ಪ್ರತಿ ಜಿಲ್ಲೆಯಲ್ಲಿ ಗೋಶಾಲೆ, ಗೋಮೂತ್ರದಿಂದ ಸೋಪು, ಶಾಂಪು ತಯಾರಿ: ಸಚಿವ ಚವ್ಹಾಣ್‌! *ಗೋ ಆಧಾರಿತ ಕೃಷಿ, ಗೋ ಉತ್ಪನ್ನಗಳ ತಯಾರಿಗೆ ಆದ್ಯತೆ*ಪ್ರತಿ ಜಿಲ್ಲೆಯಲ್ಲಿ 50-100 ಎಕರೆಯ ಗೋಶಾಲೆ ನಿರ್ಮಾಣ*ಪಶು ಸಂಗೋಪನೆ ಇಲಾಖೆಯಲ್ಲಿನ 458 ಹುದ್ದೆಗಳಿಗೆ ನೇಮಕಾತಿ ಬೆಂಗಳೂರು (ಜ. 1):ರಾಜ್ಯದಲ್ಲಿ ಪಶು ಆರೈಕೆ ಹಾಗೂ ಗೋ ಸಂರಕ್ಷಣೆಗಾಗಿ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದ್ದು, ರಾಜ್ಯದ ಗೋಶಾಲೆಗಳಲ್ಲಿ ಗೋಮೂತ್ರದಿಂದ ಸೋಪು (), ಶಾಂಪು ತಯಾರಿಕೆ ಹಾಗೂ ಸಗಣಿಯಿಂದ ಆಯಿಲ್‌ ಪೇಂಟ್‌ ತಯಾರಿ ಸೇರಿದಂತೆ ಗೋ ಆಧಾರಿತ ಕೃಷಿ ಮತ್ತು ಗೋ ಉತ್ಪನ್ನಗಳ ( ) ತಯಾರಿಕೆಗೆ ಚಿಂತನೆ ನಡೆಸಿದ್ದೇವೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ( ) ಹೇಳಿದ್ದಾರೆ. ರಾಜ್ಯದಲ್ಲಿ ಗೋಶಾಲೆಗಳ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಪ್ರತಿ ಜಿಲ್ಲೆಯಲ್ಲಿ 50ರಿಂದ 100 ಎಕರೆ ವಿಸ್ತೀರ್ಣದ ಗೋಶಾಲೆ ನಿರ್ಮಾಣಕ್ಕಾಗಿ 50 ಲಕ್ಷ ರು. ಮಂಜೂರು ಮಾಡಲಾಗಿದೆ. ಅದರಲ್ಲಿ ತಲಾ 26 ಲಕ್ಷ ಬಿಡುಗಡೆ ಮಾಡಲಾಗಿದೆ. ಪ್ರತಿ ಗೋಶಾಲೆಗೆ 2 ಕೋಟಿ ರು. ಅನುದಾನ ನೀಡುವ ಗುರಿ ಹೊಂದಿದ್ದೇವೆ. ಕೇವಲ ಗೋಶಾಲೆ ನಿರ್ಮಿಸುವುದು ಮಾತ್ರವಲ್ಲದೆ ಅವುಗಳನ್ನು ಸ್ವಾವಲಂಬಿ ಮಾಡಲು ಗುಜರಾತ್‌, ಮಹಾರಾಷ್ಟ್ರ, ಉತ್ತರ ಪ್ರದೇಶ ಮಾದರಿ ಅನುಸರಿಸಲಾಗುವುದು ಎಂದರು. ಗುಜರಾತ್‌, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ರಾಜ್ಯಗಳ ಪ್ರವಾಸ ಮಾಡಿ ವಾಪಸಾಗಿರುವ ಅವರು ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು. ಗೋಶಾಲೆಯಲ್ಲಿ ಗೋವುಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು, ಜೊತೆಗೆ ಸಗಣಿ, ಗೋಮೂತ್ರದಿಂದ ಸುಮಾರು ನೂರಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಿ ಗೋಶಾಲೆಗಳನ್ನು ಸ್ವಾವಲಂಬಿಯಾಗಿಸಿ ಸರ್ಕಾರದ ಅನುದಾನ ಇಲ್ಲದೆ ನಡೆಯುವಂತೆ ಮೂರು ರಾಜ್ಯಗಳಲ್ಲಿ ಮಾಡಲಾಗಿದೆ ಎಂದು ಹೇಳಿದರು. ರಾಜ್ಯದ ಕೆಲವು ಗೋಶಾಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಇದೇ ರೀತಿಯಲ್ಲಿ ರಾಜ್ಯದಲ್ಲೂ ಗೋಮೂತ್ರ ಹಾಗೂ ಸಗಣಿಯಿಂದ ಉತ್ಪನ್ನ ತಯಾರಿ, ಗೋಬರ್‌ ಗ್ಯಾಸ್‌ ಉತ್ಪಾದನೆ ಸೇರಿದಂತೆ ಹಲವು ಚಟುವಟಿಕೆ ಮೂಲಕ ಗೋಶಾಲೆಗಳನ್ನು ಸ್ವಾವಲಂಬಿ ಮಾಡಲು ಚಿಂತಿಸಲಾಗಿದೆ. ಇದಕ್ಕಾಗಿ ರಾಜ್ಯದ ಕೆಲವು ಗೋಶಾಲೆಗಳನ್ನು ಪ್ರಾಯೋಗಿಕವಾಗಿ ಆಯ್ಕೆಮಾಡಿ ಗೋ ಆಧಾರಿತ ಕೃಷಿ, ಗೊಬ್ಬರ ತಯಾರಿಕೆ ಮತ್ತು ಕೇಂದ್ರದ ಗೋಬರ್‌ ಧನ್‌ ಯೋಜನೆಯಡಿ ಬಯೋಗ್ಯಾಸ್‌ ತಯಾರಿಕೆ ಕುರಿತು ಮಾದರಿಗಳನ್ನು ಸೃಷ್ಟಿಸಿ ಪರೀಕ್ಷೆ ನಡೆಸಲಾಗುವುದು. ಸಾಧಕ-ಬಾಧಕಗಳ್ನು ಗಮನಿಸಿ ಉಳಿದ ಗೋಶಾಲೆಗಳಿಗೆ ವಿಸ್ತರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದರು. 458 ಖಾಲಿ ಹುದ್ದೆಗಳ ನೇಮಕಕ್ಕೆ ಸಿಎಂ ಸಮ್ಮತಿ ಪಶು ಸಂಗೋಪನೆ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ನೇಮಕಕ್ಕೆ ಸತತ ಪ್ರಯತ್ನ ನಡೆಸಿದ ಫಲವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( ) ಅವರು 458 ಖಾಲಿ ಹುದ್ದೆಗಳ ನೇಮಕಕ್ಕೆ ಅನುಮತಿ ನೀಡಿದ್ದಾರೆ ಎಂದು ಪ್ರಭು ಚವ್ಹಾಣ್‌ ತಿಳಿಸಿದರು. ಇಲಾಖೆಯಲ್ಲಿ 1,083 ಹುದ್ದೆಗಳು ಖಾಲಿ ಇವೆ. ಪ್ರಸ್ತುತ 400 ಹುದ್ದೆ ಭರ್ತಿ ಹಾಗೂ 58 ಬ್ಯಾಕ್‌ಲಾಗ್‌ ಹುದ್ದೆ ಭರ್ತಿಗೆ ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ. 468 ಹುದ್ದೆಗಳ ಭರ್ತಿಗೆ ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಲಿದ್ದು, ಇಲಾಖೆ ಉಸಿರಾಡುವಂತಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: 1) : ರಾಜ್ಯದಲ್ಲಿ ಡೀಮ್ಡ್ ಅರಣ್ಯ ಮರು ಸಮೀಕ್ಷೆ‌ ನಡೆಸಲು ಡೀಸಿಗಳಿಗೆ ಸಿಎಂ ಸೂಚನೆ! 2) : ದೇವಾಲಯಗಳನ್ನು ಸಂಘ ಪರಿವಾರದ ಕಾರ‍್ಯಕರ್ತರಿಗೆ ಹಂಚಲು ಹೊರಟಿದೆ: ಡಿಕೆಶಿ! 3) 19 : ಆರು ತಿಂಗಳ ನಂತರ ಗರಿಷ್ಠ ಕೇಸ್: 656 ಮಂದಿಗೆ ಸೋಂಕು, ಐದು ಸಾವು!