:ಜ.1ರಿಂದ ಗ್ರಾಹಕರ ಕಾರ್ಡ್ ಮಾಹಿತಿ ಸಂಗ್ರಹಿಸುವಂತಿಲ್ಲ; ಇನ್ನೂ ಸಿದ್ಧಗೊಳ್ಳದ ವ್ಯಾಪಾರಿಗಳು! *ಇ-ಕಾಮರ್ಸ್ ಸಂಸ್ಥೆಗಳು ಗ್ರಾಹಕರ ಕ್ರೆಡಿಟ್/ ಡೆಬಿಟ್ ಕಾರ್ಡ್ಗಳ ಮಾಹಿತಿಯನ್ನು ಜ.1ರಿಂದ ಸಂಗ್ರಹಿಸುವಂತಿಲ್ಲ* ನೀಡಿರೋ ಗಡುವಿನೊಳಗೆ ನಿಯಮ ಅನುಷ್ಠಾನಕ್ಕೆ ಹೆಣಗಾಡುತ್ತಿರೋ ಕೆಲವು ಬ್ಯಾಂಕುಗಳು, ಇ-ಕಾಮರ್ಸ್ ಸಂಸ್ಥೆಗಳು*ಗಡುವು ವಿಸ್ತರಿಸುವಂತೆ ಆರ್ ಬಿಐ ಗೆ ಮನವಿ ಮಾಡೋ ಸಾಧ್ಯತೆ*ಕೆಲವು ಇ-ಕಾಮರ್ಸ್ ಸಂಸ್ಥೆಗಳು ಈಗಾಗಲೇ ನಿಯಮ ಅನುಷ್ಠಾನಗೊಳಿಸಿವೆ ಮುಂಬೈ (ಡಿ.14):ಗ್ರಾಹಕರ ಕಾರ್ಡ್ ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿ ನಿಯಮಗಳ ಅನುಷ್ಠಾನಕ್ಕೆ ಆರ್ ಬಿಐ ()ನೀಡಿರೋ ಗಡುವಿನ ಕುರಿತು ಇ-ಕಾಮರ್ಸ್ ವ್ಯಾಪಾರಿಗಳು (- )ಹಾಗೂ ಬ್ಯಾಂಕ್ ಗಳು() ವಿರೋಧ ವ್ಯಕ್ತಪಡಿಸಿವೆ. ನಿಯಮಗಳ ಅನುಸರಣೆಗೆ ವಹಿವಾಟಿನ ಸರಪಳಿಯಲ್ಲಿರೋ( ) ವಿವಿಧ ಘಟಕಗಳ ಸನ್ನದ್ಧತೆಯ ಅಗತ್ಯವಿರೋ ಕಾರಣ ಕೆಲವು ಇ-ಕಾಮರ್ಸ್(-) ವ್ಯಾಪಾರಿಗಳಿಗೆ() ಆರ್ ಬಿಐ () ವಿಧಿಸಿರೋ ಗಡುವಿನೊಳಗೆ ನಿಯಮಗಳನ್ನು ಅನುಷ್ಠಾನ ಮಾಡೋದು ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಜನವರಿ 1ರಿಂದ ವ್ಯಾಪಾರಿಗಳು ಗ್ರಾಹಕರ ಕ್ರೆಡಿಟ್ ()ಅಥವಾ ಡೆಬಿಟ್ ಕಾರ್ಡ್( ) ಸಂಖ್ಯೆಯನ್ನು ತಮ್ಮ ವ್ಯವಸ್ಥೆಯಲ್ಲಿ ಸಂಗ್ರಹಿಸಿಡುವಂತಿಲ್ಲ ಎಂದು ಆರ್ ಬಿಐ () ಆದೇಶಿಸಿದೆ. ಇ-ಕಾಮರ್ಸ್ ಕಂಪನಿಗಳು(- ) ಈ ಗಡುವನ್ನು ವಿಸ್ತರಿಸುವಂತೆ ಆರ್ ಬಿಐಗೆ ಮನವಿ ಮಾಡೋ ಸಾಧ್ಯತೆಯಿದೆ ಎಂದು ಕೆಲವು ಮೂಲಗಳು ತಿಳಿಸಿವೆ. ಆದ್ರೆ ಆರ್ ಬಿಐ ಮಾತ್ರ ಈ ವಿಷಯದಲ್ಲಿ ತನ್ನ ಪಟ್ಟು ಬಿಡುತ್ತಿಲ್ಲ, ಹೀಗಾಗಿ ಗಡುವು ವಿಸ್ತರಿಸೋದು ಸದ್ಯದ ಮಟ್ಟಿಗೆ ಅಸಾಧ್ಯವೆಂದೇ ಹೇಳಬಹುದು. ಅನೇಕ ವ್ಯಾಪಾರಿಗಳು ಈಗಾಗಲೇ ಈ ನಿಯಮ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಕೆಲವು ಆನ್ಲೈನ್ ಶಾಪಿಂಗ್ ತಾಣಗಳಲ್ಲಿ ಪಾವತಿ ಸಮಯದಲ್ಲಿ ನೀವು ಕಾರ್ಡ್ ಮಾಹಿತಿಗಳನ್ನು ಸುರಕ್ಷಿತ ವಿಧಾನದಲ್ಲಿ ಸಂಗ್ರಹಿಸಿಡಲು ಬಯಸುತ್ತೀರಾ ಎಂಬ ಆಯ್ಕೆಯನ್ನು ನೀಡಲಾಗುತ್ತಿದೆ. ಈ ಆಯ್ಕೆ ನೀಡುತ್ತಿರೋ ಇ-ಕಾಮರ್ಸ್ ವ್ಯಾಪಾರಿಗಳು ಈಗಾಗಲೇ ಆರ್ ಬಿಐ ನಿಯಮ ಪಾಲಿಸಲು ಪ್ರಾರಂಭಿಸಿದ್ದಾರೆ. : ಸಚಿವ ಸಂಪುಟದ ಅಂಗಳದಲ್ಲಿ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮಸೂದೆ! ಆರ್ ಬಿಐ ಇ ನಿಯಮ ರೂಪಿಸಲು ಕಾರಣವೇನು?ಪ್ರಸ್ತುತ ನೀವು ಒಂದು ಇ-ಕಾಮರ್ಸ್ ತಾಣದಲ್ಲಿ ಒಮ್ಮೆ ಶಾಪಿಂಗ್ () ಮಾಡಿದ್ರೆ ಇನ್ನೊಮ್ಮೆ ಅದೇ ತಾಣದಲ್ಲಿ ಖರೀದಿ ಮಾಡೋವಾಗ ಪಾವತಿ ಸಮಯದಲ್ಲಿ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ನೀಡಬೇಕಾಗಿಲ್ಲ. ಅಂದ್ರೆ ಇ-ಕಾಮರ್ಸ್ ಕಂಪನಿ ನಿಮ್ಮ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡಿರುತ್ತದೆ. ಹೀಗಾಗಿ ನೀವು ಶಾಪಿಂಗ್ ಮಾಡೋವಾಗ ಪದೇಪದೆ ಕಾರ್ಡ್ ಮಾಹಿತಿಗಳನ್ನು ದಾಖಲಿಸಬೇಕಾದ ಅಗತ್ಯವಿಲ್ಲ. ಆದ್ರೆ ಈ ರೀತಿ ಕಾರ್ಡ್ ಮಾಹಿತಿಗಳು ಇ-ಕಾಮರ್ಸ್ ತಾಣಗಳಲ್ಲಿ ಸಂಗ್ರಹಿಸಿಟ್ಟುಕೊಂಡ್ರೆ ಮುಂದೆ ಇದ್ರಿಂದ ಆನ್ಲೈನ್ ವಂಚನೆ ( ) ಪ್ರಕರಣಗಳು ಹೆಚ್ಚಾಗಬಹುದು. ಈ ಮಾಹಿತಿಗಳನ್ನು ಕಳವು ಮಾಡಿ ಗ್ರಾಹಕರ ಖಾತೆಯಿಂದ ಆನ್ಲೈನ್ ವಂಚಕರು ಹಣ ದೋಚಬಹುದು ಎಂಬುದು ಆರ್ ಬಿಐ ಕಾಳಜಿ. ಇದೇ ಕಾರಣಕ್ಕೆ ಆನ್ ಲೈನ್ ವ್ಯವಹಾರಗಳನ್ನು ಇನ್ನಷ್ಟು ಸುರಕ್ಷಿತವಾಗಿಡಲು ಆರ್ ಬಿಐ ಇ-ಕಾಮರ್ಸ್ ವ್ಯಾಪಾರಿಗಳಿಗೆ ಗ್ರಾಹಕರ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸದಂತೆ ಆದೇಶ ನೀಡಿದೆ. 2021ರ ಜುಲೈಯಿಂದಲೇ ಈ ಆದೇಶ ಅನುಷ್ಠಾನಕ್ಕೆ ಸೂಚಿಸಿತ್ತು. ಆದ್ರೆ ಇ-ಕಾಮರ್ಸ್ ಸಂಸ್ಥೆಗಳು ಹಾಗೂ ಬ್ಯಾಂಕ್ ಗಳು ಈ ಪ್ರಕ್ರಿಯೆಗೆ ಸಿದ್ಧಗೊಳ್ಳದ ಕಾರಣ ಈ ಗಡುವನ್ನು 2022ರ ಜನವರಿ1ರ ತನಕ ವಿಸ್ತರಿಸಿತ್ತು. :ಇಂದಿನಿಂದ ನೆಟ್ ಫ್ಲಿಕ್ಸ್ ಸಬ್ ಸ್ಕ್ರಿಪ್ಷನ್ ದರದಲ್ಲಿ ಭಾರೀ ಇಳಿಕೆ ಹೊಸ ಸೇವೆ ಪರಿಚಯಿಸಲು ಸಿದ್ಧತೆ?ಪಾವತಿ ಸೇವಾ ಸಂಸ್ಥೆಗಳು ಈಗಾಗಲೇ ಹೊಸ ಸೇವೆಯೊಂದನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಂಡಿವೆ. ಈ ಸೇವೆಯಡಿಯಲ್ಲಿ ವ್ಯಾಪಾರಿ ಬ್ಯಾಂಕ್ಗಳ ಬಳಿ ಗ್ರಾಹಕರ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸುವಂತೆ ಮನವಿ ಮಾಡಿ, ಕಾರ್ಡ್ ಪ್ರತಿನಿಧಿಸೋ ಟೋಕನ್ ಪಡೆಯುತ್ತಾನೆ. ಈ ಟೋಕನ್ ಮೂಲಕ ವ್ಯಾಪಾರಿಯು ಕಾರ್ಡ್ ಸಂಖ್ಯೆಯನ್ನು ಆನ್ಲೈನ್ ತಾಣದಲ್ಲಿ ಒಮ್ಮೆ ದಾಖಲಿಸಿದ ಬಳಿಕ ಮತ್ತೆ ಮತ್ತೆ ದಾಖಲಿಸೋ ಅವಶ್ಯಕತೆಯಿಲ್ಲದೆ ಪಾವತಿ ಮಾಡಲು ಗ್ರಾಹಕನಿಗೆ ಅವಕಾಶ ಕಲ್ಪಿಸಿಕೊಡಲು ಸಾಧ್ಯವಾಗುತ್ತದೆ. ಆದ್ರೆ ತಜ್ಞರ ಪ್ರಕಾರ ಈ ಪ್ರಕ್ರಿಯೆಯಲ್ಲಿ ಒಟ್ಟು ನಾಲ್ಕು ಸಂಸ್ಥೆಗಳು ತೊಡಗಿಕೊಳ್ಳಬೇಕಾಗುತ್ತದೆ- ವ್ಯಾಪಾರಿ ಹೊಂದಿರೋ ಬ್ಯಾಂಕ್, ಪಾವತಿ ನೆಟ್ ವರ್ಕ್ (ಮಾಸ್ಟರ್ ಕಾರ್ಡ್/ರುಪೇ/ವೀಸಾ), ಪಾವತಿ ಗೇಟ್ ವೇ ( ) ಹಾಗೂ ಕಾರ್ಡ್ ವಿತರಿಸೋ ಬ್ಯಾಂಕ್. ಪಾವತಿ ಸೇವಾ ಸಂಸ್ಥೆ ರೇಝರ್ಪೇಯ್ () ಈಗಾಗಲೇ ರೇಝರ್ಪೇಯ್ ಟೋಕನ್ ಎಚ್ ಕ್ಯು ( ) ಬಿಡುಗಡೆ ಮಾಡಿದ್ದು, ಇದು ಮಲ್ಟಿ ನೆಟ್ ವರ್ಕ್ ಕಾರ್ಡ್ ಆನ್ ಫೈಲ್ () ಟೋಕನ್ ವ್ಯವಸ್ಥೆಯನ್ನು ಹೊಂದಿದೆ. ಈ ಯೋಜನೆಯು ಈಗಾಗಲೇ ಪಾವತಿ ನೆಟ್ ವರ್ಕ್ ಗಳಾದ ವೀಸಾ(), ಮಾಸ್ಟರ್ ಕಾರ್ಡ್(), ರುಪೇ ()ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿವೆ. ಅಲ್ಲದೆ, ಅನೇಕ ಬ್ಯಾಂಕ್ ಗಳನ್ನು ಕೂಡ ಪಾಲುದಾರರನ್ನಾಗಿ ಮಾಡಿಕೊಂಡಿವೆ.