: ಸತತ ಮೂರನೇ ಬಾರಿ ಸ್ಥಾನ ಗಿಟ್ಟಿಸಿಕೊಂಡ ನಿರ್ಮಲಾ ಸೀತಾರಾಮನ್ ಫೋಬ್ಸ್ ನಿಯತಕಾಲಿಕಾ ಪ್ರತಿವರ್ಷ ಬಿಡುಗಡೆ ಮಾಡೋ ವಿಶ್ವದ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಈ ಬಾರಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಡ್ತಿ ಪಡೆದಿದ್ದಾರೆ. ಅವರೂ ಸೇರಿದಂತೆ ಒಟ್ಟು 4 ಭಾರತೀಯರು ಈ ಬಾರಿ ಸ್ಥಾನ ಪಡೆದಿದ್ದಾರೆ. ನವದೆಹಲಿ (ಡಿ.8):ಅಮೆರಿಕ ಮೂಲದ ಪ್ರಖ್ಯಾತ ನಿಯತಕಾಲಿಕಾ ಫೋಬ್ಸ್() ಪ್ರಕಟಿಸಿರುವ ಜಗತ್ತಿನ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್( ) ಸತತ ಮೂರನೇ ಬಾರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ವರ್ಷ 37ನೇ ಸ್ಥಾನ ಅಲಂಕರಿಸೋ ಮೂಲಕ ಕಳೆದ ವರ್ಷಕ್ಕಿಂತ ಈ ವರ್ಷ ಸ್ಥಾನದಲ್ಲಿ ಬಡ್ತಿ ಕೂಡ ಗಳಿಸಿದ್ದಾರೆ. ಕಳೆದ ವರ್ಷ ಈ ಪಟ್ಟಿಯಲ್ಲಿ ಅವರು 41ನೇ ಸ್ಥಾನ ಗಳಿಸಿದ್ದರು. 2019ರ ಪೋಬ್ಸ್ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್( ) 34ನೇ ಸ್ಥಾನದಲ್ಲಿದ್ದರು. ಭಾರತೀಯ ಮೂಲದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ( ) ಫೋಬ್ಸ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಸಮಾಜ ಸೇವಕಿ ಮ್ಯಾಕೆಂಜಿ ಸ್ಕಾಟ್ ( ) ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿರೋ ಭಾರತೀಯ ಮಹಿಳೆಯರುವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಒಟ್ಟು ನಾಲ್ವರು ಭಾರತೀಯ ಮಹಿಳೆಯರು ಈ ಸಾಲಿನ ಫೋಬ್ಸ್ ಜಗತ್ತಿನ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ದೇಶದ ಪ್ರಮುಖ ಐಟಿ ಕಂಪನಿ ಎಚ್ ಸಿಎಲ್ ಕಾರ್ಪೋರೇಷನ್ ( ) ಸಿಇಒ() ರೋಶನಿ ನಾಡರ್ ಮಲ್ಹೋತ್ರ ( ) ಪಟ್ಟಿಯಲ್ಲಿ 52ನೇ ಸ್ಥಾನ ಅಲಂಕರಿಸಿದ್ದಾರೆ. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದರ್ ಷಾ ( -) ಈ ಬಾರಿ ಕೂಡ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, 72ನೇ ಸ್ಥಾನದಲ್ಲಿದ್ದಾರೆ. ನ್ಯಾಕ () ಸಂಸ್ಥಾಪಕಿ ಫಲ್ಗುಣಿ ನಾಯರ್ ( )ಇದೇ ಮೊದಲ ಬಾರಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದು, 88ನೇ rankನಲ್ಲಿದ್ದಾರೆ. ಬ್ಯಾಂಕ್ ನಿಷ್ಕ್ರಿಯ ಖಾತೆಗಳಲ್ಲಿ 26,697 ಕೋಟಿ ರೂ.: ನಿರ್ಮಲಾ ಸೀತಾರಾಮನ್ ಪ್ರತಿವರ್ಷ ಪ್ರಕಟಅಮೆರಿಕ ಮೂಲದ ಬಿಜಿನೆಸ್ ನಿಯತಕಾಲಿಕ ಫೋಬ್ಸ್ ಪ್ರತಿ ವರ್ಷ ಜಗತ್ತಿನ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯನ್ನು ಪ್ರಕಟಿಸುತ್ತದೆ. ಈ ವರ್ಷದ ಪಟ್ಟಿ 18ನೇ ಸಾಲಿನದ್ದಾಗಿದ್ದು, ಇದ್ರಲ್ಲಿ 40 ಸಿಇಒಗಳು, 19 ವಿಶ್ವ ನಾಯಕಿಯರು ಹಾಗೂ ಒಬ್ಬರು ರೋಗನಿರೋಧಕ ತಜ್ಞೆ ಸೇರಿದ್ದಾರೆ ಎಂದು ಫೋಬ್ಸ್ ತಿಳಿಸಿದೆ. ಫೋಬ್ಸ್ ಪ್ರಕಟಿಸೋ ವಿಶ್ವದ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಗಳಿಸೋದು ಸುಲಭದ ವಿಷಯವಲ್ಲ. ಇಂಥ ಪಟ್ಟಿ ಪ್ರಕಟ ಮಾಡೋ ಮುನ್ನ ಫೋಬ್ಸ್ ಪ್ರತಿಯೊಬ್ಬರ ಸಾಧನೆ ಬಗ್ಗೆಯೂ ಸಾಕಷ್ಟು ಮಾಹಿತಿ ಕಲೆ ಹಾಕಿರುತ್ತದೆ. ಮೊದಲ ಸ್ಥಾನಕ್ಕೆ ಹೊಸ ಮುಖಫೋಬ್ಸ್ ಪ್ರತಿವರ್ಷ ಪ್ರಕಟಿಸೋ ವಿಶ್ವದ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಒಂದು ದಶಕಕ್ಕಿಂತಲೂ ಹೆಚ್ಚು ಸಮಯದಿಂದ ಮೊದಲ ಸ್ಥಾನವನ್ನು ಜರ್ಮನ್ ನಿರ್ಗಮಿತ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಅಲಂಕರಿಸಿಕೊಂಡು ಬಂದಿದ್ದರು. ಆದ್ರೆ ಈ ಬಾರಿ ಅವರ ಸ್ಥಾನದಲ್ಲಿ ಸಮಾಜಸೇವಕಿ ಮ್ಯಾಕೆಂಜಿ ಸ್ಕಾಟ್ ಕಾಣಿಸಿಕೊಂಡಿದ್ದಾರೆ. ಬಿಟ್‌ಕಾಯಿನ್‌ಗೆ ಕರೆನ್ಸಿ ಮಾನ್ಯತೆ ನೀಡಲ್ಲ: ಕೇಂದ್ರ ಒಂದು ಸ್ಥಾನ ಏರಿಕೆ ಕಂಡ ಕಮಲಾ ಹ್ಯಾರಿಸ್ಅಮೆರಿಕದ ಉಪಾಧ್ಯಕ್ಷೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಈ ವರ್ಷದ ಫೋಬ್ಸ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಅವರು ಮೂರನೇ ಸ್ಥಾನದಲ್ಲಿದ್ದು, ಒಂದು ಸ್ಥಾನ ಬಡ್ತಿ ಪಡೆದಿದ್ದಾರೆ. ಅಮೆರಿಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮಹಿಳೆಯೊಬ್ಬರು ಉಪಾಧ್ಯಕ್ಷೆ ಸ್ಥಾನವನ್ನು ಅಲಂಕರಿಸಿದ ಕೀರ್ತಿಗೆ ಕಮಲಾ ಹ್ಯಾರಿಸ್ ಪಾತ್ರರಾಗಿದ್ಧಾರೆ. ಸದ್ಯ ಅವರು ಅಮೆರಿಕದ ಅತ್ಯಂತ ಪ್ರಭಾವಶಾಲಿ ಮಹಿಳೆ. ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ವಜೀದ್ ಕೂಡ ಈ ಬಾರಿ ಫೋಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 43ನೇ ಗಳಿಸಿದ್ದಾರೆ.