: ಸಚಿವ ಸಂಪುಟದ ಅಂಗಳದಲ್ಲಿ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮಸೂದೆ! *ಕ್ರಿಪ್ಟೋಕರೆನ್ಸಿ ಮಸೂದೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗೋದು ಬಹುತೇಕ ಖಚಿತ*ವರ್ಚುವಲ್ ಕರೆನ್ಸಿಗೆ ಸಂಬಂಧಿಸಿ ಈಗಾಗಲೇ ಮೂರು ಬಾರಿ ಎಚ್ಚರಿಕೆ ನೀಡಿರೋ ಆರ್ ಬಿಐ*ಈ ಮಸೂದೆ ಮೂಲಕ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸೋ ಸಾಧ್ಯತೆ ನವದೆಹಲಿ (ಡಿ.14):ಭಾರತದಲ್ಲಿ ಕ್ರಿಪ್ಟೋಕರೆನ್ಸಿ () ನಿಯಂತ್ರಣಕ್ಕೆ ಸರ್ಕಾರ ಕಾನೂನು ರೂಪಿಸುತ್ತದೆಯೋ ಇಲ್ಲವೋ ಎಂಬ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗಳು ಈಗಾಗಲೇ ಹುಟ್ಟಿಕೊಂಡಿವೆ. ಈ ಸಂಬಂಧ ಸರ್ಕಾರದ ದ್ವಂದ್ವ ಹೇಳಿಕೆಗಳು ಕೂಡ ಜನರಲ್ಲಿ ಗೊಂದಲ ಮೂಡಿಸಿವೆ. ಆದ್ರೆ ಕೊನೆಗೂ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕ್ರಿಪ್ಟೋಕರೆನ್ಸಿ ಹಾಗೂ ಅಧಿಕೃತ ಡಿಜಿಟಲ್ ಕರೆನ್ಸಿಗಳ ನಿಯಂತ್ರಣ ಮಸೂದೆಯು( ) ಸಚಿವ ಸಂಪುಟದ ಅಂತಿಮ ಪರಿಶೀಲನೆಯಲ್ಲಿದೆ ಎಂಬ ಮಾಹಿತಿಯನ್ನು ನೀಡಿದೆ. ಲೋಕಸಭೆಯಲ್ಲಿ ದೇಶದಲ್ಲಿ ಹೆಚ್ಚುತ್ತಿರೋ ಕ್ರಿಪ್ಟೋಕರೆನ್ಸಿ ಪ್ರಭಾವದ ಕುರಿತ ಪ್ರಶ್ನೆಗೆ ಉತ್ತರಿಸೋ ಸಂದರ್ಭದಲ್ಲಿ ಹಣಕಾಸು ಸಚಿವಾಲಯದ( )ರಾಜ್ಯ ಸಚಿವರು( ) ಈ ಮಾಹಿತಿ ನೀಡಿದ್ದಾರೆ. 2013ರ ಡಿಸೆಂಬರ್ ನಿಂದ ಈ ತನಕ ವರ್ಚುವಲ್ ಕರೆನ್ಸಿಗಳನ್ನು ( ) ಹೊಂದಿರೋರು, ಬಳಕೆದಾರರು ಹಾಗೂ ವ್ಯಾಪಾರಿಗಳಿಗೆ ಆರ್ ಬಿಐ () ಮೂರು ಬಾರಿ ಎಚ್ಚರಿಕೆ ನೀಡಿದೆ ಎಂದು ಸಚಿವರು ಹೇಳಿದ್ದಾರೆ. 'ವರ್ಚುವಲ್ ಕರೆನ್ಸಿಗಳನ್ನು ( ) ಹೊಂದಿರೋರು, ಬಳಕೆದಾರರು ಹಾಗೂ ವ್ಯಾಪಾರಿಗಳಿಗೆ ಡಿಸೆಂಬರ್ 24, 2013, ಫೆಬ್ರವರಿ 1, 2017 ಹಾಗೂ ಡಿಸೆಂಬರ್ 5, 2017 ಹೀಗೆ ಮೂರು ಬಾರಿ ಆರ್ ಬಿಐ ಸಾರ್ವಜನಿಕ ನೋಟಿಸ್ ಮೂಲಕ ಎಚ್ಚರಿಕೆ ನೀಡಿದೆ. ವರ್ಚುವಲ್ ಕರೆನ್ಸಿಗಳ ವಹಿವಾಟುಗಳಲ್ಲಿ ಆರ್ಥಿಕ(), ಹಣಕಾಸು(), ಕಾರ್ಯನಿರ್ವಹಣೆ, ಕಾನೂನಾತ್ಮಕ(), ಗ್ರಾಹಕರ ಹಿತರಕ್ಷಣೆ ಹಾಗೂ ಭದ್ರತೆಗೆ ಸಂಬಂಧಿಸಿದ ಸಂಭವನೀಯ ಅಪಾಯಗಳಿವೆ ಎಂಬ ಎಚ್ಚರಿಕೆಯನ್ನು ಆರ್ ಬಿಐ ಈ ನೋಟಿಸ್ ಗಳ ಮೂಲಕ ನೀಡಿತ್ತು. ಕ್ರಿಪ್ಟೋಕರೆನ್ಸಿಗಳಂತಹ ತಂತ್ರಜ್ಞಾನಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗದಿರಲಿ! ದೇಶದ ವಿತ್ತೀಯ ಹಾಗೂ ಹಣಕಾಸು ಸ್ಥಿರತೆ ಮೇಲೆ ಕ್ರಿಪ್ಟೋಕರೆನ್ಸಿ ನಕಾರಾತ್ಮಕ ಪ್ರಭಾವ ಬೀರೋ ಆತಂಕವನ್ನು ಆರ್ ಬಿಐ ವ್ಯಕ್ತಪಡಿಸಿದೆ ಎಂದು ಸಚಿವರು ಹೇಳಿದರು. 'ವರ್ಚುವಲ್ ಕರನ್ಸಿಗೆ ಸಂಬಂಧಿಸಿ ಸರ್ಕಾರ ಅಂತರ ಸಚಿವಾಲಯಗಳ ಸಮಿತಿ () ರಚಿಸಿದ್ದು, ಈ ಸಮಿತಿ 2019ರಲ್ಲೇ ವರದಿ ಸಲ್ಲಿಸಿದೆ. ಈ ವರದಿಯನ್ನು ಮತ್ತೊಮ್ಮೆ ಪರಿಶೀಲಿಸಲಾಗಿದೆ ಹಾಗೂ ಕ್ರಿಪ್ಟೋಕರೆನ್ಸಿ ಹಾಗೂ ಅಧಿಕೃತ ಡಿಜಿಟಲ್ ಕರೆನ್ಸಿಗಳ ನಿಯಂತ್ರಣ ಮಸೂದೆಯು ಸಚಿವ ಸಂಪುಟದ ಅಂತಿಮ ಪರಿಶೀಲನೆಯಲ್ಲಿದೆ' ಎಂದರು. ಕಳೆದ ವಾರ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಆಯೋಜಿಸಿದ್ದ 'ಪ್ರಜಾಪ್ರಭುತ್ವ ಶೃಂಗಸಭೆ' ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಸಾಮಾಜಿಕ ಜಾಲತಾಣಗಳು ಹಾಗೂ ಕ್ರಿಪ್ಟೋಕರೆನ್ಸಿಯಂತಹ ಹೊಸ ತಂತ್ರಜ್ಞಾನಗಳ ನಿಯಂತ್ರಣಕ್ಕೆ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳು ಒಗ್ಗೂಡಿ ಜಾಗತಿಕ ನಿಯಮಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸಚಿವ ಸಂಪುಟದ ಅನುಮೋದನೆ ಸಿಕ್ಕ ಬಳಿಕ ಕ್ರಿಪ್ಟೋಕರೆನ್ಸಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಯೋಚಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಇತ್ತೀಚೆಗೆ ಹೇಳಿಕೆ ನೀಡಿದ್ದರು. :ಕ್ರಿಪ್ಟೋಕರೆನ್ಸಿ ಉತ್ತೇಜಿಸೋ ಯಾವ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ: ವಿತ್ತ ಸಚಿವಾಲಯ ಸ್ಪಷ್ಟನೆ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ಮಸೂದೆಯು ಈ ಬಾರಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ( ) ಮಂಡನೆಯಾಗಲಿರೋ ಹೊಸ ಮಸೂದೆಗಳಲ್ಲಿ ಅತ್ಯಂತ ನಿರೀಕ್ಷೆ ಮೂಡಿಸಿರುವಂತಹದ್ದಾಗಿದೆ. ಈ ಮಸೂದೆ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ () ಅಧಿಕೃತ ಕ್ರಿಪ್ಟೋ ಕರೆನ್ಸಿಗಳನ್ನು ಬಿಡುಗಡೆ ಮಾಡೋ ಕುರಿತು ಸರ್ಕಾರ ನಿಯಮಗಳನ್ನು ರೂಪಿಸಲಿದೆ. ಸರ್ಕಾರದಿಂದ ಈ ತನಕ ಬಂದಿರೋ ಮಾಹಿತಿಗಳ ಪ್ರಕಾರ ಕ್ರಿಪ್ಟೋಕರೆನ್ಸಿ ಹಾಗೂ ಅಧಿಕೃತ ಡಿಜಿಟಲ್ ಕರೆನ್ಸಿಗಳ ನಿಯಂತ್ರಣ ಮಸೂದೆ-2021 ಭಾರತದಲ್ಲಿ ಇತರ ಎಲ್ಲ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲಿದೆ. ಆದ್ರೆ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ತಂತ್ರಜ್ಞಾನದ ಉತ್ತೇಜನ ಹಾಗೂ ಬಳಕೆಗೆ ಸಂಬಂಧಿಸಿ ಮಾತ್ರ ನಿರ್ದಿಷ್ಟ ವಿನಾಯ್ತಿಗಳನ್ನು ಈ ಮಸೂದೆ ಮೂಲಕ ನೀಡಲಾಗುತ್ತದೆ.