:ರೈತರಿಗೆ ನೆಮ್ಮದಿಯ ಸುದ್ದಿ; ಪಿಎಂ ಕಿಸಾನ್ ಇ-ಕೆವೈಸಿ ಗಡುವು ಮೇ 22ಕ್ಕೆ ವಿಸ್ತರಣೆ *ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಣಿಗೊಂಡಿರೋ ರೈತರಿಗೆ ಇ-ಕೆವೈಸಿ ಕಡ್ಡಾಯ*ಈ ಹಿಂದೆ ಮಾ.31ಕ್ಕೆ ಇ-ಕೆವೈಸಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು*ಈ ಯೋಜನೆಯಡಿಯಲ್ಲಿ ಭೂ ಹಿಡುವಳಿ ಹೊಂದಿರೋ ಎಲ್ಲ ರೈತ ಕುಟುಂಬಗಳಿಗೆ ವಾರ್ಷಿಕ 6,000ರೂ. ಆರ್ಥಿಕ ಪ್ರಯೋಜನ ನವದೆಹಲಿ (ಮಾ.31):ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (-) ಯೋಜನೆ ಸಂಪೂರ್ಣ ಪ್ರಯೋಜನ ಪಡೆಯಲು ರೈತರು ಮಾರ್ಚ್ 31ರೊಳಗೆ ಇ-ಕೆವೈಸಿ () ಪ್ರಕ್ರಿಯೆ ಪೂರ್ಣಗೊಳಿಸೋದು ಕಡ್ಡಾಯ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದ್ರೆ ಈ ಗಡುವನ್ನು () ಈಗ 2022ರ ಮೇ 22ಕ್ಕೆ ಮುಂದೂಡಲಾಗಿದೆ. ಹೀಗಾಗಿ ರೈತರು ಚಿಂತೆ ಮಾಡಬೇಕಾದ ಅಗತ್ಯವಿಲ್ಲ, ಮೇ 22ರೊಳಗೆ ಇ-ಕೆವೈಸಿ () ಪೂರ್ಣಗೊಳಿಸಿದರೆ ಸಾಕು. ಪಿಎಂ ಕಿಸಾನ್ (-) ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಣಿಗೊಂಡಿರೋ ರೈತರಿಗೆ ಇ-ಕೆವೈಸಿ ಕಡ್ಡಾಯ. ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸೋ ಗಡುವನ್ನು ಮೇ 22ಕ್ಕೆ ಮುಂದೂಡಿರೋ ಬಗ್ಗೆ ಪಿಎಂ ಕಿಸಾನ್ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದ್ದು,' ಪಿಎಂ ಕಿಸಾನ್ ಯೋಜನೆಯ ಎಲ್ಲ ಫಲಾನುಭವಿಗಳಿಗೆ ಇ-ಕೆವೈಸಿ ಗಡುವನ್ನು 2022ರ ಮೇ 22ಕ್ಕೆ ವಿಸ್ತರಿಸಲಾಗಿದೆ' ಎಂದು ತಿಳಿಸಲಾಗಿದೆ. ನೋಟಿಗೆ ಬೇಕಾದ ಇಂಕ್ ಇನ್ಮುಂದೆ ನಮ್ಮಲ್ಲೇ ಸಿಗುತ್ತೆ! ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (-) ಯೋಜನೆಯನ್ನು 2019ರಲ್ಲಿ ಜಾರಿಗೊಳಿಸಲಾಗಿತ್ತು. ಈ ಯೋಜನೆ ಕೃಷಿ ಭೂಮಿ ಹೊಂದಿರೋ ದೇಶದ ಎಲ್ಲ ಭೂ ಹಿಡುವಳಿ ರೈತ ಕುಟುಂಬಗಳಿಗೆ ಆದಾಯದ ಬೆಂಬಲ ನೀಡೋ ಗುರಿ ಹೊಂದಿದೆ. ಈ ಯೋಜನೆಯಡಿಯಲ್ಲಿ ಭೂ ಹಿಡುವಳಿ ಹೊಂದಿರೋ ಎಲ್ಲ ರೈತ ಕುಟುಂಬಗಳು ವಾರ್ಷಿಕ 6,000ರೂ. ಆರ್ಥಿಕ ಪ್ರಯೋಜನ ಪಡೆಯಬಹುದಾಗಿದೆ. ಈ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2000 ರೂ.ನಂತೆ ಮೂರು ಕಂತುಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ( ) ನೇರವಾಗಿ ಜಮಾ () ಮಾಡಲಾಗುತ್ತದೆ. ಒಂದು ಆರ್ಥಿಕ ಸಾಲಿನಲ್ಲಿ ಪಿಎಂ ಕಿಸಾನ್ ಯೋಜನೆ ಕಂತುಗಳನ್ನು ಮೂರು ಬಾರಿ ಪಾವತಿಸಲಾಗುತ್ತದೆ. ಮೊದಲನೇ ಕಂತಿನ ಅವಧಿ ಏಪ್ರಿಲ್-ಜುಲೈ.ಎರಡನೇ ಕಂತಿನ ಅವಧಿ ಆಗಸ್ಟ್-ನವೆಂಬರ್ ಹಾಗೂ ಮೂರನೇ ಕಂತಿನ ಅವಧಿ ಡಿಸೆಂಬರ್ ನಿಂದ ಮಾರ್ಚ್. ಪಿಎಂ ಕಿಸಾನ್ ಯೋಜನೆ ಪ್ರಾರಂಭಿಸಿದ ದಿನಗಳಲ್ಲಿ ಇದರ ಪ್ರಯೋಜನ ಕೇವಲ ಸಣ್ಣ ಹಾಗೂ ಮಧ್ಯಮ ವರ್ಗದ ರೈತರ ಕುಟುಂಬಗಳಿಗೆ ಮೀಸಲಾಗಿತ್ತು. ಅಂದ್ರೆ 2 ಹೆಕ್ಟೇರ್ ಭೂಮಿ ಹೊಂದಿರೋರಿಗೆ ಮಾತ್ರ ಈ ಪ್ರಯೋಜನ ಸಿಗುತ್ತಿತ್ತು. ಆದ್ರೆ ಈ ಯೋಜನೆಯನ್ನು 2019ರ ಜೂನ್ ನಲ್ಲಿ ಪರಿಷ್ಕರಿಸಲಾಯಿತು ಹಾಗೂ ಭೂ ಹಿಡುವಳಿ ಗಾತ್ರದ ಹೊರತಾಗಿಯೂ ಎಲ್ಲ ರೈತ ಕುಟುಂಬಗಳಿಗೆ ವಿಸ್ತರಿಸಲಾಯಿತು. ಪಿಎಂ ಕಿಸಾನ್ ಇ-ಕೆವೈಸಿ ಪೂರ್ಣಗೊಳಿಸೋದು ಹೇಗೆ?-ಮೊದಲಿಗೆ ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟ್ ://.. ಭೇಟಿ ನೀಡಿ.-ಈಗ ಬಲ ಭಾಗದಲ್ಲಿ ಹೋಮ್ ಪೇಜ್ ಕೆಳಗೆ ನಿಮಗೆ ಫಾರ್ಮರ್ಸ್ ಕಾರ್ನರ್ ಕಾಣಿಸುತ್ತದೆ.-ಫಾರ್ಮರ್ಸ್ ಕಾರ್ನರ್ ಕೆಳಗೆ ಒಂದು ಬಾಕ್ಸ್ ಇದ್ದು, ಅದ್ರಲ್ಲಿ ಇ-ಕೆವೈಸಿ ಎಂದಿದೆ.-ಈಗ ಇ-ಕೆವೈಸಿ ಮೇಲೆ ಕ್ಲಿಕ್ ಮಾಡಿ.-ಒಂದು ಪುಟ ತೆರೆದುಕೊಳ್ಳುತ್ತದೆ. ಅದ್ರಲ್ಲಿ ಆಧಾರ್ ಇ-ಕೆವೈಸಿ ಭರ್ತಿ ಮಾಡಬಹುದು.-ಈಗ ನೀವು ಆಧಾರ್ ಸಂಖ್ಯೆ ಹಾಗೂ ಕಾಪ್ಚ ಕೋಡ್ ನಮೂದಿಸಬೇಕು. ಆ ಬಳಿಕ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.-ಆ ಬಳಿಕ ನೀವು ಆಧಾರ್ ಸಂಖ್ಯೆಗೆ ಲಿಂಕ್ ಆಗಿರೋ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಬೇಕು. ಆ ಬಳಿಕ ಬಟನ್ ಮೇಲೆ ಕ್ಲಿಕ್ ಮಾಡಬೇಕು. : ಪ್ಯಾನ್ ಗೆ ಆಧಾರ್ ಲಿಂಕ್ ಮಾಡಿಲ್ಲವೆಂದ್ರೆ ಹೂಡಿಕೆ ಅಸಾಧ್ಯ! -ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.- ನೋಂದಾಯಿಸಿ ಸಬ್ಮಿಟ್ ಮಾಡಲು ಮೇಲೆ ಕ್ಲಿಕ್ ಮಾಡಿ.- ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ - ಪೂರ್ಣಗೊಳ್ಳುತ್ತದೆ.