2022-23: ಚೊಚ್ಚಲ ಬಜೆಟ್‌ಗೆ ಬೊಮ್ಮಾಯಿ ಸಿದ್ಧತೆ ಆರಂಭ * ಚುನಾವಣೆ ದೃಷ್ಟಿಯ ಜನಪ್ರಿಯ ಬಜೆಟ್‌ ಮಂಡನೆ ಸಾಧ್ಯತೆ* ಮುಂದಿನ ವಾರದಿಂದ ಪೂರ್ವಸಿದ್ಧತಾ ಸಭೆ* 2 ಪೂರಕ ಅಂದಾಜು ಮಂಡಿಸಿರುವ ಸಿಎಂ ಬೆಂಗಳೂರು(ಜ.24):ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ( ) ಅವರು ತಮ್ಮ ಚೊಚ್ಚಲ ಬಜೆಟ್‌() ಮಂಡನೆಗೆ ಸಿದ್ಧತೆ ಆರಂಭಿಸಿದ್ದು ಮುಂದಿನ ವಾರದಿಂದ ವಿವಿಧ ಇಲಾಖೆಗಳ ಇಲಾಖಾವಾರು ಬಜೆಟ್‌ ಪೂರ್ವಸಿದ್ಧತೆ ಸಭೆ ಹಮ್ಮಿಕೊಂಡಿದ್ದಾರೆ. ಬಿ.ಎಸ್‌.ಯಡಿಯೂರಪ್ಪ( ) ಅವರ ಪದತ್ಯಾಗದ ಬಳಿಕ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಸ್ವತಃ ಹಣಕಾಸು() ವಿಷಯಗಳಲ್ಲಿ ಉತ್ತಮ ಜ್ಞಾನವುಳ್ಳವರು. ಇದೇ ಕಾರಣಕ್ಕಾಗಿ ಯಡಿಯೂರಪ್ಪ ಅವರ ಅವಧಿಯಲ್ಲೂ ಜಿಎಸ್‌ಟಿ ಕೌನ್ಸಿಲ್‌ಗೆ( ) ರಾಜ್ಯದ() ಪ್ರತಿನಿಧಿಯನ್ನಾಗಿ ನೇಮಿಸಲಾಗಿತ್ತು. ಇದೀಗ ಅವರಿಗೆ ತಮ್ಮ ಮೊದಲ ಬಜೆಟ್‌ ಮಂಡಿಸುವ ಕಾಲ ಒದಗಿ ಬಂದಿದ್ದು, ಕೊರೋನಾ() ಸಂಕಷ್ಟದಿಂದ ನಲುಗಿರುವ ಜನರಿಗೆ ಬೊಮ್ಮಾಯಿ ಅವರ ಚೊಚ್ಚಲ ಬಜೆಟ್‌ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. :ಗೃಹ ಸಾಲ ಮರುಪಾವತಿ ತಡವಾದ್ರೆ ಈ ತೊಂದ್ರೆ ತಪ್ಪದು! ಹೀಗಾಗಿ ಸರ್ಕಾರಕ್ಕೆ ಆದಾಯದ ಹರಿವು ಕಡಿಮೆಯಾಗಿರುವ ಈ ಸಂದರ್ಭದಲ್ಲಿ ಮುಂದಿನ ಮಾರ್ಚ್‌-ಏಪ್ರಿಲ್‌ನಲ್ಲಿ ನಡೆಯಲಿರುವ ಬಿಬಿಎಂಪಿ ಚುನಾವಣೆ( ), ಸಾರ್ವತ್ರಿಕ ಚುನಾವಣೆಯನ್ನು( ) ದೃಷ್ಟಿಯಲ್ಲಿಟ್ಟುಕೊಂಡು ಜನರನ್ನು ಮೆಚ್ಚಿಸುವ ಬಜೆಟ್‌ ನೀಡಬೇಕಾದ ಒತ್ತಡದಲ್ಲಿ ಬಸವರಾಜ ಬೊಮ್ಮಾಯಿ ಇದ್ದಾರೆ. ಹೀಗಾಗಿ ಬೊಮ್ಮಾಯಿ ಅವರ ಬಜೆಟ್‌ ಕುತೂಹಲ ಮೂಡಿಸಿದೆ. ಮುಂದಿನ ವಾರದಿಂದ ಸಿದ್ಧತೆ: ಕೊರೋನಾದಿಂದಾಗಿ ಸರ್ಕಾರದ ಆರ್ಥಿಕ ಮೂಲಗಳು ಅರ್ಧಕ್ಕೆ ಅರ್ಧ ಕುಸಿದಿವೆ. ಜತೆಗೆ ಕೊರೋನಾ ಮೂರನೇ ಅಲೆ ಕಾಡುತ್ತಿದೆ. ಹೀಗಾಗಿ ಯಾವ್ಯಾವ ಇಲಾಖೆಗಳಲ್ಲಿ ಯಾವ ರೀತಿಯ ಕಾರ್ಯಕ್ರಮ ಕೈಗೊಳ್ಳಬಹುದು, ಹಿಂದಿನ ಬಜೆಟ್‌ನ ಕಾರ್ಯಕ್ರಮಗಳ ಪ್ರಗತಿ ಏನು ಎಂಬ ಬಗ್ಗೆ ಪ್ರತಿ ದಿನ 3-4 ಇಲಾಖೆಗಳ ಅಧಿಕಾರಿಗಳೊಂದಿಗೆ ಶಕ್ತಿ ಭವನದಲ್ಲಿ ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ. ಬಿಬಿಎಂಪಿ ಚುನಾವಣೆ ದೃಷ್ಟಿಯಿಟ್ಟುಕೊಂಡು ಬೆಂಗಳೂರಿಗೆ() ಭರಪೂರ ಕೊಡುಗೆ ನೀಡುವ ನಿರೀಕ್ಷೆ ಇದೆ. ಜತೆಗೆ ಮುಖ್ಯಮಂತ್ರಿಯಾದ ಬಳಿಕ ಘೋಷಿಸಿದ ಮುಖ್ಯಮಂತ್ರಿಗಳ ವಿದ್ಯಾರ್ಥಿವೇತನ() ಯೋಜನೆ, ಮನೆ-ಮನೆಗೂ ಸರ್ಕಾರಿ ಸೇವೆಗಳನ್ನು ತಲುಪಿಸುವಂತಹ ಜನಪ್ರಿಯ ಕಾರ್ಯಕ್ರಮಗಳನ್ನು ಹೆಚ್ಚುವರಿಯಾಗಿ ಘೋಷಿಸುವ ಸಾಧ್ಯತೆ ಇದೆ. ವಿತ್ತೀಯ ಶಿಸ್ತು ಕಾಪಾಡಿಕೊಂಡು ಸಾಲದ ಹೊರೆ ಬೀಳದೆ ಮುಂದಿನ ಚುನಾವಣೆಗೆ ಜನಪ್ರಿಯ ಬಜೆಟ್‌ ಘೋಷಿಸಲು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 2 ಪೂರಕ ಅಂದಾಜು ಮಂಡಿಸಿರುವ ಸಿಎಂ ಎರಡು ಪೂರಕ ಅಂದಾಜು ಮಂಡಿಸಿರುವ ಬೊಮ್ಮಾಯಿಗೆ ಮೊದಲ ಪೂರ್ಣ ಬಜೆಟ್‌ ಮಂಡಿಸುವ ಅವಕಾಶ ಒದಗಿ ಬಂದಿದೆ. ಬಜೆಟ್‌ನಲ್ಲಿ ಆರೋಗ್ಯ ಇಲಾಖೆಗೆ( ) ಹೆಚ್ಚು ಒತ್ತು ನೀಡಲಿದ್ದಾರೆ. ಜತೆಗೆ ಹಣಕಾಸು ನೆರವಿಲ್ಲದೆ ಕುಂಟುತ್ತಿರುವ ನರೇಗಾ, ವಸತಿ ಯೋಜನೆ, ಗಂಗಾ ಕಲ್ಯಾಣದಂತಹ ಯೋಜನೆಗಳಿಗೆ ಹೆಚ್ಚುವರಿ ಹಣ ಬಿಡುಗಡೆ ಮಾಡುವುದು. ಜನಪ್ರಿಯ ಘೋಷಣೆಗಳ ಮೂಲಕ ಜನರ ಗಮನ ಸೆಳೆಯುವುದು ಬೊಮ್ಮಾಯಿ ಅವರ ಉದ್ದೇಶ ಎಂದು ತಿಳಿದು ಬಂದಿದೆ. : ದಿನದಿಂದ ದಿನಕ್ಕೆ ಜೀವನ ನಿರ್ವಹಣಾ ವೆಚ್ಚ ದುಬಾರಿ; ಜಾಗತಿಕ ಹಣದುಬ್ಬರಕ್ಕೆ ಏಳು ಕಾರಣಗಳು! ಉಪ್ಪು, ಹುಳಿ, ಖಾರವಿಲ್ಲದ ಬಜೆಟ್‌: ಶರವಣ ಬೆಂಗಳೂರು: ಕಳೆದ ವರ್ಷ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಂಡಿಸಿದ್ದ 2021-22ನೇ ಸಾಲಿನ ರಾಜ್ಯದ ಬಜೆಟ್‌ ಉಪ್ಪು, ಹುಳಿ ಮತ್ತು ಖಾರವಿಲ್ಲದ ಸಪ್ಪೆ ಬಜೆಟ್‌ ಆಗಿದೆ ಎಂದು ಜೆಡಿಎಸ್‌ ಮುಖಂಡ ಟಿ.ಎ.ಶರವಣ( ) ಪ್ರತಿಕ್ರಿಯಿಸಿದ್ದರು. ಈ ಬಜೆಟ್‌ನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಟ್ಟಿಲ್ಲ. ಹಿಂದಿನ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಅಧಿಕಾರವಿದ್ದಾಗ ಘೋಷಣೆ ಮಾಡಲಾದ ಯೋಜನೆಗಳನ್ನು ಈಗ ಇವರು ಮುಂದುವರಿಸಿದ್ದಾರೆ. ಕೋವಿಡ್‌ ನಂತರ ಮಂಡಿಸಿದ ಈ ಬಜೆಟ್‌ ನಮ್ಮೆಲ್ಲರಿಗೂ ನಿರಾಸೆ ತಂದಿದೆ. ಜನ ಸಂಕಷ್ಟದಲ್ಲಿರುವಾಗ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಹಾಗೂ ದಿನ ನಿತ್ಯ ಬಳಕೆ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುತ್ತಾರೆ ಎಂಬ ನಿರೀಕ್ಷೆಯಿತ್ತು. ಅದು ಹುಸಿಯಾಗಿದೆ ಎಂದು ತಿಳಿಸಿದ್ದರು.