ಹೋಟೆಲ್‌ ಊಟ, ತಿಂಡಿ ದುಬಾರಿ: ಶೇ. 10ರಷ್ಟು ದರ ಹೆಚ್ಚಳ? *ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ*ಹೋಟೆಲ್‌ಗಳಲ್ಲಿ ತಿಂಡಿ ತಿನಿಸುಗಳ ಬೆಲೆ ಹೆಚ್ಚಳ?*ಹೋಟೆಲ್‌ ಮಾಲಿಕ ಸಭೆಯಲ್ಲಿ ದರ ಚರ್ಚೆ ಬೆಂಗಳೂರು (ಏ. 04):ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ( ) ಹಿನ್ನೆಲೆಯಲ್ಲಿ ಏಪ್ರಿಲ್‌ ಎರಡನೇ ವಾರದಿಂದ ಹೋಟೆಲ್‌ ತಿಂಡಿಗಳ ಬೆಲೆ ಹೆಚ್ಚಳ ಮಾಡಲು ಹೋಟೆಲ್‌ () ಮಾಲಿಕರ ಸಂಘ ನಿರ್ಧರಿಸಿದೆ. ಅಡುಗೆ ಅನಿಲ, ಅಡುಗೆ ಎಣ್ಣೆ, ವಿದ್ಯುತ್‌ ದರ ಹಾಗೂ ಇಂಧನ ಬೆಲೆಗಳು ಹೆಚ್ಚಾಗುತ್ತಿವೆ. ಇದರಿಂದ ಹೋಟೆಲ್‌ಗಳ ತಿಂಡಿಗಳ ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂಬುದು ಹೋಟೆಲ್‌ ಮಾಲೀಕರ ಅಭಿಪ್ರಾಯ.ಇದನ್ನೂ ಓದಿ: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 250 ರೂಪಾಯಿ ಏರಿಕೆ, ಒಂದು ಸಿಲಿಂಡರ್ ಬೆಲೆ 2250 ರೂಪಾಯಿ!ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೋಟೆಲ್‌ ಮಾಲಿಕ ಸಂಘದಿಂದ ಸೋಮವಾರ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಎಲ್ಲ ಮಾಲೀಕರು ಭಾಗವಹಿಸುತ್ತಿದ್ದು, ಅವರಿಂದ ಅಭಿಪ್ರಾಯ ಪಡೆಯಲಾಗುವುದು. ಬಳಿಕ ಎಷ್ಟುಪ್ರಮಾಣದಲ್ಲಿ ಬೆಲೆ ಹೆಚ್ಚಳ ಮಾಡಬೇಕು ಎಂಬುದನ್ನು ತೀರ್ಮಾನಿಸಲಾಗುವುದು. ಏಪ್ರಿಲ್‌ ಎರಡನೇ ವಾರದಿಂದ ಪರಿಷ್ಕೃತ ಬೆಲೆ ಜಾರಿಗೆ ತರಲು ತೀರ್ಮಾನಿಸಿರುವುದಾಗಿ ರಾಜ್ಯ ಹೋಟೆಲ್‌ ಸಂಘದ ಅಧ್ಯಕ್ಷರಾದ ಚಂದ್ರೆಶೇಖರ್‌ ಹೇಳಿದ್ದಾರೆ. ಬೆಂಗಳೂರು (ಏ. 04):ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ( ) ಹಿನ್ನೆಲೆಯಲ್ಲಿ ಏಪ್ರಿಲ್‌ ಎರಡನೇ ವಾರದಿಂದ ಹೋಟೆಲ್‌ ತಿಂಡಿಗಳ ಬೆಲೆ ಹೆಚ್ಚಳ ಮಾಡಲು ಹೋಟೆಲ್‌ () ಮಾಲಿಕರ ಸಂಘ ನಿರ್ಧರಿಸಿದೆ. ಅಡುಗೆ ಅನಿಲ, ಅಡುಗೆ ಎಣ್ಣೆ, ವಿದ್ಯುತ್‌ ದರ ಹಾಗೂ ಇಂಧನ ಬೆಲೆಗಳು ಹೆಚ್ಚಾಗುತ್ತಿವೆ. ಇದರಿಂದ ಹೋಟೆಲ್‌ಗಳ ತಿಂಡಿಗಳ ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂಬುದು ಹೋಟೆಲ್‌ ಮಾಲೀಕರ ಅಭಿಪ್ರಾಯ. ಇದನ್ನೂ ಓದಿ: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 250 ರೂಪಾಯಿ ಏರಿಕೆ, ಒಂದು ಸಿಲಿಂಡರ್ ಬೆಲೆ 2250 ರೂಪಾಯಿ! ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೋಟೆಲ್‌ ಮಾಲಿಕ ಸಂಘದಿಂದ ಸೋಮವಾರ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಎಲ್ಲ ಮಾಲೀಕರು ಭಾಗವಹಿಸುತ್ತಿದ್ದು, ಅವರಿಂದ ಅಭಿಪ್ರಾಯ ಪಡೆಯಲಾಗುವುದು. ಬಳಿಕ ಎಷ್ಟುಪ್ರಮಾಣದಲ್ಲಿ ಬೆಲೆ ಹೆಚ್ಚಳ ಮಾಡಬೇಕು ಎಂಬುದನ್ನು ತೀರ್ಮಾನಿಸಲಾಗುವುದು. ಏಪ್ರಿಲ್‌ ಎರಡನೇ ವಾರದಿಂದ ಪರಿಷ್ಕೃತ ಬೆಲೆ ಜಾರಿಗೆ ತರಲು ತೀರ್ಮಾನಿಸಿರುವುದಾಗಿ ರಾಜ್ಯ ಹೋಟೆಲ್‌ ಸಂಘದ ಅಧ್ಯಕ್ಷರಾದ ಚಂದ್ರೆಶೇಖರ್‌ ಹೇಳಿದ್ದಾರೆ.