ಕರೆನ್ಸಿ ಮಾನ್ಯತೆ ಇಲ್ಲ, ಕ್ರಿಪ್ಟೋಕರೆನ್ಸಿ ನಿಯಂತ್ರಣಕ್ಕೆ ಶೀಘ್ರ ಮಸೂದೆ! ದೇಶಾದ್ಯಂತ ನಾನಾ ಕಾರಣಕ್ಕಾಗಿ ಬಿಟ್‌ಕಾಯಿನ್‌ನಂಥ ಕ್ರಿಪ್ಟೋಕರೆನ್ಸಿಗಳು ಭಾರೀ ಸದ್ದು ಮಾಡುತ್ತಿರುವ ಹೊತ್ತಿನಲ್ಲೇ, ಇದುವರೆಗೂ ಯಾವುದೇ ನಿಯಂತ್ರಣಕ್ಕೆ ಒಳಪಡದ ಇಂಥ ವರ್ಚುವಲ್‌ ಕರೆನ್ಸಿಗಳನ್ನು ತನ್ನ ನಿಯಂತ್ರಣದ ವ್ಯಾಪ್ತಿಗೆ ತರುವ ಸಂಬಂಧ ಮಸೂದೆಯೊಂದನ್ನು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ನವದೆಹಲಿ(ನ.15): ದೇಶಾದ್ಯಂತ ನಾನಾ ಕಾರಣಕ್ಕಾಗಿ ಬಿಟ್‌ಕಾಯಿನ್‌ನಂಥ ಕ್ರಿಪ್ಟೋಕರೆನ್ಸಿಗಳು ಭಾರೀ ಸದ್ದು ಮಾಡುತ್ತಿರುವ ಹೊತ್ತಿನಲ್ಲೇ, ಇದುವರೆಗೂ ಯಾವುದೇ ನಿಯಂತ್ರಣಕ್ಕೆ ಒಳಪಡದ ಇಂಥ ವರ್ಚುವಲ್‌ ಕರೆನ್ಸಿಗಳನ್ನು ತನ್ನ ನಿಯಂತ್ರಣದ ವ್ಯಾಪ್ತಿಗೆ ತರುವ ಸಂಬಂಧ ಮಸೂದೆಯೊಂದನ್ನು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.ಆದರೆ, ಕ್ರಿಪ್ಟೋಕರೆನ್ಸಿ ಕುರಿತ ಆರ್‌ಬಿಐನ ಕಠಿಣ ನಿಲುವುಗಳ ಹೊರತಾಗಿಯೂ, ಅದರ ಮೇಲೆ ಸಂಪೂರ್ಣ ನಿಷೇಧ ಹೇರುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಚೀನಾ ಸೇರಿದಂತೆ ಕೆಲ ದೇಶಗಳು ಕ್ರಿಪ್ಟೋಕರೆನ್ಸಿಗಳ ಮೇಲೆ ಸಂಪೂರ್ಣ ನಿಷೇಧ ಹೇರಿವೆ. ಆದರೆ ಇಂಥ ಪೂರ್ಣ ನಿಷೇಧದ ಬದಲು ಈ ವಿಷಯದಲ್ಲಿ ಸ್ವಲ್ಪ ಸೌಮ್ಯವಾದ ನಿಲುವನ್ನು ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ನವದೆಹಲಿ(ನ.15): ದೇಶಾದ್ಯಂತ ನಾನಾ ಕಾರಣಕ್ಕಾಗಿ ಬಿಟ್‌ಕಾಯಿನ್‌ನಂಥ ಕ್ರಿಪ್ಟೋಕರೆನ್ಸಿಗಳು ಭಾರೀ ಸದ್ದು ಮಾಡುತ್ತಿರುವ ಹೊತ್ತಿನಲ್ಲೇ, ಇದುವರೆಗೂ ಯಾವುದೇ ನಿಯಂತ್ರಣಕ್ಕೆ ಒಳಪಡದ ಇಂಥ ವರ್ಚುವಲ್‌ ಕರೆನ್ಸಿಗಳನ್ನು ತನ್ನ ನಿಯಂತ್ರಣದ ವ್ಯಾಪ್ತಿಗೆ ತರುವ ಸಂಬಂಧ ಮಸೂದೆಯೊಂದನ್ನು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, ಕ್ರಿಪ್ಟೋಕರೆನ್ಸಿ ಕುರಿತ ಆರ್‌ಬಿಐನ ಕಠಿಣ ನಿಲುವುಗಳ ಹೊರತಾಗಿಯೂ, ಅದರ ಮೇಲೆ ಸಂಪೂರ್ಣ ನಿಷೇಧ ಹೇರುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಚೀನಾ ಸೇರಿದಂತೆ ಕೆಲ ದೇಶಗಳು ಕ್ರಿಪ್ಟೋಕರೆನ್ಸಿಗಳ ಮೇಲೆ ಸಂಪೂರ್ಣ ನಿಷೇಧ ಹೇರಿವೆ. ಆದರೆ ಇಂಥ ಪೂರ್ಣ ನಿಷೇಧದ ಬದಲು ಈ ವಿಷಯದಲ್ಲಿ ಸ್ವಲ್ಪ ಸೌಮ್ಯವಾದ ನಿಲುವನ್ನು ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ.