:ಹೊಸ ವರ್ಷದಲ್ಲಿ ಜೀವ ವಿಮಾ ಪ್ರೀಮಿಯಂ ದುಬಾರಿ? *ರೀಇನ್ಸುರೆನ್ಸ್ ಕಂಪನಿಗಳು ಶುಲ್ಕ ಹೆಚ್ಚಳ ಮಾಡಲಿರೋ ಕಾರಣ ಜೀವ ವಿಮಾ ಪ್ರೀಮಿಯಂನಲ್ಲಿ ಏರಿಕೆ*ಪ್ರೀಮಿಯಂ ಹೆಚ್ಚಳ ಕೋರಿ ಗೆ ಅರ್ಜಿ*ಆರೋಗ್ಯ ವಿಮಾ ಪ್ರೀಮಿಯಂಗಳಲ್ಲಿ ಕೂಡ ಹೆಚ್ಚಳ ಸಾಧ್ಯತೆ ನವದೆಹಲಿ (ಡಿ.16):ಹೊಸ ವರ್ಷದಲ್ಲಿ ಜೀವ ವಿಮಾ ಪ್ರೀಮಿಯಂಗಳಲ್ಲಿ ( ) ಹೆಚ್ಚಳವಾಗೋ ಸಾಧ್ಯತೆಯಿದೆ. 2022ರಲ್ಲಿ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಲು ಅನುಮತಿ ಕೋರಿ ಅನೇಕ ಜೀವ ವಿಮಾ ಕಂಪನಿಗಳು ಈಗಾಗಲೇ ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರಕ್ಕೆ () ಅರ್ಜಿ ಸಲ್ಲಿಸಿವೆ ಕೂಡ. 2022ರಲ್ಲಿ ಅನೇಕ ರೀಇನ್ಸುರೆನ್ಸ್ ಕಂಪನಿಗಳು ( ) ಶುಲ್ಕ ಹೆಚ್ಚಳ ಮಾಡಲಿವೆ. ಜೀವ ವಿಮಾ ಕಂಪನಿಗಳು ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಪ್ರೀಮಿಯಂ ಹೆಚ್ಚಿಸಲಿವೆ. ರೀಇನ್ಸುರೆನ್ಸ್ ಎಂದ್ರೇನು?ರೀಇನ್ಸುರೆನ್ಸ್ () ಅಂದ್ರೆ ಜೀವ ವಿಮಾ ಕಂಪನಿಗಳು ( ) ಇನ್ನೊಂದು ಜೀವ ವಿಮಾ ಕಂಪನಿಯಿಂದ ಖರೀದಿಸೋ ವಿಮೆ (). ಮಹತ್ವದ ಕ್ಲೇಮ್ ಗಳ ಅಪಾಯದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜೀವ ವಿಮಾ ಕಂಪನಿಗಳು ಇನ್ನೊಂದು ವಿಮಾ ಕಂಪನಿಯಿಂದ ವಿಮೆ ಪಡೆದಿರುತ್ತವೆ. ಈ ವಿಮೆ ಶುಲ್ಕದಲ್ಲಿ ಹೆಚ್ಚಳ ಮಾಡಿದಾಗ ಆ ಆರ್ಥಿಕ ಹೊರೆಯನ್ನು ಜೀವ ವಿಮಾ ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸುತ್ತವೆ. ರೀಇನ್ಸುರೆನ್ಸ್ ಕಂಪನಿಗಳು 2022ರಲ್ಲಿ ಶುಲ್ಕವನ್ನು ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡೋ ಸಾಧ್ಯತೆಯಿರೋದ್ರಿಂದ ಕೆಲವು ಮೂಲಗಳ ಪ್ರಕಾರ ಇನ್ಯುರೆನ್ಸ್ ಪ್ರೀಮಿಯಂಗಳಲ್ಲಿ ಶೇ.20-40ರಷ್ಟು ಏರಿಕೆ ಕಂಡುಬರೋ ಸಾಧ್ಯತೆಯಿದೆ. 2021: ಶಾಪಿಂಗ್, ಡಿಜಿಟಲ್ ಪಾವತಿಗೆ ಹೆಚ್ಚಿದ ಕ್ರೆಡಿಟ್ ಕಾರ್ಡ್ ಬಳಕೆ ಆರೋಗ್ಯ ವಿಮೆ ಪ್ರೀಮಿಯಂ ಕೂಡ ಹೆಚ್ಚಳಹೊಸ ವರ್ಷದಲ್ಲಿ ಖಾಸಗಿ ಆಸ್ಪತ್ರೆಗಳು( ) ಚಿಕಿತ್ಸೆ ವೆಚ್ಚವನ್ನು ಶೇ.10ರಷ್ಟು ಏರಿಕೆ ಮಾಡಲು ಸಿದ್ಧತೆ ನಡೆಸುತ್ತಿವೆ. ಇದು ಕೂಡ ಆರೋಗ್ಯ ವಿಮೆ( ) ಪ್ರೀಮಿಯಂ () ಮೇಲೆ ಪ್ರಭಾವ ಬೀರೋ ಸಾಧ್ಯತೆಯಿದೆ. ವೈಯಕ್ತಿಕ ಆರೋಗ್ಯ ನೀತಿ ಪ್ರೀಮಿಯಂ (( ) ಹೆಚ್ಚಿಸಲು ಅನುಮತಿ ಬೇಕು. ಆದ್ರೆ ಕೊರೋನಾ() ವೈರಸ್ ಚಿಕಿತ್ಸಾ ವೆಚ್ಚವನ್ನು ಖಾಸಗಿ ಆಸ್ಪತ್ರೆಗಳು( ) ಹೆಚ್ಚಿಸಿರೋ ಹಿನ್ನೆಲೆಯಲ್ಲಿ ಅದನ್ನೇ ನೆಪವಾಗಿಟ್ಟುಕೊಂಡು ವಿಮಾ ಕಂಪನಿಗಳು( ) ವೈಯಕ್ತಿಕ ಆರೋಗ್ಯ ನೀತಿ ಪ್ರೀಮಿಯಂ ಹೆಚ್ಚಿಸಲು ಮೇಲೆ ಒತ್ತಡ ಹೇರುತ್ತಿವೆ. ಕಳೆದ ವರ್ಷ ಕೊರೋನಾ ಕಾರಣಕ್ಕೆ ಆರೋಗ್ಯ ವಿಮೆಗಳಿಗೆ ( )ಬೇಡಿಕೆ ಹೆಚ್ಚಿತ್ತು. ಅಲ್ಲದೆ, ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯ ವಿಮಾ ಪಾಲಿಸಿಗಳು ಕ್ಲೇಮ್ ಆಗಿದ್ದವು. ಇದು ಸಹಜವಾಗಿ ಆರೋಗ್ಯ ವಿಮಾ ಕಂಪನಿಗಳ ಆದಾಯದ ಮೇಲೆ ಪ್ರಭಾವ ಬೀರಿತ್ತು. ಪಾಲಿಸಿಗಳ ಮೇಲೆ ಪ್ರಭಾವಪ್ರೀಮಿಯಂ ಹೆಚ್ಚಳ ಆನ್ ಲೈನ್ ಹಾಗೂ ಆಪ್ ಲೈನ್ ಎರಡೂ ಪಾಲಿಸಿಗಳ ಮೇಲೆ ಪರಿಣಾಮ ಬೀರೋ ಸಾಧ್ಯತೆಯಿದೆ. ಕಳೆದ ಆರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆನ್ ಲೈನ್ ಪಾಲಿಸಿ ಮಾರುಕಟ್ಟೆ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರೋ ಸಾಧ್ಯತೆಯಿದೆ. ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಿನ ಮೊತ್ತದ ಆರೋಗ್ಯ ವಿಮೆಗಳು ಕ್ಲೇಮ್ ಆಗಿರೋದು ರೀ ಇನ್ಸುರೆನ್ಸ ಕಂಪನಿಗಳ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿವೆ. ಇದೇ ಕಾರಣಕ್ಕೆ ರೀಇನ್ಸುರೆನ್ಸ್ ಕಂಪನಿಗಳು ಶುಲ್ಕದಲ್ಲಿ ಹೆಚ್ಚಳ ಮಾಡಿವೆ. : ಅಮೆರಿಕದಲ್ಲಿ ಹಣದುಬ್ಬರ ಮಾತ್ರವಲ್ಲ, ಮದ್ಯ ಬೆಲೆಯಲ್ಲೂ ಏರಿಕೆ! ಟರ್ಮ್ ಇನ್ಯುರೆನ್ಸ್ ಗೆ( ) ಹೆಚ್ಚಿದ ಬೇಡಿಕೆಕೊರೋನಾ ಸಮಯದಲ್ಲಿ ಟರ್ಮ್ ಇನ್ಯುರೆನ್ಸ್ ಗೆ ಬೇಡಿಕೆ ಹೆಚ್ಚಿದೆ. ಇದು ಕೂಡ ಶುಲ್ಕ ಹೆಚ್ಚಿಸಲು ಕಾರಣವಾಗಿದೆ. ಪ್ರೀಮಿಯಂ ಹೆಚ್ಚಳದಿಂದ ವಿಮಾ ಕಂಪನಿಗಳ ಪಾಲಿಸಿ ಮಾರಾಟದಲ್ಲಿ ಇಳಿಕೆ ಕಂಡುಬರೋ ಸಾಧ್ಯತೆಯಿದೆ. ಆದ್ರೆ ಪ್ರೀಮಿಯಂ ದರದಲ್ಲಿ ಹೆಚ್ಚಿನ ಏರಿಕೆ ಮಾಡೋ ಕಾರಣ ಸಹಜವಾಗಿ ವಿಮಾ ಕಂಪನಿಗಳಿಗೆ ಹೆಚ್ಚಿನ ಲಾಭವಾಗೋ ಸಾಧ್ಯತೆಯಿದೆ.