2022: ಕೇಂದ್ರ ಬಜೆಟ್ ಮಂಡನೆ ಫೆಬ್ರವರಿ 1ಕ್ಕೆ ಫಿಕ್ಸ್ ; ಜ. 31ರಿಂದ ಸಂಸತ್ತಿನ ಅಧಿವೇಶನ ಆರಂಭ *ರಾಷ್ಟ್ರಪತಿ ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ ಬಳಿಕ ಅಧಿವೇಶನಕ್ಕೆ ಚಾಲನೆ*ಫೆ.1ರ ಬೆಳಗ್ಗೆ 11ಗಂಟೆಗೆ ವಿತ್ತ ಸಚಿವೆಯಿಂದ ಬಜೆಟ್ ಮಂಡನೆ*ಎರಡು ಹಂತಗಳಲ್ಲಿ ನಡೆಯಲಿರೋ ಬಜೆಟ್ ಅಧಿವೇಶನ ನವದೆಹಲಿ (ಜ.14):ಸಂಸತ್ತಿನ ()ಬಜೆಟ್ ()ಅಧಿವೇಶನ ()ಜನವರಿ 31ರಿಂದ ಪ್ರಾರಂಭವಾಗಲಿದೆ. ರಾಷ್ಟ್ರಪತಿ () ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ ಬಳಿಕ ಅಧಿವೇಶನಕ್ಕೆ()ಚಾಲನೆ ಸಿಗಲಿದೆ. ಫೆಬ್ರವರಿ 1ರ ಬೆಳಗ್ಗೆ 11ಕ್ಕೆ ವಿತ್ತ ಸಚಿವೆ ( ) ನಿರ್ಮಲಾ ಸೀತಾರಾಮನ್ ( ) 2022ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತ ಜನವರಿ 31ರಿಂದ ಫೆಬ್ರವರಿ 11ರವರೆಗೆ ನಡೆಯಲಿದೆ. ಇನ್ನು ಎರಡನೇ ಹಂತ ಮಾರ್ಚ್ 14ರಂದು ಪ್ರಾರಂಭವಾಗಿ ಏಪ್ರಿಲ್ 8ರಂದು ಕೊನೆಗೊಳ್ಳಲಿದೆ. ಇನ್ನು ಪ್ರತಿವರ್ಷದಂತೆ ಈ ವರ್ಷ ಕೂಡ ಆರ್ಥಿಕ ಸಮೀಕ್ಷೆಯನ್ನು ಜನವರಿ 31ರಂದು ಮಂಡಿಸಲಾಗೋದು. ಭಾರತದಲ್ಲಿ ಒಮಿಕ್ರಾನ್() ಹಾಗೂ ಕೋವಿಡ್ -19 (-19)ಪ್ರಕರಣಗಳ ದಿಢೀರ್ ಹೆಚ್ಚಳದ ನಡುವೆಯೂ ಎಲ್ಲರ ಗಮನ ಕೇಂದ್ರ ಸರ್ಕಾರದ ಈ ಸಾಲಿನ ಬಜೆಟ್ () ಮೇಲೆ ಕೇಂದ್ರೀಕೃತವಾಗಿದೆ. ಕೋವಿಡ್ -19 (-19) ಪರಿಹಾರದಿಂದ ಹಿಡಿದು ಆದಾಯ ತೆರಿಗೆ ( ) ಅಡಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ( ) ಮಿತಿ () ಹೆಚ್ಚಳದ ತನಕ ಮಧ್ಯಮ ವರ್ಗದ ಜನರು 2022ನೇ ಕೇಂದ್ರ ಬಜೆಟ್ ನಲ್ಲಿ ( )ವಿತ್ತ ಸಚಿವರು ಅನೇಕ ಕ್ರಮಗಳನ್ನು ಘೋಷಿಸಬಹುದೆಂಬ ನಿರೀಕ್ಷೆ ಹೊಂದಿದ್ದಾರೆ. 'ಭಾರತದಲ್ಲಿ ಆದಾಯ ತೆರಿಗೆ ಕಾಯ್ದೆ( ) ಸೆಕ್ಷನ್ 80ಸಿ ಅಡಿಯಲ್ಲಿ ಬಹುತೇಕ ಜನರು ತೆರಿಗೆ ಉಳಿತಾಯದ ( ) ಪ್ರಯೋಜನ ಪಡೆಯುತ್ತಿದ್ದಾರೆ. ಪ್ರಸ್ತುತವಿರೋ 1.5ಲಕ್ಷ ರೂ. ಕಡಿತದ ಮಿತಿ ( )ತುಂಬಾ ನಿರ್ಬಂಧಗಳಿಗೊಳಪಟ್ಟಿದೆ. ಹೀಗಾಗಿ ಈ ಮಿತಿಯನ್ನು ಇನ್ನಷ್ಟು ವಿಸ್ತರಿಸಲು ಹೆಚ್ಚುವರಿ ಹೂಡಿಕೆ ಅವಕಾಶಗಳನ್ನು ಕಲ್ಪಿಸಬೇಕು. ಸುದೀರ್ಘ ಸಮಯದಿಂದ 1.5ಲಕ್ಷ ರೂ. ಮಿತಿ ಸ್ಥಿರವಾಗಿದ್ದು, ಈ ಮಿತಿಯನ್ನು ಹೆಚ್ಚಿಸಬೇಕಾದ ಅಗತ್ಯವಿದೆ' ಎಂದು ಇನ್ ಕ್ರೆಡ್ () ಕಾರ್ಯನಿರ್ವಹಣಾ ನಿರ್ದೇಶಕ ಹಾಗೂ ಗ್ರೂಪ್ ಸಿಎಫ್ಒ ( ) ವಿವೇಕ್ ಬನ್ಸಾಲ್ ( )ತಿಳಿಸಿದ್ದಾರೆ. 2022: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮರುಬಂಡವಾಳೀಕರಣಕ್ಕೆ ಹಣ ಮೀಸಲಿಡೋ ಸಾಧ್ಯತೆ ಕಡಿಮೆ: ವರದಿ ಕಳೆದ ಸಾಲಿನ ಬಜೆಟ್ ನಲ್ಲಿ() ಕೋವಿಡ್ -19ನಿಂದ ಜರ್ಜರಿತಗೊಂಡಿದ್ದ ಆರ್ಥಿಕತೆಗೆ ಚೈತನ್ಯ ನೀಡುವಂಥ ಉತ್ತೇಜನಕಾರಿ ಪ್ಯಾಕೇಜ್ ಗಳನ್ನು()ಕೇಂದ್ರ ಸರ್ಕಾರ ಘೋಷಿಸಿತ್ತು.ಇದ್ರಿಂದ ಭಾರತದ ಆರ್ಥಿಕತೆ ನಿರೀಕ್ಷೆಗಿಂತ ಬೇಗನೇ ಚೇತರಿಕೆ ಕೂಡ ಕಂಡಿತ್ತು. ಈ ಬಾರಿ ಮತ್ತೆ ಕೊರೋನಾ ಮೂರನೇ ಅಲೆ ದೇಶಾದ್ಯಂತ ಸದ್ದು ಮಾಡುತ್ತಿದೆ. ಇದು ಮತ್ತೆ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಈ ಬಾರಿ ಕೂಡ ಸರ್ಕಾರ ಕಳೆದ ಸಾಲಿನಂತೆ ಉತ್ತೇಜನಕಾರಿ ಪ್ಯಾಕೇಜ್ ಗಳನ್ನು ಘೋಷಿಸಬಹುದೆಂಬ ನಿರೀಕ್ಷೆಯಿದೆ. ಇನ್ನು ಕೊರೋನಾ ಕಾರಣಕ್ಕೆ ಉದ್ಯೋಗ ನಷ್ಟ, ಆದಾಯದಲ್ಲಿ ಇಳಿಕೆ ಸೇರಿದಂತೆ ಹಲವು ಸಮಸ್ಯೆಗಳ ಸುಳಿಗೆ ಸಿಲುಕಿರೋ ಸಾಮಾನ್ಯ ಮನುಷ್ಯ ಅರ್ಥ ಸಚಿವರು ಘೋಷಿಸೋ ಪ್ಯಾಕೇಜ್ ಗಳ ಕಡೆಗೆ ಈ ಬಾರಿ ಹೆಚ್ಚಿನ ನಿರೀಕ್ಷೆಗಳನ್ನು ಹೊತ್ತು ಕುಳಿತಿರೋದು ಮಾತ್ರ ಸುಳ್ಳಲ್ಲ.ವೇತನ () ಪಡೆಯುತ್ತಿರೋ ಉದ್ಯೋಗಿಗಳು ಕೂಡ ಬಜೆಟ್ ನಲ್ಲಿ ಸರ್ಕಾರ ವರ್ಕ್ ಫ್ರಂ ಹೋಮ್ ( ) ಭತ್ಯೆ () ಘೋಷಿಸೋ ಜೊತೆಗೆ ಕೊರೋನಾ ಕಾರಣದಿಂದ ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸಲು ವ್ಯಯಿಸಿದ ವೆಚ್ಚಗಳಿಗೆ () ತೆರಿಗೆ ವಿನಾಯ್ತಿ ( ) ನೀಡಬಹುದೆಂಬ ನಿರೀಕ್ಷೆ ಹೊಂದಿದ್ದಾರೆ.ಸರ್ಕಾರ 50,000 ರೂ. ವರ್ಕ್ ಫ್ರಂ ಹೋಮ್ ಭತ್ಯೆ ಹಾಗೂ ಒಂದು ಲಕ್ಷ ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ( )ಘೋಷಿಸಬಹುದೆಂಬ ನಿರೀಕ್ಷೆ ಹೊಂದಿದ್ದಾರೆ. 2022 :ಕೈಗಾರಿಕಾ ವಲಯಕ್ಕೆ ಸಂಬಂಧಿಸಿ ವಿತ್ತ ಸಚಿವರಿಗೆ 12 ಸಲಹೆ ನೀಡಿದ ಕೋವಿಡ್ ಚಿಕಿತ್ಸೆಗೆ ವ್ಯಯಿಸಿದ ಹಣದ ಮೇಲೆ ತೆರಿಗೆ ಕಡಿತ ನೀಡಬೇಕೆಂಬುದು ತೆರಿಗೆ ತಜ್ಞರ ಅಭಿಪ್ರಾಯವಾಗಿದೆ. ಇನ್ನು ಕೊರೋನಾ ಸೋಂಕಿತರಿಗೆ ನೆರವಿನ ರೂಪದಲ್ಲಿ ನೀಡಿದ ಹಣದ ಮೇಲೂ ತೆರಿಗೆ ವಿನಾಯ್ತಿ ನೀಡಬೇಕು ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ.