-: ಯಾವೆಲ್ಲ ರಾಷ್ಟ್ರಗಳಲ್ಲಿ ಇ-ಪಾಸ್ ಪೋರ್ಟ್ ಜಾರಿಯಲ್ಲಿದೆ? ಭಾರತದಲ್ಲಿ ಯಾವಾಗ ಇದನ್ನು ಪರಿಚಯಿಸಲಾಗುತ್ತೆ? *ಇ-ಪಾಸ್ ಪೋರ್ಟ್ ಕುರಿತು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯಿಂದ ಮಾಹಿತಿ*ಇ-ಪಾಸ್ ಪೋರ್ಟ್ ನಿಂದ ಅಂತಾರಾಷ್ಟ್ರೀಯ ಪ್ರಯಾಣ ಸುಲಭ ಹಾಗೂ ಸರಳ*ಪ್ರಾಯೋಗಿಕವಾಗಿ ಈಗಾಗಲೇ 20,000 ಇ-ಪಾಸ್ ಪೋರ್ಟ್ ಗಳನ್ನು ವಿತರಿಸಿರೋ ಭಾರತ ಸರ್ಕಾರ ನವದೆಹಲಿ (ಜ.7):ಹೊಸ ಪಾಸ್‌ಪೋರ್ಟ್‌ () ಹಾಗೂ ಹಳೆಯದರ ನವೀಕರಣಕ್ಕೆ() ಅರ್ಜಿ ಸಲ್ಲಿಸಿರೋ ಭಾರತದ () ಎಲ್ಲ ನಾಗರಿಕರಿಗೂ () ಕೇಂದ್ರ ಸರ್ಕಾರ ( )ಶೀಘ್ರವಾಗಿ ಇ-ಪಾಸ್ ಪೋರ್ಟ್() ವಿತರಿಸಲಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇ-ಪಾಸ್ ಪೋರ್ಟ್ ಅನ್ನೋದು ಜಾಗತಿಕ ನಿಯಮವಾಗಿ ರೂಪುಗೊಳ್ಳುತ್ತಿದ್ದು, ಇದ್ರಿಂದ ಅಂತಾರಾಷ್ಟ್ರೀಯ ಪ್ರಯಾಣ ( ) ಸುಲಭವಾಗೋ ಜೊತೆ ವಲಸೆ ಕೌಂಟರ್ ಗಳಲ್ಲಿ ( ) ಪ್ರಕ್ರಿಯಗಳು ತ್ವರಿತವಾಗಿ ನಡೆಯಲಿವೆ. 'ಭಾರತವು ನಾಗರಿಕರಿಗೆ ಶೀಘ್ರದಲ್ಲೇ ಮುಂದಿನ ಜನಾಂಗದ ಇ-ಪಾಸ್ ಪೋರ್ಟ್ ಪರಿಚಯಿಸಲಿದೆ' ಎಂದು ವಿದೇಶಾಂಗ ಸಚಿವಾಲಯದ () ಪಾಸ್ ಪೋರ್ಟ್ ಹಾಗೂ ವೀಸಾ () ವಿಭಾಗದ ಕಾರ್ಯದರ್ಶಿ ಸಂಜಯ್ ಭಟ್ಟಾಚಾರ್ಯ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಸುರಕ್ಷಿತ ಬಯೋಮೆಟ್ರಿಕ್ ದಾಖಲೆ ಆಧಾರದಲ್ಲಿ ಇ-ಪಾಸ್ ಪೋರ್ಟ್ ವಿತರಿಸಲಾಗೋದು, ಇದ್ರಿಂದ ಜಾಗತಿಕ ವಲಸೆ ಕೌಂಟರ್ ಗಳಲ್ಲಿ ಪ್ರಕ್ರಿಯೆಗಳು ಶೀಘ್ರ ಪೂರ್ಣಗೊಳ್ಳಲಿವೆ. ಭಾರತ ಹಾಗೂ ವಿದೇಶಗಳಲ್ಲಿ 2019ನೇ ಸಾಲಿನಲ್ಲಿ ಪಾಸ್ ಪೋರ್ಟ್ ವಿತರಣಾ ಪ್ರಾಧಿಕಾರಗಳು () 12.8 ದಶಲಕ್ಷಕ್ಕಿಂತಲೂ ಅಧಿಕ ಪಾಸ್ ಪೋರ್ಟ್ ಗಳನ್ನು ವಿತರಿಸಿದ್ದು, ಈ ಮೂಲಕ ಜಾಗತಿಕವಾಗಿ ಚೀನಾ ಹಾಗೂ ಅಮೆರಿಕದ ಬಳಿಕ ಅತ್ಯಧಿಕ ಪ್ರಮಾಣದಲ್ಲಿ ಪಾಸ್ ಪೋರ್ಟ್ ವಿತರಿಸಿದ ರಾಷ್ಟ್ರವಾಗಿದೆ. : ರತನ್ ಟಾಟಾ ಜೀವನಚರಿತ್ರೆ ದಾಖಲೆ ಮೊತ್ತಕ್ಕೆ ಮಾರಾಟ! ಇ-ಪಾಸ್ ಪೋರ್ಟ್ ಹೇಗಿರಲಿದೆ? ವಿಶೇಷತೆಯೇನು?ಪ್ರಸ್ತುತ ಭಾರತೀಯ ನಾಗರಿಕರಿಗೆ ವಿತರಿಸುತ್ತಿರೋ ಪಾಸ್ ಪೋರ್ಟ್ ಪುಸ್ತಕ ()ರೂಪದಲ್ಲಿದೆ. ಇದನ್ನು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ () ನಿಗದಿಪಡಿಸಿರೋ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಇ-ಪಾಸ್ ಪೋರ್ಟ್ ಅನ್ನು ಕೂಡ ಎರಡು ವಿಧದಲ್ಲಿ ವಿತರಿಸಲಾಗೋದು. ಒಂದು ಸಾಂಪ್ರದಾಯಿಕ ಪುಸ್ತಕ ರೂಪದಲ್ಲಿರೋ ಪಾಸ್ ಪೋರ್ಟ್ ಗೆ ಎಲೆಕ್ಟ್ರಾನಿಕ್ ಚಿಪ್ ( ) ಅಳವಡಿಸೋದು. ಇದು ಪಾಸ್ ಪೋರ್ಟ್ ಪುಟ 2ರಲ್ಲಿರೋ ವೈಯಕ್ತಿಕ ಮಾಹಿತಿಗಳು ಹಾಗೂ ಡಿಜಿಟಲ್ ಸುರಕ್ಷೆ ವೈಶಿಷ್ಟ್ಯಗಳನ್ನು ಸಂಗ್ರಹಿಸಿರುತ್ತದೆ. ಈ ಡಿಜಿಟಲ್ ಸುರಕ್ಷತಾ ಗುಣಲಕ್ಷಣಗಳು 'ಡಿಜಿಟಲ್ ಸಹಿ' ಆಗಿದ್ದು, ಪ್ರತಿ ರಾಷ್ಟ್ರಕ್ಕೂ ವಿಶಿಷ್ಟವಾಗಿರುತ್ತವೆ. ಎಲೆಕ್ಟ್ರಾನಿಕ್ ಮೈಕ್ರೋ ಪ್ರೊಸೇಸರ್ ಚಿಪ್ ಅಳವಡಿಸಿರೋ 20,000 ಇ-ಪಾಸ್ ಪೋರ್ಟ್ ಗಳನ್ನು ಭಾರತ ಪ್ರಾಯೋಗಿಕವಾಗಿ ಸರ್ಕಾರಿ ಹಾಗೂ ರಾಜತಾಂತ್ರಿಕ ಅಧಿಕಾರಿಗಳಿಗೆ ಈಗಾಗಲೇ ವಿತರಿಸಿದೆ. ಇನ್ನೊಂದು ಸಂಪೂರ್ಣ ಡಿಜಿಟಲ್ ಪಾಸ್ ಪೋರ್ಟ್ ಆಗಿದ್ದು, ಅದನ್ನು ಮೊಬೈಲ್ ಫೋನ್ ನಲ್ಲೇ ಸಂರಕ್ಷಿಸಿಟ್ಟುಕೊಳ್ಳಬಹುದು. ಬೇರೆ ರಾಷ್ಟ್ರಗಳು ಇ-ಪಾಸ್ ಪೋರ್ಟ್ ಬಳಸುತ್ತಿವೆಯಾ?ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ()ನೀಡಿರೋ ಮಾಹಿತಿ ಪ್ರಕಾರ ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಇ-ಪಾಸ್ ಪೋರ್ಟ್ ಬಳಕೆಯಲ್ಲಿದೆ. ಜಗತ್ತಿನಾದ್ಯಂತ 490 ಮಿಲಿಯನ್ ಗೂ ಅಧಿಕ ಇ-ಪಾಸ್ ಪೋರ್ಟ್ ಗಳು ಬಳಕೆಯಲ್ಲಿವೆ. ಭಾರತದ ನೆರೆಯ ರಾಷ್ಟ್ರ ನೇಪಾಳ 2021ರ ನವೆಂಬರ್ ನಿಂದ ತನ್ನ ನಾಗರಿಕರಿಗೆ ಇ-ಪಾಸ್ ಪೋರ್ಟ್ ವಿತರಿಸಲು ಪ್ರಾರಂಭಿಸಿದೆ. ಇನ್ನು ಬಾಂಗ್ಲಾದೇಶ ಇ-ಪಾಸ್ ಪೋರ್ಟ್ ವಿತರಣೆ ಉದ್ದೇಶದಿಂದ ಹಳೆಯ ಮಾದರಿಯ ಪಾಸ್ ಪೋರ್ಟ್ ವಿತರಣೆಯನ್ನು ಸ್ಥಗಿತಗೊಳಿಸಿದೆ. ಬೆಂಗಳೂರಿನ ಡೆಲಿವರಿ ಸ್ಟಾರ್ಟ್ಅಪ್‌ನ ಶೇ.25.8 ಪಾಲು ಖರೀದಿಸಿದ ರಿಲಯನ್ಸ್! ಇ-ಪಾಸ್ ಪೋರ್ಟ್ ಪ್ರಯೋಜನಗಳು-ಇ-ಪಾಸ್ ಪೋರ್ಟ್ ಸಾಂಪ್ರದಾಯಿಕ ಮಾದರಿಗಿಂತ ಹೆಚ್ಚು ಸುರಕ್ಷಿತವಾಗಿರುತ್ತದೆ.-ಅಧಿಕಾರಿಗಳ ಪ್ರಕಾರ ಇನ್ನು ಮುಂದೆ ನಕಲಿ ಪಾಸ್ ಪೋರ್ಟ್ ಸಿದ್ಧಪಡಿಸೋದು ಕಷ್ಟವಾಗಲಿದೆ.-ಇ-ಪಾಸ್ ಪೋರ್ಟ್ ನಿಂದ ವಲಸೆ ಕೌಂಟರ್ ನಲ್ಲಿ ಪ್ರಕ್ರಿಯೆಗಳು ಬೇಗ ಮುಗಿಯುತ್ತವೆ. ಹೀಗಾಗಿ ಜಾಸ್ತಿ ಹೊತ್ತು ಕಾಯಬೇಕಾದ ಅಗತ್ಯವಿಲ್ಲ.- ಮಾನದಂಡಗಳ ಆಧಾರದಲ್ಲಿ ಇ-ಪಾಸ್ ಪೋರ್ಟ್ ಇರಲಿದೆ.-ಪಾಸ್ ಪೋರ್ಟ್ ಸುರಕ್ಷತೆ ಹೆಚ್ಚಿದ ಕಾರಣ ವೀಸಾದ ಅಗತ್ಯವಿಲ್ಲದೆ ಭಾರತದ ನಾಗರಿಕರಿಗೆ ಪ್ರವೇಶ ನೀಡೋ ರಾಷ್ಟ್ರಗಳ ಸಂಖ್ಯೆ ಹೆಚ್ಚಲಿದೆ. ಪ್ರಸ್ತುತ ಭಾರತೀಯರು ಮೊದಲೇ ವೀಸಾ ಪಡೆಯದೆ 58 ರಾಷ್ಟ್ರಗಳಿಗೆ ಪ್ರವೇಶಿಸಬಹುದಾಗಿದೆ. ಈ ರಾಷ್ಟ್ರಗಳಿಗೆ ತೆರಳಿದ ಬಳಿಕ ವೀಸಾ ಪಡೆಯೋ ಅಥವಾ ಇತರ ವಿಧಾನಗಳನ್ನುಅನುಸರಿಸಲಾಗುತ್ತಿದೆ.-ಪಾಸ್ ಪೋರ್ಟ್ ವಿತರಣೆಗೆ ತಗಲುವ ಒಟ್ಟು ಸಮಯ ಕೂಡ ತಗ್ಗಲಿದೆ. ಪ್ರಸ್ತುತ ಪೊಲೀಸ್ ಪರಿಶೀಲನೆಗೆ ಸಂಬಂಧಿಸಿ ಆಗುತ್ತಿರೋ ವಿಳಂಬ ಇ-ಪಾಸ್ ಪೋರ್ಟ್ ವಿತರಣೆಯಲ್ಲಿ ತಗ್ಗಲಿದೆ.