: ಇಳಿದ ಚಿನ್ನದರ ದರ, ಗ್ರಾಹಕರಿಗೆ ಸಂತಸ! * ಚಿನ್ನ, ಬೆಳ್ಳಿ ದರ ಹೇಗಿದೆ? * ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ * ಹೀಗಿದೆ ಜನವರಿ 03, 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್ ಬೆಂಗಳೂರು(ಜ.03): ಹೊಸ ವರ್ಷ ಆರಂಭವಾಗಿದೆ, ಜನರೆಲ್ಲರೂ ಪರಸ್ಪರ ಶುಭಾಶಯ ಕೋರಿದ್ದಾರೆ. ನೂತನ ವರ್ಷ ಉತ್ತಮ ಆರೋಗ್ಯದಿಂದ ಕೂಡಿರಲಿ, ಸುಖಮಯವಾಗಿರಲೆಂದು ಜನರು ಬಯಸಿದ್ದಾರೆ. ಹೀಗಿರುವಾಗ ಅತ್ತ ಹೊಸ ವರ್ಷದ ಹೊಸ್ತಿಲಲ್ಲಿ ನಡೆಯಲಿರುವ ಶುಭ ಕಾರ್ಯಗಳ ಸಂಖ್ಯೆಯೂ ಹೆಚ್ಚಿವೆ. ಈ ನಿಟ್ಟಿನಲ್ಲಿ ಚಿನ್ನ, ಬೆಳ್ಳಿ, ಬಟ್ಟೆ ಖರೀದಿ ಎಗ್ಗಿಲ್ಲದೆ ಸಾಗುತ್ತಿದೆ. ಹೀಗಿದ್ದರೂ ಜನ ಸಾಮಾನ್ಯರಿಗೆ ಈ ಸಂಭ್ರಮದ ವಾತಾವರಣದ ಮಧ್ಯೆ ಚಿನ್ನದ ದರ ಎಷ್ಟು ಎಂಬ ಪ್ರಶ್ನೆ ಕಾಡುವುದು ಸಹಜ. ಒಂದೆಡೆ ಸಾಲು ಸಾಲು ಕಾರ್ಯಕ್ರಮಗಳಾದರೆ, ಮತ್ತೊಂದೆಡೆ ಕೊರೋನಾ ಹೊಸ ತಳಿ ಒಮಿಕ್ರಾನ್ ಆತಂಕ. ಇವೆಲ್ಲದರ ನಡುವೆ ಚಿನ್ನದ ದರವೂ ಹಾವೇಣಿ ಆಟ ಮುಂದುವರೆಸಿದೆ. " ಒಮಿಕ್ರಾನ್ ಭೀತಿ ಆರಂಭವಾದಾಗಿನಿಂದಲೂ ಚಿನ್ನ, ಬೆಳ್ಳಿ ದರ ಹಾವೇಣಿ ಆಟ ಆರಂಭಿಸಿದೆ. ಒಂದು ದಿನ ಕುಸಿಯುವ ಚಿನ್ನದ ದರ ಮರುದಿನವೇ ಏರಿಕೆಯ ಹಾದಿ ಹಿಡಿರುವುದು ಗ್ರಾಹಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಿರುವಾಗ ಚಿನ್ನ ಖರೀದಿಸಲು ಇದು ಉತ್ತಮ ಸಮಯವಾ? ಅಥವಾ ಇನ್ನೂ ಕೊಂಚ ಕಾಯುವುದು ಸರಿನಾ? ಎಂಬ ಪ್ರಶ್ನೆಯೂ ಈ ಗೊಂದಲಕ್ಕೆ ಕಾರಣವಾಗಿದೆ. ಹೀಗಿದ್ದರೂ ಇಂದು ಚಿನ್ನ, ಬೆಳ್ಳಿ ದರದಲ್ಲಿ ಏರಿಕೆಯಾಗದಿರುವುದು ಗ್ರಾಹಕರಿಗೆ ಕೊಂಚ ಸಮಾಧಾನ ಕೊಟ್ಟಿದೆ. ಹೌದು ಇಂದು ಮುಂಬೈ ಹೊರತುಪಡಿಸಿ ಉಳಿದೆಡೆ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಿದ್ದರೂ ಒಮಿಕ್ರಾನ್ ಆತಂಕದ ಮಧ್ಯೆ ಚಿನ್ನದ ದರ ಕುಸಿಯಲಿದೆ ಎಂಬ ಮಾತುಗಳು ಆರ್ಥಿಕ ತಜ್ಞರದ್ದಾಗಿದೆ. ಬೆಂಗಳೂರಿನಲ್ಲಿ( ) ದರ ಎಷ್ಟಿದೆ? ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಚಿನ್ನದ ದರ ಕೊಂಚ ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,250 ರೂಪಾಯಿ ಆದರೆ, 24 ಕ್ಯಾರಟ್ 10 ಗ್ರಾಂ ಚಿನ್ನದ ದರ 49,360ರೂ.ಇದೆ. ಇನ್ನು ಅತ್ತ ಒಂದು ಕೆ. ಜಿ ಬೆಳ್ಳಿ ದರ 62,400 ರೂಪಾಯಿ ಆಗಿದೆ. ದೆಹಲಿಯಲ್ಲಿ () ಹೇಗಿದೆ? ಇನ್ನು ಮರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಚಿನ್ನ ಏರಿಕೆಯಾಗಿದ್ದು, 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 47,620 ರೂ.ಆಗಿದ್ದು 24 ಕ್ಯಾರಟ್ 10 ಗ್ರಾಂ ಚಿನ್ನದ ದರ 51,950 ರೂ. ಆಗಿದೆ. ಅತ್ತ ಒಂದು ಕೆ.ಜಿ.ಬೆಳ್ಳಿ ದರ 62,400 ರೂ. ಆಗಿದೆ. ಮುಂಬೈನಲ್ಲಿ() ಎಷ್ಟಿದೆ ದರ? ಮುಂಬೈನಲ್ಲಿ ಚಿನ್ನದ ದರ ಕೊಂಚ ಏರಿಕೆಯಾಗಿದೆ. ಹೌದು 22 ಕ್ಯಾರಟ್ 10 ಗ್ರಾಂ ಚಿನ್ನದ ದರ, 47,170 ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 49,170ರೂ ಆಗಿದೆ, ಆದರೆ ಬೆಳ್ಳಿ ದರದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಒಂದು ಕೆಜಿ ಬೆಳ್ಳಿ ದರ62,400 ರೂಪಾಯಿ ಇದೆ. ಚೆನ್ನೈಯಲ್ಲಿ() ದರ ಹೀಗಿದೆ ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು 45,500ರೂ. ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 45,500ರೂಪಾಯಿಯೇ ಮುಂದುವರೆದಿದೆ. ಒಂದು ಕೆ.ಜಿ. ಬೆಳ್ಳಿ ದರದಲ್ಲಿ ಕೊಂಚ ಏರಿಕೆಯಾಗಿ ಒಂದು ಕೆಜಿಗೆ 66,200 ರೂಪಾಯಿ ಆಗಿದೆ.