: ಮಾ.25 ವರೆಗೆ ಪಾಲಿಸಿ ವಿಶೇಷ ಪುನಶ್ಚೇತನ ಅಭಿಯಾನ! *ವಿಳಂಬ ಶುಲ್ಕದಲ್ಲಿ ರಿಯಾಯಿತಿ ಘೋಷಿಸಿದ ವಿಮಾ ಸಂಸ್ಥೆ*ವಿಳಂಬವಾಗಿರುವ ಜೀವ ವಿಮೆಗಳ ಪುನಶ್ಚೇತನಕ್ಕೆ ಅವಕಾಶ*ವಿಮೆದಾರರಿಗೆ ನೆರವಾಗಲು ಎರಡನೇ ಬಾರಿಗೆ ಅಭಿಯಾನ ಬೆಂಗಳೂರು (ಫೆ. 11):ವಿಮೆ ಕಂತು ತುಂಬಲು ವಿಳಂಬವಾಗಿರುವ ಜೀವ ವಿಮೆಗಳ ಪುನಶ್ಚೇತನಕ್ಕೆ () ಅವಕಾಶ ನೀಡಲು ಭಾರತೀಯ ಜೀವ ವಿಮಾ ನಿಗಮ () ಮುಂದಾಗಿದ್ದು, ಈ ಉದ್ದೇಶ ಸಾಧನೆಗಾಗಿ ಮಾರ್ಚ್ 25ರವರೆಗೆ ವಿಶೇಷ ಪುನಶ್ಚೇತನ ಅಭಿಯಾನವನ್ನು ಎಲ್‌ಐಸಿ ಆಯೋಜಿಸಿದೆ. ಹೈ ರಿಸ್ಕ್‌ ಪ್ಲಾನ್‌ ಮತ್ತು ವಿಮೆ ಅವಧಿಯಲ್ಲಿ ಸಾವು ಸಂಭವಿಸಿದರೆ ನೀಡುವ ಕನಿಷ್ಠ ವಿಮೆ ಮೊತ್ತ ( )ದ ಯೋಜನೆಗಳನ್ನು ಹೊರತು ಪಡಿಸಿ ಉಳಿದ ಯೋಜನೆಗಳಿಗೆ ಒಟ್ಟು ಪಾವತಿ ಮಾಡಿರುವ ವಿಮೆ ಕಂತಿನ ಆಧಾರದಲ್ಲಿ ವಿಳಂಬ ಶುಲ್ಕದಲ್ಲಿ ರಿಯಾಯಿತಿಯನ್ನು ಎಲ್‌ಐಸಿ ಪ್ರಕಟಿಸಿದೆ. ಆರೋಗ್ಯ ಮತ್ತು ಮೈಕ್ರೋ ವಿಮೆ ಯೋಜನೆಗಳಿಗೂ ವಿಳಂಬ ಶುಲ್ಕದಲ್ಲಿ ರಿಯಾಯಿತಿ ಇರಲಿದೆ. ವಿಳಂಬ ಶುಲ್ಕ:ವಿಶೇಷ ಪುನಶ್ಚೇತನ ಯೋಜನೆಯಡಿ ಪಾವತಿಸದ ಮೊದಲ ಕಂತಿನ ದಿನದಿಂದ ಐದು ವರ್ಷದೊಳಗೆ ಶರತ್ತು ಬದ್ಧವಾಗಿ ವಿಮೆಯನ್ನು ಪುನರುಜ್ಜೀವನ ಮಾಡಬಹುದು. ಸಾಂಪ್ರದಾಯಿಕ ಮತ್ತು ಆರೋಗ್ಯ ಪಾಲಿಸಿಗಳಲ್ಲಿ ಪಾವತಿಸಬೇಕಾದ ಕಂತಿನ ಮೊತ್ತ 1 ಲಕ್ಷದೊಳಗೆ ಇದ್ದರೆ ವಿಳಂಬ ಶುಲ್ಕದಲ್ಲಿ ( ) ಶೇ. 20 ರಷ್ಟುಆದರೆ ಗರಿಷ್ಠ 2,000 ರು ರಿಯಾಯಿತಿ ಇರಲಿದೆ. ಇದನ್ನೂ ಓದಿ: :ಈ ಪಾಲಿಸಿಯ ಒಂದು ಪ್ರೀಮಿಯಂ ಪಾವತಿಸಿದ್ರೆ ಸಿಗುತ್ತೆ ಮಾಸಿಕ 12 ಸಾವಿರ ರೂ. ಪಿಂಚಣಿ! ಉಳಿದಂತೆ 1 ಲಕ್ಷದಿಂದ 3 ಲಕ್ಷ ದೊಳಗೆ ವಿಮೆ ಮೊತ್ತ ಪಾವತಿ ಬಾಕಿ ಇದ್ದರೆ ಶೇ.25 ಆದರೆ ಗರಿಷ್ಠ 2,500 ರು., 3 ಲಕ್ಷ ಮೀರಿದ ವಿಮೆ ಮೊತ್ತ ಬಾಕಿ ಇದ್ದರೆ ಶೇ.30 ಆದರೆ ಗರಿಷ್ಠ 3,000 ರು. ರಿಯಾಯಿತಿ ಇರಲಿದೆ. ಮೈಕ್ರೋ ವಿಮೆ ಯೋಜನೆಗಳಿಗೆ ವಿಳಂಬ ಶುಲ್ಕ ಮನ್ನಾ ಮಾಡಲಾಗಿದೆ ಎಂದು ಎಲ್‌ಐಸಿ ಹೇಳಿದೆ. ವಿಮೆ ಕಂತು ಪಾವತಿಯ ಅವಧಿಯಲ್ಲಿ ವಿಮೆ ತುಂಬದ ಪಾಲಿಸಿಗಳಿಗೆ ಈ ಅಭಿಯಾನ ಅನ್ವಯಿಸಲಿದೆ. ಬೇರೆ ಬೇರೆ ಸಮಸ್ಯೆಗಳಿಂದ ಸಮಯಕ್ಕೆ ಸರಿಯಾಗಿ ವಿಮೆ ಕಟ್ಟಲು ಸಾಧ್ಯವಾಗದ ವಿಮೆದಾರರಿಗೆ ನೆರವಾಗಲು ಈ ಆರ್ಥಿಕ ವರ್ಷದಲ್ಲಿ ಎರಡನೇ ಬಾರಿಗೆ ಇಂತಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಎಲ್‌ಐಸಿ ತಿಳಿಸಿದೆ. ಈ ಬಗ್ಗೆ ಎಲ್‌ಐಸಿ ಟ್ವಿಟರ್‌ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ. ಇದನ್ನೂ ಓದಿ: : ಮೊದಲ ಬಾರಿ ವಿಮೆ ಖರೀದಿಸುತ್ತಿದ್ದರೆ ಈ ನಿಯಮ ನೆನಪಿಡಿ! ಅರ್ಹವಾದ ಪಾಲಿಸಿಗಳಿಗಾಗಿ ವಿಳಂಬ ಫೀಯಲ್ಲಿ ನೀಡಲಾಗುವ ರಿಯಾಯಿತಿಗಳು ಇಲ್ಲಿವೆ: 1. ರೂ 1,00,000 ವರೆಗೆ — ವಿಳಂಬ ಶುಲ್ಕದಲ್ಲಿ ರಿಯಾಯಿತಿ: 20 ಪ್ರತಿಶತ; ಗರಿಷ್ಠ ರಿಯಾಯಿತಿ: ರೂ 2000 2. ರೂ 100,001 ರಿಂದ ರೂ 3,00,000 ವರೆಗೆ - ಶುಲ್ಕದಲ್ಲಿ ರಿಯಾಯಿತಿ: 25 ಪ್ರತಿಶತ; ಗರಿಷ್ಠ ರಿಯಾಯಿತಿ: ರೂ 2,500 3. ರೂ 3,00,001 ಮತ್ತು ಅದಕ್ಕಿಂತ ಹೆಚ್ಚು - ವಿಳಂಬ ಶುಲ್ಕದಲ್ಲಿ ರಿಯಾಯಿತಿ: 30 ಪ್ರತಿಶತ; ಗರಿಷ್ಠ ರಿಯಾಯಿತಿ: ರೂ 3,000 4. ಮೈಕ್ರೋ ಇನ್ಶೂರೆನ್ಸ್ ಯೋಜನೆಗಳಿಗೆ, ರಿಯಾಯಿತಿಯು ಶೇಕಡಾ 100 ಆಗಿದೆ. ಆದರೆ ಹೈ ರಿಸ್ಕ್‌ ಪ್ಲಾನ್‌ ಮತ್ತು ವಿಮೆ ಅವಧಿಯಲ್ಲಿ ಸಾವು ಸಂಭವಿಸಿದರೆ ನೀಡುವ ಕನಿಷ್ಠ ವಿಮೆ ಮೊತ್ತದ ಯೋಜನೆಗಳನ್ನು ಈ ವ್ಯಾಪ್ತಿಯಿಂದ ಹೊರಗಿವೆ.