: ಸತತ 3ನೇ ಭಾನುವಾರವೂ ವಾಹನ ಸವಾರರಿಗೆ ನಿರಾಳ, ಹೀಗಿದೆ ಇಂದಿನ ದರ! * ಕರ್ನಾಟಕದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೇಗಿದೆ? * ವಾಹನ ಸವಾರರಿಗೆ ಕೊಂಚ ನೆಮ್ಮದಿ ಕೊಟ್ಟ ಪೆಟ್ರೋಲ್, ಡೀಸೆಲ್ ದರ * ಇಲ್ಲಿದೆ ನೋಡಿ ಇಂದಿನ ಇಂಧನ ದರ ಬೆಂಗಳೂರು(ಡಿ.19): ಕೊರೋನಾ ಸಂದರ್ಭದಲ್ಲಿ ಜನರನ್ನು ತಟ್ಟಲಾರಂಭಿಸಿದ ಬೆಲೆ ಏರಿಕೆ ಬಿಸಿ ಇನ್ನೂ ನಿಂತಿಲ್ಲ. ಚಿನ್ನ, ಬೆಳ್ಳಿ, ಪೆಟ್ರೋಲ್, ಡೀಸೆಲ್, ಗ್ಯಾಸ್‌ ಸೇರಿದಂತೆ ನಿತ್ಯ ಬಳಕೆಯ ವಸ್ತುಗಳ ಬೆಲೆ ದಿನೇ ದಿನೇ ಏರುತ್ತಿರುವುದು ಜನ ಸಾಮಾನ್ಯರನ್ನು ಕಂಗಾಲುಗೊಳಿಸಿದೆ. ಕರ್ನಾಟಕ ಸೇರಿದಂತೆ ಕೆಲ ರಾಜ್ಯ ಸರ್ಕಾರಗಳು ಪೆಟ್ರೋಲ್ () ಮೇಲಿನ ಸುಂಕ ಕಡಿತಗೊಳಿಸಿದ ಪರಿಣಾಮ ಇಂಧನ ದರ ಕೊಂಚ ಇಳಿಕೆಯಾಗಿತ್ತಾದರೂ ಅಂದುಕೊಂಡಷ್ಟು ಮಟ್ಟದಲ್ಲಿ ಮಾತ್ರ ಕುಸಿದಿರಲಿಲ್ಲ. ಹೀಗಾಗಿ ಅನೇಕ ಮಂದಿ ತಮ್ಮ ಖಾಸಗಿ ವಾಹನಗಳನ್ನು ದೂರವಿಟ್ಟು ಸಾರ್ವಜನಿಕ ಸಾರಿಗೆ ಮೊರೆ ಹೋಗಿರುವುದೂ ಸತ್ಯ. ಇನ್ನು ಇಂದಿನ ಇಂಧನ ದರ ಎಷ್ಟಿದೆ? ಕರ್ನಾಟಕದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎಂದು ನೋಡಿದರೆ ಗ್ರಾಹಕರಿಗೆ ಕೊಂಚ ಸಮಾಧಾನವಾಗುತ್ತದೆ ಎಂಬುವುದರಲ್ಲಿ ಅನುಮಾನವಿಲ್ಲ. ಹೌದು ಕಲಬುರಗಿ ಹೊರತುಪಡಿಸಿ ಉಳಿದೆಲ್ಲಾ ನಗರಗಳಲ್ಲಿ ಇಂಧನ ದರದಲ್ಲಿ ( ) ಯಾವುದೇ ಬದಲಾವಣೆಯಾಗಿಲ್ಲ. ಪೆಟ್ರೋಲ್, ಡೀಸೆಲ್ (Dieselದರಗಳು ಯಥಾಸ್ಥಿತಿ ಕಾಯ್ದುಕೊಂಡಿವೆ. ಇಂಧನ ದರ ಏರಿಕೆಯಾಗಿಲ್ಲ ಎಂಬುವುದು ವಾಹನ ಸವಾರರಿಗೆ ಕೊಂಚ ನೆಮ್ಮದಿ ಕೊಟ್ಟಿದೆ. ಅಷ್ಟಕ್ಕೂ ರಾಜ್ಯದ ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಡಿಸೆಂಬರ್ 12, 2021 ದರ ಎಷ್ಟಿದೆ ಎಂದು ನೋಡುವುದಾದರೆ. ರಾಜ್ಯದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂಧನ ದರ * ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ () ಪೆಟ್ರೋಲ್ ದರ 100.58 ರೂ. ಹಾಗೂ ಡೀಸೆಲ್ ದರ 85.01ರೂ. ಆಗಿದೆ. * ಹುಬ್ಬಳ್ಳಿಯಲ್ಲಿ () ಪೆಟ್ರೋಲ್ ದರ 100.30 ರೂ. ಆಗಿದ್ದರೆ, ಡೀಸೆಲ್ ದರ 84.78 ರೂ. ಆಗಿದೆ. * ಅತ್ತ ಕರಾವಳಿ ನಾಡು ಮಂಗಳೂರಿನಲ್ಲಿ () ಪೆಟ್ರೋಲ್ ದರ 99.76 ರೂ ಹಾಗೂ ಡೀಸೆಲ್ ದರ 84.24 ರೂಪಾಯಿ ಆಗಿದೆ. * ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ () ಪೆಟ್ರೋಲ್ ದರ 100.08 ರೂ. ಆದರೆ ಡಿಸೆಲ್ ದರ 84.56 ರೂಪಾಯಿ ಆಗಿದೆ. * ಕಲಬುರಗಿಯಲ್ಲಿ () ಮಾತ್ರ ಇಂಧನ ದರ ಏರಿಕೆ ಕಂಡಿದೆ. ಇಲ್ಲಿ ಪೆಟ್ರೋಲ್ ದರ 100.38 ರೂಪಾಯಿ ಆಗಿದ್ದರೆ, ಡೀಸೆಲ್ ದರ 84.85 ಆಗಿದೆ. ಪೆಟ್ರೋಲ್ ದರ ಪರಿಷ್ಕರಣೆ ಹೇಗೆ? ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರ್ಧರಣೆಯಲ್ಲಿಅನೇಕ ಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಮೊದಲನೆಯದಾಗಿ ಕಚ್ಚಾ ತೈಲದ ಬೆಲೆ, ಎರಡನೆಯದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುತ್ತಿರೋ ತೆರಿಗೆಗಳು. ಇವೆರಡರ ಜೊತೆಗೆ ಡೀಲರ್‌ಗಳ ಕಮೀಷನ್ ಹಾಗೂ ವ್ಯಾಟ್() ಕೂಡ ಬೆಲೆ ಮೇಲೆ ಪರಿಣಾಮ ಬೀರುತ್ತವೆ. ಪೆಟ್ರೋಲ್‌ ಹಾಗೂ ಡೀಸೆಲ್ ದುಬಾರಿಯಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸೋ ತೆರಿಗೆಗಳೇ ಕಾರಣ.ಇಂಧನಗಳ ಮೇಲೆ ವಿಧಿಸೋ ತೆರಿಗೆಗಳಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂಧನದ ಮೇಲಿನ ತೆರಿಗೆ ಕಡಿತಗೊಳಿಸಲು ಹಿಂದೇಟು ಹಾಕೋದು.ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಮಾರುಕಟ್ಟೆಯಲ್ಲಿ ದರಗಳ ಏರಿಳಿತವಾಗುತ್ತಿರೋ ಕಾರಣ ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಪೆಟ್ರೋಲ್ ದರವನ್ನು ಪ್ರತಿ 15 ದಿನಗಳಿಗೊಮ್ಮೆ ಬದಲಾಯಿಸಲಾಗುತ್ತಿತ್ತು. ಅಂದ್ರೆ ಪ್ರತಿ ತಿಂಗಳು 1 ಹಾಗೂ 16ನೇ ತಾರೀಖಿನಂದು ದರ ಬದಲಾವಣೆ ಮಾಡಲಾಗುತ್ತಿತ್ತು. ಆದ್ರೆ 2017ರ ಜೂನ್ 16ರಿಂದ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಅದರಡಿಯಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಲ್ಲ ಪೆಟ್ರೋಲ್ ಹಾಗೂ ಡೀಸೆಲ್ ಸರಕು ಹಾಗೂ ಸೇವಾ ತೆರಿಗೆ () ವ್ಯಾಪ್ತಿಗೆ ಬಾರದಿದ್ರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ತೆರಿಗೆಗಳನ್ನು ವಿಧಿಸುತ್ತವೆ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದಾಗ ಅದರ ಮೇಲಿನ ಸುಂಕವನ್ನು ಸರ್ಕಾರ ಕಡಿತಗೊಳಿಸುತ್ತಿತ್ತು.ಆದ್ರೆ 2014ರಿಂದ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಬಿಟ್ಟಿದೆ.