಾ ನಿಗಮದ () ಬಹುನಿರೀಕ್ಷಿತ ಐಪಿಒ () ನಾಳೆ (ಮೇ 4) ಪ್ರಾರಂಭವಾಗಲಿದೆ. ಇದು ಭಾರತದ ಅತೀದೊಡ್ಡ ಐಪಿಒ ಆಗುವ ನಿರೀಕ್ಷೆಯಿದ್ದು, ಕೇಂದ್ರ ಸರ್ಕಾರ 21,000 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. ಷೇರಿನ ಬೆಲೆ ಎಷ್ಟು?:ಎಲ್ಐಸಿಯ () ಪ್ರತಿ ಇಕ್ವಿಟಿ ಷೇರಿಗೆ ( ) 902ರೂ. ನಿಂದ 949ರೂ. ಬೆಲೆ ನಿಗದಿಪಡಿಸಲಾಗಿದೆ.ಐಪಿಒ ನಡೆಯುವ ದಿನಾಂಕಎಲ್ಐಸಿ ಐಪಿಒ ಮೇ 4 ಕ್ಕೆ ಪ್ರಾರಂಭವಾಗಿ ಮೇ 9ರ ತನಕ ನಡೆಯಲಿದೆ.ಆಂಕರ್ ಹೂಡಿಕೆದಾರರಿಗೆ ( ) ಮೇ 2ಕ್ಕೆ ಪ್ರಾರಂಭವಾಗಿದೆ.ಯಾರಿಗೆ ಸಿಗುತ್ತೆ ಡಿಸ್ಕೌಂಟ್?:ಎಲ್ ಐಸಿ ಪಾಲಿಸಿದಾರರಿಗೆ () ಪ್ರತಿ ಷೇರಿನ ಮೇಲೆ 60ರೂ. ಡಿಸ್ಕೌಂಟ್ ()ನೀಡಲಾಗಿದೆ. ಎಲ್ಐಸಿಯಲ್ಲಿ 30 ಕೋಟಿ ಪಾಲಿಸಿದಾರರಿದ್ದಾರೆ. ಇನ್ನು ಎಲ್ಐಸಿ ಸಿಬ್ಬಂದಿ () ಹಾಗೂ ರಿಟೇಲ್ ಹೂಡಿಕೆದಾರರಿಗೆ ( ) ಪ್ರತಿ ಷೇರಿನ ಮೇಲೆ 45ರೂ. ಡಿಸ್ಕೌಂಟ್ ನೀಡಲಾಗಿದೆ.ಎಲ್ಐಸಿ ಪಾಲಿಸಿದಾರರಿಗೆ ಷೇರು ಮೀಸಲು:ಎಲ್ಐಸಿ ಪಾಲಿಸಿದಾರರು ಹಾಗೂ ಉದ್ಯೋಗಿಗಳಿಗೆ ಐಪಿಒನಲ್ಲಿ ಪಾಲ್ಗೊಳ್ಳುವಂತೆ ಉತ್ತೇಜನ ನೀಡಲು ಸರ್ಕಾರ ಷೇರುಗಳನ್ನು ಮೀಸಲಿಟ್ಟಿದೆ. ಎಲ್ಐಸಿ ಪಾಲಿಸಿದಾರರಿಗೆ ಶೇ.10ರಷ್ಟು ಷೇರುಗಳನ್ನು ಮೀಸಲಿಟ್ಟಿದೆ. ಇನ್ನು ಎಲ್ಐಸಿ ಉದ್ಯೋಗಿಗಳಿಗೆ ಶೇ.5ರಷ್ಟು ಷೇರುಗಳನ್ನು ಮೀಸಲಿಡಲಾಗಿದೆ. ರಿಟೇಲ್ ಹೂಡಿಕೆದಾರರಿಗೆ ಶೇ.35ರಷ್ಟು ಷೇರುಗಳನ್ನು ಮೀಸಲಿಡಲಾಗಿದೆ. :ಮೇ 4-9ರ ತನಕ ಎಲ್ಐಸಿ ಐಪಿಒ; ಪ್ರತಿ ಷೇರಿನ ಬೆಲೆ ಎಷ್ಟು ಗೊತ್ತಾ? ಪಾಲಿಸಿದಾರರಿಗೆ ಡಿಸ್ಕೌಂಟ್ ಆಫರ್! ಹಂಚಿಕೆ ದಿನಾಂಕ ( ):ಷೇರುಗಳನ್ನು ಮೇ 12ಕ್ಕೆ ಹಂಚಿಕೆ ಮಾಡಲಾಗುತ್ತದೆ.ಷೇರು ವರ್ಗಾವಣೆ: ಡಿಮ್ಯಾಟ್ () ಖಾತೆಗಳಿಗೆ ಮೇ 16ರಂದು ಷೇರುಗಳನ್ನು ವರ್ಗಾವಣೆ ಮಾಡಲಾಗುತ್ತದೆ.ಲಿಸ್ಟಿಂಗ್ ()ದಿನಾಂಕ:ಮೇ 17ರಂದು ವಿನಿಮಯ ಕೇಂದ್ರಗಳಾದ ಬಿಎಸ್ ಇ () ಹಾಗೂ ಎನ್ಎಸ್ಇಯಲ್ಲಿ () ಷೇರುಗಳ ಲಿಸ್ಟಿಂಗ್ ನಡೆಯಲಿದೆ.ಐಪಿಒ ಗಾತ್ರ ( ):ಎಲ್ಐಸಿಯಲ್ಲಿ ಕೇಂದ್ರ ಸರ್ಕಾರ ಶೇ.100ರಷ್ಟು ಷೇರುಗಳನ್ನು ಹೊಂದಿದೆ. ಇದರಲ್ಲಿ ಶೇ. 3.5ರಷ್ಟು ಅಥವಾ 22.13 ಕೋಟಿ ಷೇರುಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಿದೆ. ಈ ಮೂಲಕ 21,008.48 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ.ಬಿಡ್ ಮಿತಿ ( ):ಅರ್ಜಿದಾರ ಲಾಟ್ ಲೆಕ್ಕದಲ್ಲಿ ಬಿಡ್ ಮಾಡಬಹುದಾಗಿದೆ. ಒಂದು ಲಾಟ್ ನಲ್ಲಿ 15 ಎಲ್ ಐಸಿ ಷೇರುಗಳಿರುತ್ತವೆ. ಒಬ್ಬ ವ್ಯಕ್ತಿ ಕನಿಷ್ಠ ಒಂದು ಲಾಟ್ ಅಥವಾ 15 ಷೇರುಗಳಿಗೆ ಬಿಡ್ ಮಾಡಬಹುದು. ಇನ್ನು ಗರಿಷ್ಠ ಬಿಡ್ ಮಿತಿ 14 ಲಾಟ್ ಅಥವಾ 210 ಷೇರುಗಳು.ಹೂಡಿಕೆ ಮಿತಿ ( ):ಕನಿಷ್ಠ ಹೂಡಿಕೆ ಮಿತಿ 14,235 ರೂ. ( ₹949 15). ಇನ್ನು ಗರಿಷ್ಠ ಹೂಡಿಕೆ ಮಿತಿ ₹1,99,290 ರೂ. [( ₹949 15) 14].ಎಲ್ ಐಸಿ ಐಪಿಒ ರಿಜಿಸ್ಟ್ರಾರ್ (): . : ಗ್ರಾಹಕರಿಗೆ ಎಸ್ ಬಿಐ ಆಫರ್! ಯೋನೋ ಅಪ್ಲಿಕೇಷನ್ ಮೂಲಕ ಡಿಮ್ಯಾಟ್ ಖಾತೆ ತೆರೆಯಲು ಅವಕಾಶ ಐಪಿಒಗೆ ಅಪ್ಲೈ ಮಾಡೋದು ಹೇಗೆ?ಎಲ್ಐಸಿ ಐಪಿಒಗೆ ಅಪ್ಲೈ ಮಾಡಲು ನೀವು ಡಿಮ್ಯಾಟ್ ಖಾತೆ ತೆರೆಯಬೇಕು ಹಾಗೂ ಕೆವೈಸಿ () ಪೂರ್ಣಗೊಳಿಸಿರಬೇಕು. ಆ ಬಳಿಕ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸುವ ಮೂಲಕ ಐಪಿಒಗೆ ಅಪ್ಲೈ ಮಾಡಿ. ಇದರ ಜೊತೆಗೆ ಗುರುತು ದೃಢೀಕರಣ ದಾಖಲೆ, ವಯಸ್ಸಿನ ದಾಖಲೆ ಹಾಗೂ ಬ್ಯಾಂಕ್ ವಿವರಗಳು ಸೇರಿದಂತೆ ಕೆಲವು ದಾಖಲೆಗಳನ್ನು ನೀವು ಹೊಂದಿರಬೇಕು. ಇನ್ನು ಎಲ್ಐಸಿ ಪಾಲಿಸಿದಾರರು ಅವರ ಪಾಲಿಸಿ ಹಾಗೂ ಡಿಮ್ಯಾಟ್ ಖಾತೆಯನ್ನು ಪ್ಯಾನ್ () ಜೊತೆಗೆ ಲಿಂಕ್ ಮಾಡೋದು ಅಗತ್ಯ.ಹಂತ 1:ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆ ತೆರೆಯಿರಿ ಹಾಗೂ /- ಆಯ್ಕೆಯನ್ನು ಆರಿಸಿ.ಹಂತ 2:ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ವೆಬ್ ಸೈಟ್ ನಲ್ಲಿ ಕೇಳಿರುವ ಬ್ಯಾಂಕ್ ವಿವರಗಳು ಹಾಗೂ ಇತರ ಮಾಹಿತಿಗಳನ್ನು ನಮೂದಿಸಿ.ಹಂತ 3: ಆಯ್ಕೆ ಆರಿಸಿ ಹಾಗೂ ಆಯ್ಕೆ ಮಾಡಿ.ಹಂತ 4:ಷೇರುಗಳ ಸಂಖ್ಯೆ ಹಾಗೂ ಬಿಡ್ ಬೆಲೆ ನಮೂದಿಸಿ. ಆ ಬಳಿಕ ಪ್ರಕ್ರಿಯೆ ಪೂರ್ಣಗೊಳಿಸಲು ' 'ಆಯ್ಕೆ ಮೇಲೆ ಕ್ಲಿಕ್ ಮಾಡಿ.