: ಮೈಸೂರಿನಲ್ಲಿ ಇಂಧನ ದರದಲ್ಲಿ ಏರಿಕೆ ಮೈಸೂರಿನಲ್ಲಿ ಇಂಧನ ದರದಲ್ಲಿ ಏರಿಕೆಪೆಟ್ರೋಲ್ ದರದಲ್ಲಿ 25 ಪೈಸೆ ಏರಿಕೆ, ರಾಜ್ಯದ ಉಳಿದೆಡೆ ದರ ಸ್ಥಿರರಾಜ್ಯದಲ್ಲಿ ಜನವರಿ 20ರ ಪೆಟ್ರೋಲ್, ಡೀಸೆಲ್ ದರ ಹೀಗಿದೆ ಬೆಂಗಳೂರು (ಜ. 20):ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಗುರುವಾರ ಯಾವುದೇ ಮಹತ್ವದ ಬದಲಾವಣೆಗಳಾಗಿಲ್ಲ. ಮೈಸೂರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಕೊಂಚ ಏರಿಕೆಯಾಗಿದ್ದು, ಬಿಟ್ಟರೆ, ಉಳಿದೆಡೆ ದರ ಬಹುತೇಕ ಸ್ಥಿರವಾಗಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು 40 ಸಾವಿರ ಗಡಿ ದಾಟಿರುವ ನಡುವೆ ಜನರಲ್ಲೂ ಆತಂಕದ ವಾತಾರವಣ ನಿರ್ಮಾಣವಾಗಿದೆ ಇದರ ಪರಿಣಾಮ ಇಂಧನ ಬೇಡಿಕೆಯ ಮೇಲೂ ಆಗಿದೆ. ದೆಹಲಿ ಹಾಗೂ ಜಾರ್ಖಂಡ್ ಹೊರತುಪಡಿಸಿ ದೇಶದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ದೊಡ್ಡ ಮಟ್ಟದ ಬದಲಾವಣೆ ಆಗಿಲ್ಲ. ಇಂಧನ ದರದಲ್ಲಿ ನಿರಂತರವಾಗಿ ಆಗುತ್ತಿದ್ದ ಏರಿಕೆಯಿಂದಾಗಿ ರೋಸಿಹೋಗಿದ್ದ ಜನತೆಗೆ ದೀಪಾವಳಿಯ ಉಡುಗೊರೆ ಎನ್ನುವ ರೀತಿಯಲ್ಲಿ ಕಳೆದ ವರ್ಷದ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ( ) ಕಡಿತ ಮಾಡಿತ್ತು. ಕೋವಿಡ್-19 ಹಾಗೂ ಒಮಿಕ್ರಾನ್ ಆತಂಕದಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಜಾರಿ ಮಾಡಿರುವುದು ಇಂಧನದ ಬೇಡಿಕೆಯ ಮೇಲೂ ಪರಿಣಾಮ ಬೀರಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಜನವರಿ 20 ರಂದು ಇರುವ ಪೆಟ್ರೋಲ್ ಹಾಗೂ ಡೀಸೆಲ್ ದರದ ವಿವರ.." ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ ಎಷ್ಟಿದೆ?- ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ () ಇಂಧನ ದರದಲ್ಲಿ ಯಥಾಸ್ಥಿತಿ ಉಳಿದುಕೊಂಡಿದೆ. ಪೆಟ್ರೋಲ್ ಲೀಟರ್ ಗೆ 100.58 ರೂಪಾಯಿ ಆಗಿದ್ದರೆ, ಡೀಸೆಲ್ 85.01 ರೂಪಾಯಿ ಆಗಿದೆ.- ಹುಬ್ಬಳ್ಳಿಯಲ್ಲಿ () ಪೆಟ್ರೋಲ್ ಬೆಲೆ 100.30ರೂ. ಹಾಗೂ ಡೀಸೆಲ್ ಬೆಲೆ 84.78 ರೂ.ಇದೆ. ಎರಡರಲ್ಲೂ ತಲಾ ಒಂದು ಪೈಸೆ ಕಡಿತವಾಗಿದೆ.- ಕರಾವಳಿ ಮಂಗಳೂರಿನಲ್ಲಿ() ಪೆಟ್ರೋಲ್ ಬೆಲೆ 99.76 ರೂ. ಹಾಗೂ ಡೀಸೆಲ್ ದರ 84.24ರೂ.ಇದೆ.- ಮೈಸೂರಿನಲ್ಲಿ() ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಕೊಂಚ ಏರಿಕೆಯಾಗಿದೆ. ಪೆಟ್ರೋಲ್ ದರದಲ್ಲಿ 25 ಪೈಸೆ ಏರಿಕೆಯಾಗಿದ್ದು 100.33 ರೂಪಾಯಿಗೆ ತಲುಪಿದೆ. ಡೀಸೆಲ್ ದರದಲ್ಲಿ 22 ಪೈಸೆ ಏರಿಕೆಯಾಗಿದ್ದು ಲೀಟರ್ ಗೆ 84.78 ರೂಪಾಯಿಗೆ ತಲುಪಿದೆ.- ಕಲಬುರಗಿಯಲ್ಲಿ() ಪೆಟ್ರೋಲ್ ದರ ಲೀಟರ್ ಗೆ 100.02ರೂ. ಹಾಗೂ ಡೀಸೆಲ್ ಗೆ 85.43ರೂ. ಇದೆ. ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸತತ 3ನೇ ದಿನ ತಲಾ 2 ಪೈಸೆ ಕಡಿಮೆಯಾಗಿದೆ. , ವಾರ್ಷಿಕ ಯೋಜನೆ ಬಿಡುಗಡೆ!ಪೆಟ್ರೋಲ್ ದರ ಪರಿಷ್ಕರಣೆ ಹೇಗೆ?ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರ್ಧರಣೆಯಲ್ಲಿಅನೇಕ ಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಮೊದಲನೆಯದಾಗಿ ಕಚ್ಚಾ ತೈಲದ ಬೆಲೆ, ಎರಡನೆಯದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುತ್ತಿರೋ ತೆರಿಗೆಗಳು. ಇವೆರಡರ ಜೊತೆಗೆ ಡೀಲರ್‌ಗಳ ಕಮೀಷನ್ ಹಾಗೂ ವ್ಯಾಟ್() ಕೂಡ ಬೆಲೆ ಮೇಲೆ ಪರಿಣಾಮ ಬೀರುತ್ತವೆ. ಪೆಟ್ರೋಲ್‌ ಹಾಗೂ ಡೀಸೆಲ್ ದುಬಾರಿಯಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸೋ ತೆರಿಗೆಗಳೇ ಕಾರಣ.ಇಂಧನಗಳ ಮೇಲೆ ವಿಧಿಸೋ ತೆರಿಗೆಗಳಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂಧನದ ಮೇಲಿನ ತೆರಿಗೆ ಕಡಿತಗೊಳಿಸಲು ಹಿಂದೇಟು ಹಾಕೋದು.ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಮಾರುಕಟ್ಟೆಯಲ್ಲಿ ದರಗಳ ಏರಿಳಿತವಾಗುತ್ತಿರೋ ಕಾರಣ ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಪೆಟ್ರೋಲ್ ದರವನ್ನು ಪ್ರತಿ 15 ದಿನಗಳಿಗೊಮ್ಮೆ ಬದಲಾಯಿಸಲಾಗುತ್ತಿತ್ತು. ಅಂದ್ರೆ ಪ್ರತಿ ತಿಂಗಳು 1 ಹಾಗೂ 16ನೇ ತಾರೀಖಿನಂದು ದರ ಬದಲಾವಣೆ ಮಾಡಲಾಗುತ್ತಿತ್ತು. ಆದ್ರೆ 2017ರ ಜೂನ್ 16ರಿಂದ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಅದರಡಿಯಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. 5G : USನ ಹಲವು ನಗರಗಳಿಗೆ ಏರ್ ಇಂಡಿಯಾ ಸೇರಿದಂತೆ ಇತರ ವಿಮಾನಗಳು ರದ್ದು! ಇಲ್ಲಪೆಟ್ರೋಲ್ ಹಾಗೂ ಡೀಸೆಲ್ ಸರಕು ಹಾಗೂ ಸೇವಾ ತೆರಿಗೆ () ವ್ಯಾಪ್ತಿಗೆ ಬಾರದಿದ್ರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ತೆರಿಗೆಗಳನ್ನು ವಿಧಿಸುತ್ತವೆ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದಾಗ ಅದರ ಮೇಲಿನ ಸುಂಕವನ್ನು ಸರ್ಕಾರ ಕಡಿತಗೊಳಿಸುತ್ತಿತ್ತು.ಆದ್ರೆ 2014ರಿಂದ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಬಿಟ್ಟಿದೆ.