: 'ಕಾಣೆಯಾದವನು' ಜಾಹಿರಾತು ವೈರಲ್.. ಇದರಲ್ಲಿ ಅಂಥದ್ದೇನಿದೆ? ಕೋಲ್ಕತ್ತಾದ ಶೇರ್ವಾನಿ ಶಾಪ್ ನೀಡಿದ ಜಾಹಿರಾತು ತನ್ನ ಕ್ರಿಯಾಶೀಲತೆಗಾಗಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು, ಇದು ನೆಕ್ಸ್ಟ್ ಲೆವೆಲ್ ಅಡ್ವರ್ಟೈಸ್‌ಮೆಂಟ್ ಎನ್ನುತ್ತಿದ್ದಾರೆ. ಜಾಹಿರಾತು()ಗಳೆಲ್ಲವೂ ಸೃಜನಶೀಲತೆಯ ಕೂಸುಗಳೇ. ಆದರೂ ಕೆಲವು ಜಾಹಿರಾತುಗಳು ಪೆದ್ದುತನಕ್ಕಾಗಿ, ಮತ್ತೆ ಕೆಲವು ಹೊಸತನಕ್ಕಾಗಿ, ಇನ್ನು ಕೆಲವು ಹಾಸ್ಯಪ್ರಜ್ಞೆಗಾಗಿ, ಮತ್ತೆ ಕೆಲವು ವಿವಾದಗಳನ್ನೆಳೆದುಕೊಂಡು ಆಗಾಗ ಸುದ್ದಿಯಾಗುತ್ತಿರುತ್ತವೆ. ಬಹಳ ವಿಶಿಷ್ಠವಾದ ಜಾಹಿರಾತುಗಳನ್ನು ಜನರು ಗಮನಿಸುತ್ತಾ ಬೆನ್ನು ತಟ್ಟುತ್ತಿರುತ್ತಾರೆ. ಅಂತೆಯೇ ಈ ಬಾರಿ ಜಾಹಿರಾತೊಂದು ತನ್ನ ಅಪರೂಪದ ಸೃಜನಶೀಲತೆಗಾಗಿ ಸುದ್ದಿ ಮಾಡಿದೆ. ಈ ಜಾಹಿರಾತನ್ನು ನೋಡಿದ ನೆಟ್ಟಿಗರು() ಇದು ನೆಕ್ಸ್ಟ್ ಲೆವೆಲ್ ಅಡ್ವರ್ಟೈಸ್‌ಮೆಂಟ್ ಎಂದು ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ. ರೆಡ್ಡಿಟ್ ಬಳಕೆದಾರರೊಬ್ಬರು ಈ ಜಾಹಿರಾತನ್ನು ಶೇರ್ ಮಾಡಿಕೊಂಡಿದ್ದು, ಇದು ಟೆಲಿಗ್ರಾಫ್‌ನಲ್ಲಿ 26 ಡಿಸೆಂಬರ್‌ರಂದು ಪ್ರಕಟವಾಗಿದೆ. ಇದು ಸೋಷ್ಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದ್ದಂತೆಯೇ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯುವಜನತೆ ಈ ಜಾಹಿರಾತನ್ನು ಇಷ್ಟ ಪಟ್ಟಿದ್ದಾರೆ. ಜಾಹಿರಾತಲ್ಲೇನಿದೆ?ಯುವಕನೊಬ್ಬ ಕಳೆದು ಹೋಗಿರುವ 'ಮಿಸ್ಸಿಂಗ್'() ಪೋಸ್ಟರ್ ರೀತಿಯಲ್ಲಿ ಜಾಹಿರಾತಿದೆ. ನೋಡಿದ ಕೂಡಲೇ ಇಷ್ಟು ಚೆಂದದ ಹುಡುಗ ಕಳೆದು ಹೋಗಿದ್ದಾನಾ ಎಂದು ಎಂಥವರ ಗಮನವನ್ನೂ ಸೆಳೆಯುವುದು ಜಾಹಿರಾತು. ನಂತರ ತಿಳಿದು ಬರುವುದೇನೆಂದರೆ ಇದು ಕೋಲ್ಕತ್ತಾದ ಸುಲ್ತಾನ್ ಶೇರ್ವಾನಿ ಅಂಗಡಿಯ ಜಾಹಿರಾತೆಂಬುದು. ಹುಡುಗನು ಫೋಟೋದಲ್ಲಿಯೂ ಶೇರ್ವಾನಿಯನ್ನೇ ಹಾಕಿದ್ದಾನೆ. ದೇಶದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ ಹೀಗೇಕೆ ಬರ್ತಡೇ ಆಚರಿಸಿದ್ರು...?ಪತ್ರಿಕೆಯ ಹೆಚ್ಚು ಓದುಗರನ್ನು ಸೆಳೆವ ಸ್ಪೋರ್ಟ್ಸ್ ಸೆಕ್ಷನ್‌ನಲ್ಲಿ ಈ ಜಾಹಿರಾತು ಪ್ರಕಟವಾಗಿದ್ದು, ಮೇಲ್ನೋಟಕ್ಕೆ 24 ವರ್ಷದ ಮಜ್ನು ಕಳೆದು ಹೋಗಿ, ಆತನ ತಂದೆ ಮಿಸ್ಸಿಂಗ್ ಪೋಸ್ಟರ್ ಹಾಕಿಸಿದಂತಿದೆ. 'ಮಜ್ನೂ ಎಲ್ಲಿದ್ದರೂ ದಯವಿಟ್ಟು ಮನೆಗೆ ಬಾ. ಎಲ್ಲರೂ ಚಿಂತಿತರಾಗಿದ್ದಾರೆ. ನಿನ್ನ ಎರಡೂ ಬೇಡಿಕೆಗಳಿಗೆ() ನಮ್ಮ ಒಪ್ಪಿಗೆ ಇದೆ. ನೀನು ಹೇಳಿದಂತೆ ಲೈಲಾಳ ಜೊತೆಯೇ ನಿನ್ನ ವಿವಾಹ ನೆರವೇರಿಸುತ್ತೇವೆ ಹಾಗೂ ದ ಕಿಂಗ್ ಆಫ್ ಶೇರ್ವಾನಿ()ಯಾದ ಸುಲ್ತಾನ್ ಶಾಪ್‌ನಿಂದಲೇ ನಿನ್ನ ವೆಡ್ಡಿಂಗ್ ಶೇರ್ವಾನಿ ಖರೀದಿಸುತ್ತೇವೆ' ಎಂದು ಜಾಹಿರಾತಿನಲ್ಲಿದೆ. ಓದುಗರು ಇಲ್ಲಿಯವರೆಗೆ ಓದುವವರೆಗೂ ಇದು ಶೇರ್ವಾನಿಯ ಜಾಹಿರಾತೆಂಬುದು ತಿಳಿಯುವುದೇ ಇಲ್ಲವೆಂಬುದು ಇದರ ಹೆಗ್ಗಳಿಕೆ. ಅದರ ಜೊತೆಗೆ ಚೆಂದದ ಹುಡುಗ ಎರಡು ಬೇಡಿಕೆಗಳನ್ನಿಟ್ಟು ಮನೆ ಬಿಟ್ಟು ಹೋಗಿರುವ ವಿಷಯ ಕೂಡಾ ಎಂಥವರಿಗೂ ಆಸಕ್ತಿ ಕೆರಳಿಸುತ್ತದೆ.ಹಿಮದಲ್ಲಿ ಆನೆ ಮರಿಯ ಆಟ... ಮನಮೋಹಕ ದೃಶ್ಯ ವೈರಲ್‌ ಇಷ್ಟೇ ಅಲ್ಲ, ಜಾಹಿರಾತಿನಲ್ಲಿ ಸುಲ್ತಾನ್ ಶಾಪ್ ಬಗ್ಗೆ ಇನ್ನೂ ವಿವರ ಮಾಹಿತಿಯಿದೆ. 'ನಾವು ಕೋಲ್ಕತ್ತಾದ ನ್ಯೂ ಮಾರ್ಕೆಟ್‌ನಲ್ಲಿರುವ ಅವರ ಹೊಸ ಬ್ರ್ಯಾಂಚ್‌ಗೇ ಹೋಗೋಣ, ಏಕೆಂದರೆ ಅಲ್ಲಿ ಕಾರ್ ಪಾರ್ಕಿಂಗ್ ಸೌಲಭ್ಯವಿದೆ' ಎಂದೂ 'ಮಜ್ನೂ'ವಿನ ತಂದೆ ಹೇಳಿದ್ದಾರೆ. ಈ ಸೌಲಭ್ಯದ ಬಗ್ಗೆಯೂ ಹೈಲೈಟ್ ಮಾಡಿರುವುದು ಜಾಹಿರಾತು ತಯಾರಿಸಿದವನ ಕ್ರಿಯೇಟಿವಿಟಿಗೆ ಹಿಡಿದ ಕನ್ನಡಿ.ನಂತರದಲ್ಲಿ, ಶಾಪ್‌ನ ಕಾಂಟ್ಯಾಕ್ಟ್ ವಿವರಗಳು( ) ಹಾಗೂ ಅಡ್ರೆಸ್ ನೀಡಲಾಗಿದೆ. ಈ ಹಿಂದೆಯೂ ಈ ಸುಲ್ತಾನ್ ಶಾಪ್ 'ಮಜ್ನು'ವನ್ನಿಟ್ಟುಕೊಂಡು ಚೆಂದದ ಜಾಹಿರಾತುಗಳನ್ನು ನೀಡಿತ್ತು ಎಂಬುದು ಗಮನಾರ್ಹ. ಬಹತೇಕ ನೆಟ್ಟಿಗರು ಈ ಜಾಹಿರಾತಿನ ವೈಶಿಷ್ಠ್ಯವನ್ನು ಮೆಚ್ಚಿದ್ದರೆ, ಕೆಲವರು ಮಾತ್ರ ಮಿಸ್ಸಿಂಗ್ ಪರ್ಸನ್ ರೀತಿಯಲ್ಲಿ ನೀಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಂತೆ ಒಬ್ಬರು, 'ಈ ರೀತಿ ಜಾಹಿರಾತನ್ನು ನೀಡುವುದು ನೈತಿಕ ಮೌಲ್ಯಗಳಿಗೆ ವಿರೋಧವಾಗಿದೆ. ಕಾಣೆಯಾದವರ ಬಗ್ಗೆ ಹಾಕುವುದು ಯಾವತ್ತೂ ಪ್ರಾಮಾಣಿಕವಾಗಿರುತ್ತದೆ. ಅಂಥ ಜಾಗವನ್ನು ಈ ಜಾಹಿರಾತು ತುಂಬಿದರೆ, ಕಾಣೆಯಾದವರ ವಿಷಯ ಮುಂದೆ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳಬಹುದು. ಜನರು ನಿಜವಾಗಿಯೂ ಕಾಣೆಯಾದವರ ಜಾಹಿರಾತುಗಳನ್ನು ಕಡೆಗಣಿಸಬಹುದು' ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಇಲ್ಲರೂ ಇದು ಹೈಟ್ಸ್ ಆಫ್ ಕ್ರಿಯೇಟಿವಿಟಿ, ಎಲ್ಲ ಪೋಷಕರೂ ಇಷ್ಟೇ ಅರ್ಥ ಮಾಡಿಕೊಳ್ಳುವವರಾಗಿದ್ದರೆ ಚೆನ್ನಾಗಿರುತ್ತಿತ್ತು, ಇದು ಮಾಡರ್ನ್ ವರ್ಲ್ಡ್ ಅಡ್ವರ್ಟೈಸ್‌ಮೆಂಟ್ ಎಂದು ಮೆಚ್ಚಿ ಮಾತಾಡಿದ್ದಾರೆ.