: ಚಿನ್ನ,ಬೆಳ್ಳಿ ದರದಲ್ಲಿ ಮುಂದುವರಿದ ಹಾವೇಣಿ ಆಟ; ರಾಜ್ಯದಲ್ಲಿಇಂದು ಚಿನ್ನ,ಬೆಳ್ಳಿ ಬೆಲೆ ಎಷ್ಟಿದೆ? ಬೆಂಗಳೂರಿನಲ್ಲಿ ನಿನ್ನೆ ಇಳಿಕೆಯಾಗಿದ್ದ ಚಿನ್ನದ ದರದಲ್ಲಿ ಇಂದು ಏರಿಕೆ ಕಂಡುಬಂದಿದ್ದು,ಚಿನ್ನ ಖರೀದಿಸೋರಿಗೆ ನಿರಾಸೆ ಮೂಡಿಸಿದೆ.ಆದ್ರೆ ನಿನ್ನೆ ಗಮನಾರ್ಹ ಏರಿಕೆ ದಾಖಲಿಸಿದ ಬೆಳ್ಳಿ ಬೆಲೆಯಲ್ಲಿ ಇಂದು ಭಾರೀ ಕುಸಿತ ಕಂಡುಬಂದಿದೆ. ಬೆಂಗಳೂರು (ಡಿ.30):ಚಿನ್ನ () ಹಾಗೂ ಬೆಳ್ಳಿ () ಬೆಲೆಯಲ್ಲಿ() ನಿರಂತರ ಏರಿಳಿತ ಕಂಡುಬರುತ್ತಲೇ ಇರುತ್ತದೆ. ಕೆಲವೊಮ್ಮೆ ಗಗನಕ್ಕೇರೋ ಚಿನ್ನ, ಬೆಳ್ಳಿ ದರಗಳು ಇನ್ನೊಮ್ಮೆ ಅಷ್ಟೇ ವೇಗವಾಗಿ ಕೆಳಗಿಳಿಯುತ್ತವೆ ಕೂಡ. ಕೊರೋನಾ() ಕಾಣಿಸಿಕೊಂಡ ಬಳಿಕ ಚಿನ್ನ ಹಾಗೂ ಬೆಳ್ಳಿ ಎರಡರ ಬೆಲೆಯೂ ಗಗನಕ್ಕೇರಿತ್ತು. ಲಾಕ್ ಡೌನ್ , ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು, ಭಾರತದ ಷೇರು ಮಾರುಕಟ್ಟೆಯಲ್ಲಿನ ಕುಸಿತ ಕಳೆದ ವರ್ಷ ಚಿನ್ನ ಹಾಗೂ ಬೆಳ್ಳಿ ದರದ ಮೇಲೆ ಗಮನಾರ್ಹ ಪರಿಣಾಮ ಬೀರಿದ್ದವು. ಚಿನ್ನಾಭರಣಗಳನ್ನು( ) ಖರೀದಿಸೋದು() ಇನ್ನು ಕನಸಿನ ಮಾತು ಎಂಬ ಭಾವನೆ ಮಧ್ಯಮ ವರ್ಗದ ಮಹಿಳೆಯರಲ್ಲಿ ಮೂಡಿತ್ತು. ಆದ್ರೆ ಈ ವರ್ಷದ ಪ್ರಾರಂಭದಲ್ಲಿ ಚಿನ್ನದ ದರ( ) ಇಳಿಕೆ ದಾಖಲಿಸೋ ಮೂಲಕ ಬಂಗಾರಪ್ರಿಯರಿಗೆ ಖುಷಿ ನೀಡಿತ್ತು. ಇನ್ನು ಬೆಂಗಳೂರಿನಲ್ಲಿ() ನಿನ್ನೆ ಇಳಿಕೆಯಾಗೋ ಮೂಲಕ ಗ್ರಾಹಕರಿಗೆ ಖುಷಿ ನೀಡಿದ್ದ ಚಿನ್ನದ ದರದಲ್ಲಿ ಇಂದು (ಡಿ.30) ಏರಿಕೆ ಕಂಡುಬಂದಿದೆ. ನಿನ್ನೆ ಬೆಂಗಳೂರಿನಲ್ಲಿ() ಗಮನಾರ್ಹ ಏರಿಕೆಯಾಗಿದ್ದ ಬೆಳ್ಳಿ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿರೋದು ಬೆಳ್ಳಿ ಖರೀದಿಸೋ ಯೋಚನೆಯಲ್ಲಿರೋ ಗ್ರಾಹಕರಿಗೆ ನಿರಾಳತೆ ಒದಗಿಸಿದೆ. ದೇಶದ ಪ್ರಮುಖ ನಗರಗಳಲ್ಲಿ ಇಂದಿನ (ಡಿ.30) ಚಿನ್ನ, ಬೆಳ್ಳಿ ದರ ಹೀಗಿದೆ. ಬೆಂಗಳೂರಿನಲ್ಲಿ() ದರ ಎಷ್ಟಿದೆ?ಬೆಂಗಳೂರಿನಲ್ಲಿ ()ಚಿನ್ನದ ಬೆಲೆಯಲ್ಲಿ ಇಂದು 750ರೂ. ಏರಿಕೆಯಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,150ರೂ. ಇದ್ದು, ಇಂದು 45,900ರೂ. ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 48,990ರೂ. ಇದೆ. ನಿನ್ನೆ 49,260ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 270ರೂ. ಇಳಿಕೆಯಾಗಿದೆ. ನಿನ್ನೆ ಬೆಳ್ಳಿ ಬೆಲೆ ಸುಮಾರು 4000ರೂ.ನಷ್ಟು ಏರಿಕೆಯಾಗೋ ಮೂಲಕ ಗ್ರಾಹಕರಿಗೆ ಹಾಗೂ ಹೂಡಿಕೆದಾರರಿಗೆ ನಿರಾಸೆ ಮೂಡಿಸಿತ್ತು. ಆದ್ರೆ ಇಂದು ಬೆಳ್ಳಿ ಬೆಲೆಯಲ್ಲಿ 4,700ರೂ. ಇಳಿಕೆಯಾಗಿದ್ದು, ಒಂದು ಕೆ.ಜಿ. ಬೆಳ್ಳಿ ಬೆಲೆ 61,600ರೂ. ಇದೆ. :ಜಾರ್ಖಂಡ್ ನಲ್ಲಿ ಪೆಟ್ರೋಲ್ ದರ 25ರೂ. ಇಳಿಕೆ; ರಾಜ್ಯದಲ್ಲಿ ಇಂಧನ ದರದಲ್ಲಿ ಬದಲಾವಣೆ ಇಲ್ಲ ದೆಹಲಿಯಲ್ಲಿ ಹೇಗಿದೆ?ದೆಹಲಿಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ 10ರೂ. ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 47,300ರೂ. ಇದ್ದು, ಇಂದು 47,290ರೂ. ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ. ಇಳಿಕೆಯಾಗಿ ಇಂದು 51,590ರೂ. ಇದೆ. ಬೆಳ್ಳಿ ದರದಲ್ಲಿ 900ರೂ. ಇಳಿಕೆಯಾಗಿದ್ದು,ಇಂದು ಒಂದು ಕೆ.ಜಿ. ಬೆಳ್ಳಿ ದರ 61,600ರೂ. ಆಗಿದೆ. ಮುಂಬೈನಲ್ಲಿ ಎಷ್ಟಿದೆ?ಮುಂಬೈನಲ್ಲಿಇಂದು ಚಿನ್ನದ ದರದಲ್ಲಿ 10ರೂ. ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 47,000ರೂ. ಇದೆ. ನಿನ್ನೆ 47, 010ರೂ. ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು 49,000ರೂ. ಇದೆ. ನಿನ್ನೆ 49,010ರೂ. ಇತ್ತು. ಬೆಳ್ಳಿ ದರದಲ್ಲಿ ಇಂದು 900ರೂ. ಇಳಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿ ಬೆಲೆ 61,600ರೂ. ಆಗಿದೆ. : ಡಿಸ್ಕೌಂಟ್ ನೀಡಿ ತಗಲಾಕಿಕೊಂಡ ಜೊಮ್ಯಾಟೋ, ಸ್ವಿಗ್ಗಿ; ಆದಾಯ ತೆರಿಗೆ ಇಲಾಖೆಯಿಂದ ತನಿಖೆ! ಚೆನ್ನೈಯಲ್ಲಿ ದರ ಹೀಗಿದೆಚೆನ್ನೈಯಲ್ಲಿ ಇಂದು ಚಿನ್ನದ ದರದಲ್ಲಿ 190ರೂ. ಇಳಿಕೆ ಕಂಡುಬಂದಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,080ರೂ.ಇದೆ. ನಿನ್ನೆ 45,270ರೂ. ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು 49,390ರೂ. ಇದೆ. ನಿನ್ನೆ 49,180ರೂ. ಇತ್ತು. ಬೆಳ್ಳಿ ದರದಲ್ಲಿ ಇಂದು 800ರೂ. ಇಳಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ 65,500ರೂ.ಇದೆ. "